ಗುರುಪುರದ ಬಿಜಿಎಸ್ ಗೋಶಾಲೆಯಲ್ಲಿ ಗೋಪೂಜೆ
ಶಿವಮೊಗ್ಗ: ಶ್ರೀ ಆದಿಚುಂಚನ ಗಿರಿ ಮಹಾಸಂಸ್ಥಾನ ಮಠದ ಶಾಖೆ ಯಾದ ಗುರುಪುರದ ಬಿಜಿಎಸ್ ಆಂಗ್ಲ ಮಾಧ್ಯಮ ಶಾಲೆಯ ಆವ ರಣದಲ್ಲಿರುವ ಪುರಾತನ ಕಾಲದ ಶ್ರೀ ವೀರ ಸೋಮೇಶ್ವರ ದೇವ ಸ್ಥಾನದ ಸನ್ನಿಧಿಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಗೋಪೂಜೆ ಹಮ್ಮಿಕೊಂಡಿದ್ದು, ಶ್ರೀ ಆದಿ ಚುಂಚನಗಿರಿ ಮಹಾ ಸಂಸಾರ ಮಠದ ಪ್ರಧಾನ ಕಾರ್ಯದರ್ಶಿ ಗಳಾದ ಪೂಜ್ಯ ಶ್ರೀ ಶ್ರೀ ಪ್ರಸನ್ನ ನಾಥ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ನ. ೧೪ರಂದು ಮಂಗಳವಾರ ಬೆಳಿಗ್ಗೆ ೧೦.೩೦ ಕ್ಕೆ ಗೋ ಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಶ್ರೀ ವೀರಸೋಮೇಶ್ವರ ದೇವ ಸ್ಥಾನದಲ್ಲಿ ವಿಶೇಷವಾಗಿ ದೇವ ಸ್ಥಾನದ ಆವರಣದಲ್ಲಿ ಬಾಳೆ ಕಂದು,ಮಾವಿನ ತೋರಣಗಳಿಂದ ಅಲಂಕರಿಸಿ, ಗೋಶಾಲೆಯ ಎ ಗೋವುಗಳನ್ನು ದೇವಸ್ಥಾನದ ಆವರಣಕ್ಕೆ ಕರೆತಂದು ಗೋವುಗ ಳನ್ನು ವಿವಿಧ ರೀತಿಯಲ್ಲಿ ಅಲಂ ಕಾರ ಮಾಡಿ ಅಂದು ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯ ವರಿಂದ ಗೋವುಗಳ ಪೂಜೆಯನ್ನು ಮಾಡಿ ವಿವಿಧ ದವಸ – ಧಾನ್ಯ ಗಳನ್ನು ವಿತರಿಸಲಾಗುತ್ತದೆ.
ಅಂದು ದೇವಸ್ಥಾನದಲ್ಲಿ ವಿಶೇಷವಾದ ಅಲಂಕಾರ, ಪಂಚಾ ಮೃತ ಅಭಿಷೇಕ,ಪೂಜ ವಿಧಿ ವಿಧಾನಗಳನ್ನು ಮಾಡಲಾಗುತ್ತದೆ.
ಭಕ್ತಾದಿಗಳು ಹೆಚ್ಚಿನ ಸಂಖ್ಯೆ ಯಲ್ಲಿ ಆಗಮಿಸಿ ಶ್ರೀ ವೀರ ಸೋಮೇಶ್ವರ ಕೃಪೆಗೆ ಪಾತ್ರರಾಗ ಬೇಕಾಗಿ ಶಿವಮೊಗ್ಗ ಶಾಖಾ ಮಠವು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದೆ.