ನ.28ರ ನಾಳೆ ಪ್ಲೇಸ್ಮೆಂಟ್ ಡ್ರೈವ್…
ಶಿವಮೊಗ್ಗ: ದೇಶದ ಪ್ರತಿಷ್ಠಿತ ಐಸಿಐಸಿಐ ಬ್ಯಾಂಕ್ ಮತ್ತು ಟಿವಿಎಸ್ ಟ್ರೈನಿಂಗ್ ಅಂಡ್ ಸರ್ವೀಸಸ್ ವತಿಯಿಂದ ನ.೨೮ರ ಮಂಗಳವಾರ ಬೆಳಿಗ್ಗೆ ರಿಲೇಷನ್ಶಿಪ್ ಮ್ಯಾನೇಜರ್ (ಸೀನಿಯರ್ ಗ್ರೇಡ್) ಹುದ್ದೆಗೆ ಪ್ಲೇಸ್ಮೆಂಟ್ ಡ್ರೈವ್ ೨೦೨೩ಯನ್ನು ಬಾಪೂಜಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಮತ್ತು ಪಿಜಿ ಸೆಂಟರ್ನಲ್ಲಿ ಹಮ್ಮಿಕೊಳ್ಳಲಾಗಿದೆ.
ಶೇ.೫೦ ಅಂಕದೊಂದಿಗೆ ಎಸ್ಎಸ್ಎಲ್ಸಿ, ಪಿಯುಸಿ ಮತ್ತು ಪದವಿ ವಿದ್ಯಾರ್ಹತೆಹೊಂದಿರುವ ೨೫ವರ್ಷದೊಳಗಿನ ಯುವಕ/ ಯುವತಿಯರು ಈ ಪ್ಲೇಸ್ಮೆಂಟ್ ಡ್ರೈವ್ನಲ್ಲಿ ಪಾಲ್ಗೊಳ್ಳಬಹುದಾಗಿದ್ದು, ಬಿಇ/ಬಿಟೆಕ್ ಮತ್ತು ಎಂಬಿಎ ಪದವೀಧರರಿಗೆ ಅವಕಾಶವಿರುವುದಿಲ್ಲ.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಮೊ: ೮೯೨೫೯೦೧೭೪೭ಗೆ ಸಂಪರ್ಕಿಸಲು ಆಯೋಜಕರು ಕೋರಿದ್ದಾರೆ.