ಕಾಂತರಾಜ ವರದಿ ಜರಿಗೆ ಆಗ್ರಹಿಸಿ ನ.೨೦ರಂದು ಬೃಹತ್ ಧರಣಿ ಸತ್ಯಾಗ್ರಹ-ಹಕ್ಕೊತ್ತಾಯ
ಶಿವಮೊಗ್ಗ: ಕಾಂತರಾಜ ಆಯೋಗದ ವರದಿ ಜರಿಗೆ ಆಗ್ರಹಿಸಿ ನ.೨೦ರಂದು ಬೃಹತ್ ಧರಣಿ ಸತ್ಯಾಗ್ರಹ-ಹಕ್ಕೊತ್ತಾಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಹಿಂದುಳಿದ ಜನ ಜಗೃತಿ ವೇದಿಕೆ, ಜಿ ಹಿಂದುಳಿದ ಜತಿ ಗಳ ಒಕ್ಕೂಟ ಹಾಗೂ ಜಿ ಹಿಂದುಳಿದ ಮತ್ತು ಅತಿ ಹಿಂದು ಳಿದ ಜನಜಗೃತಿ ವೇದಿಕೆ ಸಮ್ಮುಖ ದಲ್ಲಿ ನಿನ್ನೆ ಸಂಜೆ ಜರುಗಿದ ಪೂರ್ವ ಭಾವಿ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಯಿತು.
ನ.೨೦ರಂದು ಬೆಳಿಗ್ಗೆ ಜಿಧಿಕಾರಿಗಳ ಕಚೇರಿ ಎದುರು ಜಿಯ ವಿವಿಧೆಡೆಗಳಿಂದ ಬಂದು ಸೇರುವ ಸಹಸ್ರಾರು ಜನರು ಧರಣಿಯಲ್ಲಿ ಪಾಲ್ಗೊಂಡು ಕಾಂತರಾಜ ಆಯೋ ಗದ ವರದಿ ಜರಿಗಾಗಿ ಒತ್ತಾಯಿಸಿ ಡಿಸಿ ಮೂಲಕ ಸಿಎಂಗೆ ಮನವಿಪತ್ರ ಸಲ್ಲಿಸುವರು.ಜಿಯ ಹಿಂದುಳಿದ ಜತಿ- ವರ್ಗಗಳಿಗೆ ಸೇರಿದ ಎಲ್ಲ ಜತಿಗಳ ಜನರು ಒಗ್ಗಟ್ಟಾಗಿ ಅಂದು ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ನಿರ್ಣಾಯಕವಾದ ಈ ಹೋರಾ ಟವನ್ನು ಯಶಸ್ಸಿನ ಹಂತಕ್ಕೆ ಕೊಂಡೊಯ್ಯಬೇಕೆಂದು ಸಭೆ ಹಿಂದುಳಿದ ಸಮಾಜ ಬಾಂಧವ ರಲ್ಲಿ ಮನವಿ ಮಾಡಿತು.
ಸಭೆಯಲ್ಲಿ ಸಮಾಜವಾದಿ ನಾಯಕ ಹಾಗೂ ರೈತ ಸಂಘದ ಮುಖಂಡ ಕೆ.ಟಿ. ಗಂಗಾಧರ್ ಹಿಂದುಳಿದ ಜನ ಜಗೃತಿ ವೇದಿಕೆ ಗೌರವ ಅಧ್ಯಕ್ಷ ಪ್ರೊ. ಹೆಚ್. ರಾಚಪ್ಪ ಉಪಾಧ್ಯಕ್ಷರಾದ ಪ್ರೊ. ಉಮೇಶ್ ಯಾದವ್ ಪ್ರೊ. ಪ್ರಭಾ ಕರ್ ಕಾರ್ಯದರ್ಶಿ ಮನೋಹರ ಕುಮಾರ್ ಸಂಚಾಲಕ ಬಿ. ಜನ ಮೇಜಿರಾವ್ ಸಂಘಟನಾ ಕಾರ್ಯ ದರ್ಶಿ ಚನ್ನವೀರಪ್ಪ ಗಾಮನಗಟ್ಟಿ ಜಿ ಹಿಂದುಳಿದ ಜತಿಗಳ ಒಕ್ಕೂ ಟದ ಅಧ್ಯಕ್ಷ ವಿ. ರಾಜು ಕಾರ್ಯ ದರ್ಶಿ ಎಸ್.ಬಿ. ಅಶೋಕ್ ಕುಮಾರ್ ಜಿ.ಎಂ. ವಿಜಯಕು ಮಾರ್ ಜಿ ಹಿಂದುಳಿದ ಮತ್ತು ಅತಿ ಹಿಂದುಳಿದ ಜನಜಗೃತಿ ವೇದಿಕೆ ಸಂಚಾಲಕ ಆರ್. ಮೋಹ ನ್ ಇತರರು ಉಪಸ್ಥಿತರಿದ್ದರು.
ಆರಂಭದಲ್ಲಿ ಸಂಚಾಲಕ ಆರ್.ಟಿ. ನಟರಾಜ್ ಸ್ವಾಗತಿಸಿ, ವಿಪ್ರಸ್ತಾಪಿಸಿದರು., ಅಧ್ಯಕ್ಷತೆಯ ನ್ನು ವಿ.ಪ.ಮಾಜಿ ಸದಸ್ಯ ಆರ್.ಕೆ. ಸಿದ್ದರಾಮಣ್ಣ ವಹಿಸಿದ್ದರು ಚನ್ನ ವೀರಪ್ಪ ವಂದಿಸಿದರು.