ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ನ.೩೦: ವಿಶ್ವ ಮಾನವ ಕನಕದಾಸರ ಜಯಂತಿ…

Share Below Link

ಶಿವಮೊಗ್ಗ, : ಜಿಲ್ಲಾ ಕುರುಬರ ಸಂಘ, ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನ.೩೦ರಂದು ಬೆಳಿಗ್ಗೆ ೧೧ ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ವಿಶ್ವ ಮಾನವ ಶ್ರೀ ಕನಕದಾಸರ ಜಯಂತಿಯನ್ನು ಆಚರಿಸಲಾಗುವುದು ಎಂದು ಕುರುಬ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್ ಅವರು ಸುದ್ದಿಗೋಷ್ಟಿಯಲ್ಲಿ ಹೇಳಿದರು.


ಕನಕದಾಸರು ಈ ನಾಡಿನ ಅತ್ಯಂತ ಶ್ರೇಷ್ಠ ದಾಸ ಪರಂಪರೆಯನ್ನು ಹೊಂದಿ ದ್ದವರು. ಭಕ್ತಿ ಪಂಥದ ಮೂಲಕ ಮತ್ತು ಸಾಹಿತ್ಯದ ಮೂಲಕ ಸಮಾಜದ ಕಣ್ಣು ತೆರೆಸಿದವರು. ಅವರ ಕೃತಿಗಳು ಇಂದಿಗೂ ವರ್ತಮಾನ ತಲ್ಲಣಗಳನ್ನು ಹೇಳುತ್ತದೆ. ಅವರು ಸಮಾಜ ಸುಧಾರಕರು ಹೌದು. ಅವರು ಕೇವಲ ಒಂದು ಜತಿಗೆ ಸಿಮೀತವಾಗಿಲ್ಲ. ಎಲ್ಲಾ ವರ್ಗದ ಶೋಷಿತರ ಪರವಾಗಿ ಧ್ವನಿ ಎತ್ತಿದವರು. ಇಂತಹವರ ಜಯಂತಿಯನ್ನು ಸರ್ಕಾರದ ಸಹಕಾರ ದಲ್ಲಿ ಆಚರಿಸಲಾಗುತ್ತಿದೆ ಎಂದರು.
ಅಂದು ಬೆಳಿಗ್ಗೆ ೧೧ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮವಿದ್ದು, ಅದಕ್ಕೂ ಮುಂಚೆ ೯.೩೦ಕ್ಕೆ ಶಿವಪ್ಪನಾಯಕ ಪ್ರತಿಮೆಯಿಂದ ಮೆರವಣಿಗೆ ಆಯೋಜಿಸಲಾಗಿದೆ. ಈ ಮೆರವಣಿಗೆ ಯಲ್ಲಿ ಕಲಾ ತಂಡಗಳು, ಸಮಾಜದ ಗಣ್ಯರು ಭಾಗವಹಿಸಲಿದ್ದಾರೆ. ಸಾರ್ವಜನಿಕರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಳಬೇಕು ಎಂದರು.
ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಉದ್ಘಾಟಿಸಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ.ಸುಧಾಕರ್, ಸಂಸದ ಬಿ.ವೈ.ರಾಘವೇಂದ್ರ ಹಾಗೂ ಜಿಲ್ಲೆಯ ಎಲ್ಲಾ ಶಾಸಕರು ಭಾಗವಹಿಸಲಿದ್ದು, ಶಿವಮೊಗ್ಗ ಕ್ಷೇತ್ರದ ಶಾಸಕ ಎಸ್.ಎನ್.ಚನ್ನಬಸಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ನಿವೃತ ಕನ್ನಡ ಉಪನ್ಯಾಸಕ ಕೆ.ಭಾಸ್ಕರ್ ವಿಶೇಷ ಉಪನ್ಯಾಸ ನೀಡಲಿದ್ದು, ಕಾರ್ಯಕ್ರಮದ ನಂತರ ಕನಕದಾಸರ ಜೀವನ ಚರಿತ್ರೆ ಕುರಿತು ದತ್ತಮೂರ್ತಿ ಭಟ್ ತಂಡದಿಂದ ಯಕ್ಷಗಾನ ಆಯೋಜಿಸಲಾಗಿದೆ ಎಂದರು.
ಕುರುಬ ಸಂಘದ ಪದಾಧಿಕಾರಿ ಗಳಾದ ಎಸ್.ಕೆ.ಮರಿಯಪ್ಪ, ಕೆ. ರಂಗನಾಥ್, ಪಾಲಾಕ್ಷಿ, ಮಾಲತೇಶ್, ಇಕ್ಕೇರಿ ರಮೇಶ್, ಶರತ್ ಮರಿಯಪ್ಪ, ರಾಮಕೃಷ್ಣ, ಮೋಹನ್, ಲೋಕೇಶ್, ರಾಘವೇಂದ್ರ ಇನ್ನಿತರರಿದ್ದರು.