ಕನ್ನಡಿಗರು ಎಲ್ಲಾ ಭಾಷಿಕರಿಗೆ ಆಶ್ರಯ-ಅನ್ನ-ಬದುಕು ನೀಡಿದವರು: ಷಣ್ಮುಖಯ್ಯ
ಹೊನ್ನಾಳಿ: ಕನ್ನಡ ಹೃದಯದ ಭಾಷೆಯಾಗಲಿ ಎಂದು ಪ್ರಾಂಶುಪಾಲ ಡಾ. ಬಿ.ಜಿ. ಧನಂಜಯ ಕರೆ ನೀಡಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೊನ್ನಾಳಿಯ ಆಂತರಿಕ ಗುಣಮಟ್ಟ ಭರವಸಾ ಕೋಶ, ಯುವ ರೆಡ್ ಕ್ರಾಸ್ ಘಟಕ, ಎಚ್. ದೇವಿರಪ್ಪ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಕನ್ನಡ ವಿಭಾಗ ಮತ್ತು ಹೊನ್ನುಡಿ ಕನ್ನಡ ವೇದಿಕೆ ಹೊನ್ನಾಳಿಯ ಸುವರ್ಣ ಕರ್ನಾಟಕ ಸಂಭ್ರಮಾಚರಣೆ-೨೦೨೩-೨೪ ಹೊನ್ನಾಳಿ ತಾಲ್ಲೂಕಿನ ಗ್ರಾಪಂ ಹಾಗೂ ಪಂಚಾಯಿತಿ ವ್ಯಾಪ್ತಿಯ ಶಾಲಾ ಕಾಲೇಜುಗಳ ಸಹಯೋಗ ದೊಂದಿಗೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನ್ನಡಿಗರನ್ನು ಭಾವನಾತ್ಮಕವಾಗಿ ಒಗ್ಗೂಡುವಂತೆ ಮಾಡಿದ್ದು ಕರ್ನಾಟಕ ಏಕೀಕರಣ ಚಳುವಳಿ. ನಮ್ಮ ಹಿರಿಯ ಸಾಹಿತಿಗಳ ಒಗ್ಗಟ್ಟಿನ ಹೃದಯದ ಫಲವಾಗಿ ೧೯೫೬ ನ.೧ನೇ ತಾರಿಖು ಕನ್ನಡಿಗರಿಗೆ ಪ್ರಾಂತ್ಯವಾರು ಏಕೀಕರಣವಾಯಿತು.
ಕರ್ನಾಟಕ ಎಂಬ ಹೆಸರು ನಾನಾ ರೂಪಗಳಲ್ಲಿ ಸಾವಿರಾರು ವರ್ಷಗಳಿಂದ ಉಖವಿದ್ದರೂ, ಈ ರಾಜ್ಯಕ್ಕೆ ಮೈಸೂರು ಎಂಬ ಹೆಸರನ್ನೇ ಇಡಲಾಗಿತ್ತು. ಕರ್ನಾಟಕ ನಾಮಕರಣವಾಗಿ ಇಂದಿಗೆ ೫೦ ವರ್ಷ. ಕನ್ನಡಿಗರು ಹೃದಯ ಶ್ರೀಮಂತಿಕೆ ಹೊಂದಿವರು, ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟವರು. ಹಾಗಾಗಿ ಎ ಭಾಷೆ, ಸಾಹಿತ್ಯ ಸಂಸ್ಸೃತಿಯನ್ನು ಪ್ರೀತಿಸುತ್ತಾರೆ. ಕನ್ನಡ ಕೇವಲ ಭಾಷೆಯಲ್ಲ, ಅದೊಂದು ವಿಶಿಷ್ಟ ಸಾಹಿತ್ಯ ಸಂಸ್ಕೃತಿ. ೨೦೦೦ ವರ್ಷಗಳ ಇತಿಹಾಸವಿರುವ ಭಾಷೆ ಕನ್ನಡ. ಅದಕ್ಕಾಗಿ ಕನ್ನಡವನ್ನು ಲಿಪಿಗಳ ರಾಣಿ ಎಂದು ಕರೆಯುತ್ತಾರೆ ಎಂದರು.
ಹೊನ್ನುಡಿ ಕನ್ನಡ ವೇದಿಕೆ ಅಧ್ಯಕ್ಷ ಎಂ.ಪಿ.ಎಂ. ಷಣ್ಮುಖಯ್ಯ ಮಾತನಾಡಿ, ಅತಿ ಹೆಚ್ಚು eನಪೀಠ ಗೌರವ ಕನ್ನಡಕ್ಕೆ ದೊರೆತಿರುವುದು ಹೆಮ್ಮೆ, ರಾಷ್ಟಕವಿ ಕುವೆಂಪು, ಜಿ.ಎಸ್. ಶಿವರುದ್ರಪ್ಪ, ದ.ರಾ. ಬೇಂದ್ರೆ, ಡಿ.ವಿ. ಗುಂಡಪ್ಪನವರ ಸಾಹಿತ್ಯ ಸೇವೆ ಉತ್ಕೃಷ್ಟವಾದದ್ದು. ಕನ್ನಡಿಗರು ಎಲ್ಲ ಭಾಷೆಯ ಜನರಿಗೆ ಅಶ್ರಯ ಅನ್ನ ಮತ್ತು ಬದುಕು ನೀಡಿzರೆ ಎಂದರು.
ಹೊನ್ನುಡಿ ಕನ್ನಡ ವೇದಿಕೆ ಯ ಉಪಾಧ್ಯಾಕ್ಷ ಕೆ. ರುದ್ರಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಗ್ರಂಥಪಾಲಕರು ಮತ್ತು ಯುವ ರೆಡ್ ಕ್ರಾಸ್ ಘಟಕದ ಸಂಚಾಲಕ ಪ್ರೊ. ನಾಗರಾಜ ನಾಯ್ಕ ಎಂ. ಸ್ವಾಗತಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಧನಂಜಯ ಮೂರ್ತಿ ನಿರೂಪಿಸಿದರು. ಉಪನ್ಯಾಸಕ ಸಂಜು ಕೆ.ಎಸ್. ವಂದಿಸಿದರು. ಸಹಾಯಕ ಪ್ರಾಧ್ಯಾಪಕ ಪ್ರೊ. ಬೆಳ್ಳುಳ್ಳಿ ಕೊಟ್ರೇಶ, ಕನ್ನಡ ವಿಭಾಗದ ಉಪನ್ಯಾಸಕ ಡಾ. ಪ್ರಶಾಂತ ಕುಮಾರ ಶರ್ಮಾ, ಡಾ. ವಾಗೀಶ, ಅಶೋಕ ಮತ್ತು ಹೊನ್ನುಡಿ ಕನ್ನಡ ವೇದಿಕೆ ಸದಸ್ಯಗಳಾದ ಎಂ.ಎಸ್. ರೇವಣಪ್ಪ, ಪಿ.ಎಂ. ಸಿದ್ದಯ್ಯ, ಧನರಾಜ್ ಹನಗವಾಡಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.