ರಸ್ತೆ ಮೇಲೆ ಅಡಿಕೆ ಸಿಪ್ಪೆ ರಾಶಿ; ಉರುಳಿಬಿದ್ದ ಶಾಲಾ ಬಸ್…
ನ್ಯಾಮತಿ : ರಸ್ತೆ ಮಗ್ಗುಲಲ್ಲಿ ಸುರಿಯುತ್ತಿರುವ ಅಡಿಕೆ ಸಿಪ್ಪೆ ರಾಶಿ ಪ್ರಯಾಣಿಕರ ಸುಗಮ ಸಂಚಾರಕ್ಕೆ ಕಂಟಕವಾಗಿ ಪರಿಣಮಿಸಿ ಶಾಲಾ ಬಸ್ಸು ಉರುಳಿ ಬಿದ್ದಿರುವ ಘಟನೆ ನ್ಯಾಮತಿ ತಾಲೂಕಿನ ಬೀಜೋಗಟ್ಟೆ ಗ್ರಾಮದಲ್ಲಿ ನಡೆದಿದೆ.
ನ್ಯಾಮತಿ ತಾಲೂಕಿನ ಚೀಲೂರು ಗ್ರಾಮದ ಖಾಸಗಿ ಶಾಲೆಗೆ ಮಕ್ಕಳನ್ನು ಕೆರೆದುಕೊಂಡು ಹೋಗಲು ಗೋವಿನಕೋವಿ ಗ್ರಾಮದಿಂದ ಬೀಜೋಗಟ್ಟೆ ಗ್ರಾಮಕ್ಕೆ ಬರುವಾಗ ಬುಧವಾರ ೩೦ ವಿದ್ಯಾರ್ಥಿಗಳನ್ನು ಹೋತ್ತಿದ್ದ ಶಾಲಾ ಬಸ್ಸು ಮಂಗಳವಾರ ರಾತ್ರಿ ಸುರಿದ ಮಳೆಯಿಂದಾಗಿ ಹಾಗೂ ರಸ್ತೆಗೆ ಹಾಕಿದ ಅಡಿಕೆ ಸಿಪ್ಪೆಯಿಂದ ಬಸ್ಸು ಉರುಳಿ ಹೊಲಕ್ಕೆ ಬಿದ್ದಿದೆ ಇದರಿಂದ ಶಾಲಾ ಮಕ್ಕಳಿಗೆ ಯಾವುದೇ ಪ್ರಾಣಾಪಾಯವಾ ಗಿಲ್ಲ.ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಅಡಿಕೆ ಬೆಳೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾ ಗುತ್ತಿದೆ. ಆದರೆ, ಕೆಲ ಬೆಳೆಗಾರರು, ವರ್ತಕರು ಅಡಿಕೆಯನ್ನು ಸುಲಿಸಿ ಸಿಪ್ಪೆಯನ್ನು ರಸ್ತೆ ಪಕ್ಕಕ್ಕೆ ತಂದು ಸುರಿಯುತ್ತಿzರೆ. ಇದರಿಂದ ಪ್ರಯಾಣಿಕರು ನಾನಾ ರೀತಿಯ ತೊಂದರೆ ಅನುಭವಿಸುವಂತಾಗಿದೆ. ಹಲವು ವರ್ಷಗಳಿಂದಲೂ ಇಂತ ಹದೇ ಸನ್ನಿವೇಶ ಸೃಷ್ಟಿಯಾಗು ತ್ತಿದ್ದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಜಣ ಮನ ವಹಿಸುತ್ತಿzರೆ ಎನ್ನುವ ಮಾತು ಸಾರ್ವಜನಿಕರಿಂದ ಕೇಳಿಬಂದಿದೆ.
ಹಲವಾರು ಗ್ರಾಮಗಳ ಸುತ್ತಮುತ್ತಲ ರಸ್ತೆಯ ಇಕ್ಕೆಲಗಳಲ್ಲಿ ಕೆಲವರು ಅಡಿಕೆ ಸಿಪ್ಪೆ ಸುರಿದು ಅದಕ್ಕೆ ಬೆಂಕಿ ಹಾಕುವ ಪ್ರವೃತ್ತಿ ಹೆಚ್ಚುತ್ತಿದೆ. ಬೆಳೆಗಾರರು ಅಡಿಕೆ ಸಿಪ್ಪೆಯನ್ನು ಸರಿಯಾಗಿ ವಿಲೇವಾರಿ ಮಾಡದಿರುವುದರಿಂದ ಇಲ್ಲಿ ಸಂಚರಿಸುವ ಪ್ರಯಾಣಿಕರು ನಿತ್ಯ ಹಲವು ಸಮಸ್ಯೆಗಳನ್ನು ಎದುರಿಸು ವಂತಾಗಿದೆ. ಅಡಿಕೆ ಬೆಳೆಗಾರರು ಹಾಗೂ ವರ್ತಕರು ಸಿಪ್ಪೆಯ ಮರುಬಳಕೆಗೆ ಚಿಂತನೆ ನಡೆಸದೆ ರಸ್ತೆಯ ಪಕ್ಕದ ಹಾಕುತ್ತಿರು ವುದರಿಂದ ವಾಹನಗಳು ದಿನಂಪ್ರತಿ ಸಂಚರಿಸಿ ಸಿಪ್ಪೆಯ ರಾಶಿ ರಸ್ತೆಯನ್ನು ಆವರಿಸಿಕೊ ಳ್ಳುತ್ತಿವೆ. ಇದರಿಂದ ವಾಹನಗಳು ನಿಯಂತ್ರಣಕ್ಕೆ ಸಿಗದಂತಾ ಗುತ್ತಿವೆ. ಕೆಲವೊಮ್ಮೆ ರಸ್ತೆಯಲ್ಲಿಯ ಗುಂಡಿಗಳು ಕಾಣಸಿಗದೇ ಸಮಸ್ಯೆಗೆ ಸಿಲುಕುವಂತಾಗಿದೆ. ಇನ್ನು ಸಿಪ್ಪೆಯ ಗುಡ್ಡೆಗಳು ಕೊಳೆತು ನಾರುವುದರ ಕೊಳೆತ ವಾಸನೆ ಕುಡಿದುಕೊಂಡು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ದಟ್ಟ ಹೊಗೆ : ಸಿಪ್ಪೆಗೆ ಬೆಂಕಿ ಹಚ್ಚಿ ಸುಡಲಾಗುತ್ತಿದೆ. ಬೆಂಕಿ ಹಾಕಿದಾಗ ದಟ್ಟ ಹೊಗೆ ಕವಿಯು ವುದರಿಂದ ಹಾಗೂ ವಾಸನೆಯಿಂ ದಾಗಿ ವಾಹನ ಚಾಲಕರು ವಿಚಲಿ ತರಾಗುತ್ತಿzರೆ. ಹೊಗೆಯ ದಟ್ಟಣೆ ಕೆಲವೊಮ್ಮೆ ಅಪಾಯಕ್ಕೂ ಎಡೆಮಾಡಿಕೊಟ್ಟಿದೆ. ಇದೇ ಕಾರಣಕ್ಕೆ ಇತ್ತೀಚೆಗೆ ಅನಾಹುತಗಳು ನಡೆದಿದ್ದು, ಅದೃಷ್ಟವಶಾತ್ ಸಣ್ಣಪುಟ್ಟ ಗಾಯಗಳೊಂದಿಗೆ ಬೈಕ್ ಸವಾರರು ಪಾರಾಗಿzರೆ.