ಜಿಲ್ಲಾ ಸುದ್ದಿತಾಜಾ ಸುದ್ದಿ

ನ.೧೪: ೭೦ ನೇ ಅಖಿಲ ಭಾರತ ಸಹಕಾರ ಸಪ್ತಾಹ

Share Below Link

ಶಿವಮೊಗ್ಗ:ಬರ ಮತ್ತು ಹಬ್ಬಗಳ ನಡುವೆ ಸಹಕಾರ ಸಪ್ತಾಹದ ಹಬ್ಬವನ್ನು ಅತ್ಯಂತ ಸಂಭ್ರಮ, ಸಡಗರ ಹಾಗೂ ಸರಳತೆಯಿಂದ ಜಿಯಲ್ಲಿ ಆಚರಿಸಲು ಸಿದ್ಧತೆ ನಡೆಸಲಾಗಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ಇಂದಿಲ್ಲಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ರಾಜ್ಯಮಟ್ಟದಲ್ಲಿ ೭೦ನೇ ಅಖಿಲ ಭಾರತ ಸಹಕಾರ ಸಪ್ತಾಹ ಆಚರಿಸಲಾಗುವುದು. ಇದರ ಉದ್ಘಾಟನೆ ಕಾರ್ಯಕ್ರಮ ಶಿವಮೊಗ್ಗದಿಂದಲೇ ಆರಂಭವಾಗ ಲಿದ್ದು, ನ.೧೪ರಿಂದ ೨೦ರವರೆಗೆ ಶಿವಮೊಗ್ಗವೂ ಸೇರಿದಂತೆ ವಿವಿಧ ಕಡೆಗಳಲ್ಲಿ ಆಚರಿಸಲಾಗುವುದು ಎಂದರು.


