ನ. ೩೦:ಉಜ್ಜಯನಿ ಶ್ರೀಗಳವರಿಂದ ಇಷ್ಟಲಿಂಗ ಮಹಾಪೂಜೆ …
ಶಿವಮೊಗ್ಗ, : ವಿನೋಬನಗರ ಶ್ರೀ ವೀರಶೈವ ಸಮಿತಿ ವತಿಯಿಂದ ನ.೩೦ರಂದು ವಿನೋಬನಗರದ ಮುಖ್ಯ ರಸ್ತೆಯ ಶ್ರೀ ಶಿವಾಲಯ ಆವರಣದಲ್ಲಿ ೫ನೇ ವರ್ಷದ ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರರ ಇಷ್ಟಲಿಂಗ ಮಹಾಪೂಜೆ ಪಂಚಮ ಕಳಸಾರೋಹಣ ವಾರ್ಷಿಕೋತ್ಸವ ಹಾಗೂ ಧರ್ಮ ಜಗೃತಿ ಸಮಾರೋಪ ಆಯೋಜಿಸಿದೆ ಎಂದು ಸಮಿತಿ ಸಹ ಕಾರ್ಯದರ್ಶಿ ಮಹೇಶ್ಮೂರ್ತಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಅಂದು ಬೆಳಿಗ್ಗೆ ೮.೩೦ಕ್ಕೆ ಉಜ್ಜಯಿನಿ ಪೀಠದ ಶ್ರೀ ೧೦೦೮ ಜಗದ್ಗುರು ಸಿದ್ದಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಭಗವತ್ಪಾದರರ ದಿವ್ಯ ಸಾನಿಧ್ಯದಲ್ಲಿ ಇಷ್ಟಲಿಂಗ ಮಹಾಪೂಜೆ ನೆರವೇರಲಿದ್ದು, ಇದರ ನೇತೃತ್ವವನ್ನು ಕವಲೆ ದುರ್ಗದ ಶ್ರೀ ಮರುಳಸಿದ್ದ ಶಿವಾಚಾರ್ಯ ಸ್ವಾಮೀಜಿ, ಬಿಳಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಮಹಾಸ್ವಾಮಿಜಿ, ತಾವರೆಕೆರೆ ಶಿಲಾಮಠದ ಡಾ. ಅಭಿನವ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮೀಜಿ ವಹಿಸಲಿದ್ದು, ಜಿಲ್ಲಾ ವೀರಶೈವ ಜಂಗಮ ಅರ್ಚಕ ಪುರೋಹಿತರ ಕ್ಷೇಮಾಭಿವೃದ್ಧಿ ಸಂಘ ವೈದಿಕತ್ವ ವಹಿಸಲಿದೆ ಎಂದರು.
ಅಂದು ಬೆಳಿಗ್ಗೆ ೧೧.೩೦ಕ್ಕೆ ದೇವಸ್ಥಾನದ ಆವರಣದಲ್ಲಿ ಧರ್ಮ ಜಗೃತಿ ಸಮಾರಂಭವನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನೆರವೇರಿಸುವರು. ವೀರಶೈವ ಸೇವಾ ಸಮಿತಿಯ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಬಿ.ವೈ. ರಾಘವೇಂದ್ರ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಉಪಸ್ಥಿತರಿರುವರು ಎಂದರು.
ಶಾಸಕರಾದ ಎಸ್.ಎನ್. ಚನ್ನಬಸ್ಪಪ, ಬಿ.ವೈ. ವಿಜಯೇಂದ್ರ, ಎಸ್. ರುದ್ರೇಗೌಡ, ಮಾಜಿ ಶಾಸಕ ಆಯನೂರು ಮಂಜುನಾಥ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.
ಅಂದು ಸಂಜೆ ೫.೩೦ಕ್ಕೆ ನಡೆಯುವ ಧರ್ಮ ಜಗೃತಿ ಸಮಾರೋಪ ಸಮಾರಂಭದ ದಿವ್ಯ ಸಾನಿಧ್ಯವನ್ನು ಬೆಕ್ಕಿನಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಬಸವಕೇಂದ್ರ ಡಾ.ಬಸವ ಮರುಳಸಿದ್ದ ಸ್ವಾಮೀಜಿ, ಚಿತ್ರ ನಟ ಯಶವಂತ ಸರ್ ದೇಶಪಾಂಡೆ ಉಪಸ್ಥಿತರಿರುವರು. ಬೆಳಿಗ್ಗೆ ೭ ಗಂಟೆಗೆ ಜೈಲ್ ಕಾಂಪೌಂಡ್ ಆವರಣದ ಶಿವಾಲಯ ಮುಂಭಾಗ ದಿಂದ ಮಹಿಳೆಯರಿಂದ ಪೂರ್ಣ ಕುಂಭ ಸಮೇತ ಗುರುಗಳನ್ನು ರಾಜಬೀದಿ ಉತ್ಸವದೊಂದಿಗೆ ಸ್ವಾಗತಿಸಲಾಗುವುದು ಎಂದರು.
ಅಂದು ಸಂಜೆ ೭ ಗಂಟೆಗೆ ಯಶವಂತ ಸರ್ದೇಶಪಾಂಡೆ ಅವರ ಹೊಸ ನಾಟಕ ಸೂಪರ್ ಸಂಸಾರ ಪ್ರದರ್ಶನಗೊಳ್ಳಲಿದೆ ಎಂದರು.
ಕಾರ್ಯದರ್ಶಿ ಎಸ್.ಮುರುಗೇಶ್ ಕೂಸನೂರು, ಸಹ ಕಾರ್ಯದರ್ಶಿ ಉಮೇಶ್ ಹಿರೇಮಠ್, ಖಜಂಚಿ ಡಾ.ಟಿ.ಎನ್. ಮಂಜಪ್ಪ, ನಿರ್ದೇಶಕ ರಾದ ಚಂದ್ರಯ್ಯ, ಪರಮೇಶ್ವರಪ್ಪ, ಕೆ.ವೀರೇಶ್, ಜೆ.ಎಸ್. ಮಲ್ಲಿಕಾರ್ಜುನ, ಚಂದ್ರೇಗೌಡ, ಎಸ್. ನಾಗರಾಜಯ್ಯ, ಕೆ.ಸಂಪತ್ ಕುಮಾರ್, ಅರ್ಚಕ, ಹೆಚ್.ಎಂ. ರುದ್ರಯ್ಯ ಶಾಸ್ತ್ರಿ, ಇದ್ದರು.