ಕ್ರೀಡಾ ಮನೋಭಾವದಿಂದ ಚುನಾವಣೆ ಎದುರಿಸೋಣ…
ಶಿವಮೊಗ್ಗ: ಕ್ರೀಡಾಮನೋಭಾವದಿಂದ ಚುನಾವಣೆ ಎದುರಿಸಬೇಕು. ಹಾಗೆಯೇ ಅದು ಫ್ರೆಂಡ್ಲಿ ಫೈಟ್ ಆಗಬೇಕು ಎಂಬುದು ಬಿಜೆಪಿಯ ಅಪೇಕ್ಷೆಯಾಗಿದೆ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿzರೆ.
ಬಿಜೆಪಿ ಜಿ ಕಚೇರಿಯಲ್ಲಿ ವಿವಿಧ ಪಕ್ಷಗಳಿಂದ ಬಿಜೆಪಿಗೆ ಸೇರ್ಪಡೆ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಪಟ್ಟಿ ಬಿಡುಗಡೆಗೆ ವಿಳಂಬ ಯಾಕೆ ಎಂಬ ಪ್ರಶ್ನೆಗೆ ಉತ್ತರಿಸಿ ನಮ್ಮ ಪಕ್ಷದಲ್ಲಿ ಎ ಕಾರ್ಯಕರ್ತರಿಂದ ಮತ್ತು ಪ್ರಮುಖರ ಅಭಿಪ್ರಾಯ ಸಂಗ್ರಹಿಸಿ, ರಾಜ್ಯ ಚುನಾವಣಾ ಸಮಿತಿಯಲ್ಲಿ ಚರ್ಚಿಸಿದ ಬಳಿಕ ಕೇಂದ್ರ ಸಮಿತಿಗೆ ಪಟ್ಟಿ ರವಾನಿಸಲಾಗುವುದು. ಅಲ್ಲಿ ಕೇಂದ್ರ ನಾಯಕರು ಅಂತಿಮ ತೀರ್ಮಾನ ಪ್ರಕಟಿಸುತ್ತಾರೆ. ಪ್ರಜಪ್ರಭುತ್ವದ ರೀತಿಯ ಅಭ್ಯರ್ಥಿಗಳ ಘೋಷಣೆ ಆಗುತ್ತದೆ ಎಂದರು.
ಪಕ್ಷದ ಪರ ಖ್ಯಾತ ನಟ ಸುದೀಪ್ ಪ್ರಚಾರಕ್ಕೆ ಬರುತ್ತಿರುವುದನ್ನು ನಾವೆಲ್ಲರೂ ಸಂತೋಷದಿಂದ ಸ್ವಾಗತಿಸುತ್ತೇವೆ. ಅವರು ಕೂಡ ಪಕ್ಷಕ್ಕೆ ಲಾಭವಾಗುವ ಕೆಲವು ಕ್ಷೇತ್ರಗಳಲ್ಲಿ ಪ್ರಚಾರ ಮಾಡುತ್ತೇನೆ ಎಂದು ಈಗಾಗಲೇ ಘೋಷಿಸಿzರೆ. ಆದರೆ ಕಾಂಗ್ರೆಸ್ನವರು ಸಾಮಾಜಿಕ ಜಲತಾಣಗಳ ಮೂಲಕ ಟೀಕೆ ಮಾಡುತ್ತಿzರೆ. ಒಂದು ವೇಳೆ ಕಾಂಗ್ರೆಸ್ ಪರ ಪ್ರಚಾರಕ್ಕೆ ಹೋಗಿದ್ದರೆ ಅವರು ಇದೇ ರೀತಿ ಟೀಕೆ ಮಾಡುತ್ತಿದ್ದರಾ ಎಂದು ಪ್ರಶ್ನಿಸಿದರು.
