ಜನಮನಗೆದ್ದ ಕಿಯಾ ಕಾರ್ ಶೋರೂಂ ಜಾನ್ಸಿ ಆಟೋಮೊಟೀವ್ಗೆ ೩ವರ್ಷದ ಸಂಭ್ರಮ…
ಶಿವಮೊಗ್ಗ: ನಗರದ ಹೊರವಲಯದ ಬೈಪಾಸ್ ರಸ್ತೆಯಲ್ಲಿರುವ ಮಲೆನಾಡಿನ ಪ್ರತಿಷ್ಠಿತ ಹಾಗೂ ವಿಶ್ವದರ್ಜೆಯ ಕಿಯಾ ಕಾರುಗಳ ಶೋರೂಂ ಜಾನ್ಸಿ ಆಟೋಮೊಟೀವ್ ಪ್ರೈವೇಟ್ ಲಿಮಿಟೆಡ್ ಈಗ ೩ನೇ ವಾರ್ಷಿಕೋತ್ಸವದ ಸಂಭ್ರಮಾಚರಣೆ ಮಾಡುತ್ತಿದೆ.
ಶೋ ರೂಂಗೆ ಬರುವ ಪ್ರತಿಯೊಬ್ಬ ಗ್ರಾಹಕರಿಗೆ ಸದಾ ನಗುಮೊಗದ ಸೇವೆ ನೀಡುವ ಮೂಲಕ ಈ ಸಂಸ್ಥೆಯು ಮಲೆನಾಡಿಗರ ಮೆಚ್ಚುಗೆಗೆ ಪಾತ್ರವಾಗಿದೆ.
ವಿಶ್ವದರ್ಜೆಯ ಕಾರುಗಳ ಮಾರಾಟದಲ್ಲಿ ಶಿವಮೊಗ್ಗ ಹಾಗೂ ಸುತ್ತಮುತ್ತಲಿನ ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಮೂಲಕ ಯಶಸ್ವಿಯಾಗಿ ಮುನ್ನಡೆತ್ತಿರುವ ಜಾನ್ಸಿ ಆಟೋಮೊಟೀವ್ ಸಂಸ್ಥೆಯು ತನ್ನ ಈ ಯಶಸ್ಸಿಗೆ ಸಹಕರಿಸಿದ ಎಲ್ಲಾ ಗ್ರಾಹಕರಿಗೆ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸಿದೆ.
ಶಿವಮೊಗ್ಗ ನಗರದ ಹೊರವಲಯದ ಬೈಪಾಸ್ ರಸ್ತೆಯ ಊರಗಡೂರು ಬಡಾವಣೆಯಲ್ಲಿರುವ ಈ ಕಾರ್ ಶೋ ರೂಂನ ಜನರಲ್ ಮ್ಯಾನೇಜರ್ ಸುಹಾಸ್ ಅವರು ಸಂಸ್ಥೆಯ ಸಿಬ್ಬಂದಿಗಳ ಪರವಾಗಿ ಸಂಸ್ಥೆಯ ಯಶಸ್ವೀ ಪ್ರಯಾಣಕ್ಕೆ ಸಹಕರಿಸಿದ ಎಲ್ಲಾ ಗ್ರಾಹಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.