ಜಿ ಸಹಕಾರ ಯೂನಿ ಯನ್ ನೇತೃತ್ವದಲ್ಲಿ ನ.೧೪ರಂದು ರಾಜ್ಯಮಟ್ಟದ ೭೦ನೇ ಸಹಕಾರ ಸಪ್ತಾಹ ಉದ್ಘಾಟನಾ ಸಮಾ ರಂಭವು ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ನಡೆಯ ಲಿದ್ದು, ಸಹಕಾರ ಸಚಿವ ಕೆ.ಎನ್. ರಾಜಣ್ಣ ಉದ್ಘಾಟಿಸಲಿzರೆ. ಜಿ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳಲಿzರೆ ಎಂದರು.
ರಾಜ್ಯ ಸಹಕಾರ ಮಹಾ ಮಂಡಳಿ ಅಧ್ಯಕ್ಷ ಶಾಸಕ ಜಿ.ಟಿ. ದೇವೇಗೌಡರು ಅಧ್ಯಕ್ಷತೆ ವಹಿಸಲಿ zರೆ. ಬರ ಪರಿಸ್ಥಿತಿ ಇರುವುದ ರಿಂದ ಸರಳವಾಗಿ ಸಪ್ತಾಹದ ಉದ್ಘಾಟನಾ ಸಮಾರಂಭ ನಡೆಯ ಲಿದ್ದು, ಜಿಯ ಎ ಸಹಕಾರ ಸಂಸ್ಥೆಗಳು, ಬ್ಯಾಂಕ್‌ಗಳಲ್ಲಿ ಅರ್ಥ ಪೂರ್ಣವಾಗಿ ಅಚರಿಸಲಿವೆ. ಆರು ದಿನಗಳ ಕಾಲ ರಾಜ್ಯದ ಬೇರೆ ಬೇರೆ ಜಿಗಳಲ್ಲಿ ಸಹಕಾರ ಸಪ್ತಾಹ ನಡೆ ಯಲಿದ್ದು, ಸಮಾರೋಪ ಸಮಾ ರಂಭವು ವಿಜಯಪುರದಲ್ಲಿ ನಡೆ ಯಲಿದೆ ಎಂದು ವಿವರಿಸಿದರು.
ಭಾರತದ ಮೊದಲ ಪ್ರಧಾನ ಮಂತ್ರಿ ಜವಾಹರ್‌ಲಾಲ್ ನೆಹರು ಅವರ ೫ನೇ ಪಂಚವಾರ್ಷಿಕ ಯೋಜನೆಯಂತೆ ಸಹಕಾರ ಕ್ಷೇತ್ರದ ಮೂಲಕ ಆರ್ಥಿಕ ಅಭಿವೃದ್ಧಿ ಮತ್ತು ಸರ್ವ ಜನರ ಆರ್ಥಿಕ ಪರಿಸ್ಥಿತಿಗೆ ಬೆನ್ನೆಲುಬಾಗಿ ನಿಂತಿದ್ದು, ಸಹಕಾರ ಚಳವಳಿ ದೇಶದ ಆರ್ಥಿ ಕತೆ ಮಹತ್ತರ ಕೊಡುಗೆಯನ್ನೆ ನೀಡಿದೆ. ಮೋದಿ ಮತ್ತು ಅಮಿತ್ ಷ ಕೂಡ ಸಹಕಾರಿಗಳಾಗಿದ್ದು, ಕೇಂದ್ರ ಸರ್ಕಾರ ಹೊಂದಿರುವ ಗುರಿಯಂತೆ ೫ ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಧನೆಯಲ್ಲಿ ಸಹಕಾರ ಕ್ಷೇತ್ರದ ಪಾತ್ರವೂ ಮುಖ್ಯವಾಗಿದೆ. ಅದಕ್ಕೆ ಪೂರಕ ವಾಗಿ ಸಹಕಾರ ಕ್ಷೇತ್ರ ಚಟುವಟಿಕೆ ಗಳನ್ನು ನಡೆಸಬೇಕಾಗಿದೆ. ಈ ಹಿನ್ನೆ ಲೆಯಲ್ಲಿ ಸಹಕಾರ ಸಪ್ತಾಹದಲ್ಲಿ ವಿವಿಧ ವಿಚಾರಗಳ ವಿಚಾರ ಸಂಕಿರಣಗಳ ಮೂಲಕ ಸಾಧನೆಯ ದಾರಿಯನ್ನು ಕಂಡುಕೊಳ್ಳಲಾಗು ವುದು ಎಂದರು.
ದೇಶಾದ್ಯಂತ ಏಕಕಾಲದ ನಡೆಯಲಿರುವ ೭೦ನೇ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ಆರು ದಿನಗಳ ಕಾಲ ಸಹಕಾರ ಸಂಘ-ಸಂಸ್ಥೆಗಳಲ್ಲಿ ಇತ್ತೀಚಿನ ಬೆಳವಣಿಗೆ, ಸಾಲೇತರ ಸಹಕಾರ ಸಂಘಗಳ ಪುನಶ್ಚೇತನ ಹಾಗೂ ಆರ್ಥಿಕ ಸೇರ್ಪಡೆ, ಸಹಕಾರ ಸಂಸ್ಥೆಗಳನ್ನು ಡಿಜಿಟಲೀಕರಣಗೊ ಳಿಸುವ ತಾಂತ್ರಿಕತೆಯ ಅಳವಡಿಕೆ ಮತ್ತು ಉನ್ನತೀಕರಣ, ಸಹಕಾರ ಸಂಸ್ಥೆಗಳಲ್ಲಿ ಸರಳ ವ್ಯಾಪಾರ ಮತ್ತು ಉದಯೋನ್ಮುಖ ವಲಯಗಳು, ಸಾರ್ವಜನಿಕ-ಖಾಸಗಿ-ಸಹಕಾರಿ ಸಹಭಾಗಿತ್ವ ಬಲಪಡಿಸುವುದು, ಮಹಿಳೆಯರು, ಯುವಜನ ಮತ್ತು ಅಬಲ ವರ್ಗಕ್ಕೆ ಸಹಕಾರ ಸಂಸ್ಥೆಗಳು, ಮತ್ತು ಸಹಕಾರ ಶಿಕ್ಷಣ, ತರಬೇತಿಯ ಪರಿಷರಣೆ ವಿಷಯಗಳ ಕುರಿತು ವಿಚಾರ ಸಂಕಿ ರಣಗಳು ನಡೆಯಲಿವೆ ಎಂದರು.
ಸುದ್ದಿಗೋಷ್ಟಿಯಲ್ಲಿ ಜಿ ಸಹಕಾರ ಯೂನಿಯನ್ ಅಧ್ಯಕ್ಷ ರತ್ನಾಕರ್, ಉಪಾಧ್ಯಕ್ಷೆ ಮಮತಾ ಚಂದ್ರಕುಮಾರ್, ಶಿಮುಲ್ ಅಧ್ಯಕ್ಷ ಶ್ರೀಪಾದ ರಾವ್ ನಿಸ್ರಾಣಿ, ಸಹಕಾರಿ ಮುಖಂಡರಾದ ಹೆಚ್. ಎಲ್. ಷಡಾಕ್ಷರಿ, ಎಸ್.ಕೆ. ಮರಿಯಪ್ಪ, ಯೋಗೀಶ್, ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.