ಬಿಜೆಪಿಯ ಪ್ರತಿಯೊಂದು ವಿಚಾರಕ್ಕೂ ಅಪಪ್ರಚಾರ ಮತ್ತು ಟೀಕೆ ಮಾಡುವುದು ಕಾಂಗ್ರೆಸ್ಸಿನ ಗುಣ ಎಂದರು. ಸುದೀಪ್ಗೆ ಬೆದರಿಕೆ ಹಾಕಿದ ವಿಚಾರಕ್ಕೆ ಉತ್ತರಿಸಿದ ಅವರು, ಬೆದರಿಕೆಗಳು ಲೆಕ್ಕಕ್ಕಿಲ್ಲ. ಅದಕ್ಕೆ ಬಗ್ಗುವುದಿಲ್ಲ ಎಂದರು. ರಾಜ್ಯದ ೨೨೪ ಕ್ಷೇತ್ರದ ಕಾರ್ಯರ್ತರು ಸೂಚಿಸಿದ ಅಭ್ಯರ್ಥಿಗಳನ್ನೇ ಕೇಂದ್ರದ ನಾಯಕರು ಆಯ್ಕೆ ಮಾಡುತ್ತಾರೆ ಎಂದ ಅವರು, ಆಯನೂರು ಮಂಜುನಾಥ್ ಟೀಕೆಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ನಾನೊಬ್ಬ ಸಾಮಾನ್ಯ ಕಾರ್ಯಕರ್ತ. ಪಕ್ಷ ಅವಕಾಶ ಕೊಟ್ಟರೆ ಕ್ರೀಡಾ ಮನೋಭಾವದಿಂದ ಚುನಾವಣೆ ಎದುರಿಸುತ್ತೇನೆ ಎಂದರು.
ಬಿಜೆಪಿ ಜಿಧ್ಯಕ್ಷ ಟಿ.ಡಿ. ಮೇಘರಾಜ್ ಮಾತನಾಡಿ, ಬೂತ್ ವಿಜಯ ಅಭಿಯಾನ, ವಿಜಯಸಂಕಲ್ಪ, ಅಭಿಯಾನ, ವಿಜಯ ಸಂಕಲ್ಪ ರಥಯಾತ್ರೆಯನ್ನು ಪಕ್ಷ ಯಶಸ್ವಿಯಾಗಿ ನಡೆಸಿದೆ. ಕೇಂದ್ರ ಸಚಿವರು ಪಕ್ಷದ ವಿಜಯ ಸಂಕಲ್ಪ ರಥಯಾತ್ರೆಯನ್ನು ಶಿವಮೊಗ್ಗದಲ್ಲಿ ನೋಡಿ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ ಎಂದು ಅಭಿಪ್ರಾಯಪಟ್ಟಿzರೆ. ಬೇರೆ ಊರಿನಲ್ಲಿರುವ ಮತದಾರರನ್ನು ಸಂಪರ್ಕಿಸುವುದು, ಮನೆಮನೆಗೆ ತೆರಳಿ ಸಂಪರ್ಕ ಮಾಡುವುದು ಇಂದಿನಿಂದ ಏ.೧೪ರ ಅಂಬೇಡ್ಕರ್ ಜಯಂತಿವರೆಗೆ ಮುಂದುವರಿಯಲಿದೆ. ಈ ಹಿಂದೆ ತೆನೆ ಇಳಿಸಿ, ಪೊರಕೆ ಹಿಡಿದ್ದ ಶಿವಮೊಗ್ಗ ಮಹಾನಗರ ಪಾಲಿಕೆಯ ಮಾಜಿ ಮೇಯರ್ ಏಳುಮಲೈ ತಮ್ಮ ಬೆಂಬಲಿಗರೊಂದಿಗೆ ಬಿಜೆಪಿ ಸೇರ್ಪಡೆಗೊಂಡರು. ಅದೇ ರೀತಿ ಪಾಲಿಕೆ ಮಾಜಿ ಸದಸ್ಯೆ ಗೌರಿ ಶ್ರೀನಾಥ್ ಹಾಗೂ ಕಾಂಗ್ರೆಸ್ನ ಕಾರ್ಯದರ್ಶಿ ಲಿಂಗರಾಜು, ಮಣಿಕಂಠ, ಕುಮಾರ್ ಇನ್ನಿತರರು ಪಕ್ಷಕ್ಕೆ ಸೇರ್ಪಡೆಗೊಂಡಿzರೆ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಸಿದ್ರಾಮಣ್ಣ, ಜ್ಞನೇಶ್ವರ್, ಡಾ. ಧನಂಜಯ ಸರ್ಜಿ, ಕೆ.ಈ. ಕಾಂತೇಶ್, ಜಗದೀಶ್, ಮೋಹನ್ ರೆಡ್ಡಿ, ಶಿವರಾಜ್, ನಾಗರಾಜ್, ಅಣ್ಣಪ್ಪ, ಬಾಲು, ಸಂತೋಷ್ ಬಳ್ಳೇಕೆರೆ ಇದ್ದರು.