ಸತತ ನಾಲ್ಕನೇ ಬಾರಿಗೆ ವಲಯಮಟ್ಟದ ಚಾಂಪಿಯನ್ ಪಟ್ಟ
ಶಿವಮೊಗ್ಗ: ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ರೋಟರಿ ವಲಯ ೧೦ ಮತ್ತು ೧೧ರ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಶಿವಮೊಗ್ಗ ನಗರದ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯು ಸತತ ನಾಲ್ಕನೇ ಬಾರಿಗೆ ವಲಯ ಮಟ್ಟದ ಚಾಂಪಿಯನ್ ಪಟ್ಟ ಅಲಂಕರಿಸಿತು. ಇದೀಗ ಜಿ ಮಟ್ಟಕ್ಕೆ ಆಯ್ಕೆಯಾಗಿದೆ.
ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯು ಭಾವಗೀತೆ ಪ್ರಥಮ, ಸೋಲೊ ಡ್ಯಾನ್ಸ್ ಪ್ರಥಮ, ಯುಗಳ ಗೀತೆ ಪ್ರಥಮ, ಸೊಲೊ ಸಾಂಗ್ ಚಿತ್ರಗೀತೆಯಲ್ಲಿ ದ್ವಿತೀಯ, ಗ್ರೂಪ್ ಸಾಂಗ್ ದ್ವಿತೀಯ, ಗ್ರೂಪ್ ಡ್ಯಾನ್ಸ್ ದ್ವಿತೀಯ ಸ್ಥಾನ ಪಡೆದು ಪ್ರಶಸ್ತಿ ಪತ್ರ, ಪಾರಿತೋಷಕ ಸ್ವೀಕರಿಸಿತು. ಕುಂದಾಪುರದಲ್ಲಿ ನಡೆಯುವ ಜಿ ಮಟ್ಟಕ್ಕೆ ಭಾಗವಹಿಸಲು ಅರ್ಹತೆ ಪಡೆದಿದೆ.
ಇದೇ ಸಂದರ್ಭದಲ್ಲಿ ಜಿ ಮಾಜಿ ಗವರ್ನರ್ ಪ್ರೊ. ಎ.ಎಸ್. ಚಂದ್ರಶೇಖರ್ ಮಾತನಾಡಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲ ಸದಸ್ಯರನ್ನು ಒಂದುಗೂಡಿಸಲು ಹಾಗೂ ಪ್ರತಿಭಾ ಪ್ರದರ್ಶನ ಅನಾವರಣಕ್ಕೆ ಸಹಕಾರಿಯಾಗು ತ್ತದೆ. ಇಂತಹ ಕಾರ್ಯಕ್ರಮ ಆಯೋಜನೆ ಶ್ಲಾಘನೀಯ. ಸ್ಪರ್ಧೆ ಗಳಲ್ಲಿ ಎಲ್ಲ ಸದಸ್ಯರು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಸಲಹೆ ನೀಡಿದರು.
ರೋಟರಿ ಶಿವಮೊಗ್ಗ ಸೆಂಟ್ರಲ್ ಕ್ಲಬ್ ದ್ವಿತೀಯ ಸ್ಥಾನ ಪಡೆದುಕೊಂಡಿತು. ವಲಯ ತರಬೇತುದಾರ ಡಾ. ಗುಡದಪ್ಪ ಕಸಬಿ, ಆನಂದಮೂರ್ತಿ, ಕೆ.ಪಿ. ಶೆಟ್ಟಿ, ಸಹಾಯಕ ಗವರ್ನರ್ ರವಿ ಕೋಟೋಜಿ, ರಾಜೇಂದ್ರ ಪ್ರಸಾದ್, ರೀವರ್ ಸೈಡ್ ಅಧ್ಯಕ್ಷ ಎಸ್.ಮಂಜುನಾಥ್, ಕಾರ್ಯದರ್ಶಿ ಮಂಜುನಾಥ ಉಪಸ್ಥಿತರಿದ್ದರು.
ಪ್ರಮುಖರಾದ ಜಗನ್ನಾಥ್, ಧನರಾಜ್, ಮಂಜುನಾಥ್ ಕದಂ, ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್ ಕುಮಾರ್, ಧರ್ಮೇಂದ್ರ ಸಿಂಗ್, ಕೆ.ಪಿ.ಚಂದ್ರಪ್ಪ, ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಸತೀಶ್ ಚಂದ್ರ, ಕಾರ್ಯದರ್ಶಿ ಕಿಶೋರ್ ಕುಮಾರ್, ವಸಂತ್ ಹೋಬಳಿ ದಾರ್, ಎಸ್.ಪಿ.ಶಂಕರ್, ಡಾ. ರವಿಕಿರಣ್, ವಿಜಯ್ಕುಮರ್ ಸಿ.ಕೆ., ೧೧ ರೋಟರಿ ಕ್ಲಬ್ಗಳ ಸದಸ್ಯರು, ಇನ್ನರ್ವ್ಹೀಲ್ ಸದಸ್ಯರು ಉಪಸ್ಥಿತರಿದ್ದರು.