ಎಂಎಲ್ಸಿ ರುದ್ರೇಗೌಡರಿಗೆ ಸನ್ಮಾನ…
ಶಿವಮೊಗ್ಗ: ಕೈಗಾರಿಕಾ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿ ಕೈಗಾರಿಕಾ ರತ್ನ ಪ್ರಶಸ್ತಿ ಪುರಸ್ಕೃತ ಭಾಜನರಾದ ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ ಅವರಿಗೆ ಮಾಚೇನಹಳ್ಳಿ ಕೈಗಾರಿಕಾ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಕೈಗಾರಿಕಾ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಉದ್ಯೋಗ ಸೃಷ್ಠಿಸಿ ಸಾವಿರಾರು ಕುಟುಂಬ ಗಳಿಗೆ ಉದ್ಯೋಗ ನೀಡಿರುವ ಎಸ್.ರುದ್ರೇಗೌಡರು ಸಮಾಜ ಮುಖಿಯಾಗಿಯೂ ಸೇವೆ ಸಲ್ಲಿಸುತ್ತಿzರೆ. ನೂರಾರು ಯುವ ಸಾಧಕರಿಗೆ ಸ್ಫೂರ್ತಿಯಾಗಿzರೆ.
ಇತ್ತೀಚೆಗೆ ಎಫ್ಕೆಸಿಸಿಐ ವತಯಿಂದ ಕೈಗಾರಿಕಾ ವಲಯ ದಲ್ಲಿ ನೀಡಲಾಗುವುದು ವಿಶೇಷ ಪುರಸ್ಕಾರ ಕೈಗಾರಿಕಾ ರತ್ನ ಪ್ರಶಸ್ತಿ ಪುರಸ್ಕೃತರಾಗಿ ಸನ್ಮಾನಿತರಾಗಿ zರೆ. ಕೈಗಾರಿಕಾ ಕ್ಷೇತ್ರದ ಸೇವೆ ಗುರುತಿಸಿ ಪ್ರಶಸ್ತಿ ನೀಡಲಾಗಿದೆ. ಎಸ್.ರುದ್ರೇಗೌಡ ಅವರಿಗೆ ಮಾಚೇನಹಳ್ಳಿ ಕೈಗಾರಿಕಾ ಸಂಸ್ಥೆ ವತಿಯಿಂದ ಅಭಿನಂದಿಸಲಾ ಯಿತು.
ಮಾಚೇನಹಳ್ಳಿ ಕೈಗಾರಿಕಾ ಸಂಸ್ಥೆ ಅಧ್ಯಕ್ಷ ರಮೇಶ್ ಹೆಗಡೆ ಮಾತನಾಡಿ, ವಿಧಾನ ಪರಿಷತ್ ಸದಸ್ಯ ಎಸ್..ರುದ್ರೇಗೌಡರು ಕೈಗಾರಿಕಾ ಕ್ಷೇತ್ರದಲ್ಲಿ ಕೆಲಸ ನಿರ್ವ ಹಿಸುತ್ತಿರುವ ಹೊಸ ಉದ್ಯಮಿ ಗಳಿಗೆ ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ಆದರ್ಶವಾಗಿ zರೆ. ಕೈಗಾರಿಕಾ ಉದ್ಯಮಿಗಳಿಗೆ ಅಗತ್ಯ ಸಹಕಾರ ನಿರಂತರ ಆಗಿರಬೇಕು ಎಂದು ತಿಳಿಸಿದರು.
ಮಾಚೇನಹಳ್ಳಿ ಕೈಗಾರಿಕಾ ಸಂಸ್ಥೆಯ ಪದಾಧಿಕಾರಿಗಳು ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡ ಅವರಿಗೆ ಆತ್ಮೀಯ ವಾಗಿ ಅಭಿನಂದಿಸಿದರು. ಸಂಸ್ಥೆಯ ಖಜಂಚಿ ಅಶೋಕ್ ಡಿ.ಬಿ., ಉಪಾಧ್ಯಕ್ಷ ಡಿ.ಜಿ.ಬೆನಕಪ್ಪ, ಅಜಿತ್ ಹೆಗಡೆ, ಶಿವಮೊಗ್ಗ ಜಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯ್ಕುಮಾರ್ ಮತ್ತಿ ತರರು ಉಪಸ್ಥಿತರಿದ್ದರು.