ಡ್ಯಾನ್ಸ್: ಸ್ಟೆಪ್ ಹೋಲ್ಡರ್ಸ್ಗೆ ಚಿನ್ನದ ಪದಕ …
ಶಿವಮೊಗ್ಗ: ನೇಪಾಳದ ಕಠ್ಮಂಡುವಿನಲ್ಲಿ ಇತ್ತೀಚೆಗೆ ನಡೆದ ಅಂತರರಾಷ್ಟ್ರೀಯ ದಕ್ಷಿಣ ಏಷ್ಯಾ ಹಿಪ್ಹಾಪ್ ನೃತ್ಯ ಸ್ಪರ್ಧೆಯಲ್ಲಿ ನಗರದ ನೃತ್ಯ ಸಂಸ್ಥೆಯಾಗಿರುವ ಸ್ಟೆಪ್ ಹೋಲ್ಡರ್ಸ್ನ ೨೧ ನೃತ್ಯ ಪಟುಗಳು ಭಾರತವನ್ನು ಪ್ರತಿನಿಧಿಸಿ ೩೬ ಚಿನ್ನ ಮತ್ತು ೫ ಬೆಳ್ಳಿ ಪದಕ ಪಡೆದಿರುತ್ತಾರೆ.
ಸ್ಟೆಪ್ ಹೋಲ್ಡರ್ಸ್ನ ಹನ್ಸಿ ಯು., ಸಿದ್ಧಾರ್ಥ ಶೆಟ್ಟಿ , ಕೃತಿ, ತಾನ್ವಿ ಕೆ.ಬಿ., ಸಚಿತಾ ಬಿ., ಪ್ರಚೇತ ಎನ್. ಭಟ್, ಪ್ರಥಮ್, ನಿಸರ್ಗ, ಅಕ್ಷಯ್ ಜಿ., ಪಾರ್ಥ ಆರ್., ದಿವಿಜ್ ಸಿ.ಕೆ., ನಿಶ್ಚಿತ ವೈಶಾಕ್ ಕೆ., ಎ. ಶ್ರೇಯಸ್, ಉಮಾಪತಿ ಎಲ್.ಆರ್., ತೇಜಸ್ , ದಿಶಾ ಪಿಂಟೋ, ಆರ್ಯನ್ ಸಚಿನ್, ನಿಯಾ ಐನ ಗವಿಯಸ್, ಮಾನ್ಯ ವಿ., ನಿಧಿ ಸಿ. ನಾಯ್ಕ್, ವಿಶಾಲ್ ಪಿ. ಹೊಸಮನಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಮುಖ್ಯ ತರಬೇತುದಾರ ಅರುಣ್ ರಾಜ್ ಶೆಟ್ಟಿ ಮತ್ತು ತರಬೇತುದಾರ ಕಿರಣ್ ಇಕ್ಕೇರಿ ಭಾಗವಹಿಸಿದ್ದರು.