ಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿ

ವಾಹನ ಸಹಿತ ಅಕ್ರಮ ಮದ್ಯ ವಶಕ್ಕೆ ;ಆರೋಪಿ ಪರಾರಿ…

Share Below Link

ಹೊಸನಗರ : ರಾಜ್ಯ ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜದ್ಯಂತ ಅಬಕಾರಿ ಇಲಾಖೆ ಹದ್ದಿನ ಕಣ್ಣಿಟ್ಟಿದ್ದು ತಾಲೂಕಿನ ನಿವಣೆ ಬಳಿ ಅಬಕಾರಿ ಅಧಿಕಾರಿಗಳು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವಾಹನ ಸಮೇತ ಲಕ್ಷಾಂತರ ರೂಪಾಯಿ ಮಲ್ಯದ ಮದ್ಯವನ್ನು ವಶಕ್ಕೆ ತೆಗೆದು ಕೊಂಡಿದ್ದು ಆರೋಪಿ ಪರಾರಿ ಯಾಗಿzನೆ.
ನಿವಣೆ ಗ್ರಾಮದ ಅಗಸನಗz ಸಮೀಪ ಅಕ್ರಮವಾಗಿ ಓಮ್ನಿ ವಾಹನದಲ್ಲಿ ಸುಮಾರು ೧೯೮.೭೨ ಲೀಟರ್ ಮದ್ಯವನ್ನು ಸಾಗಾಟ ನಡೆಸುತ್ತಿದ್ದು ಖಚಿತ ಮಾಹಿತಿಯ ಮೇರೆಗೆ ತೀರ್ಥಹಳ್ಳಿಯ ಅಬಕಾರಿ ನಿರೀಕ್ಷಕರಾದ ಅಮಿತ್‌ಕುಮಾರ್ ರವರ ನೇತೃತ್ವದಲ್ಲಿ ಅಕ್ರಮ ಮದ್ಯ ಹಾಗೂ ಓಮ್ನಿ ವಾಹನವನ್ನು ವಶಪಡಿಸಿಕೊಂಡಿzರೆ. ಓಮ್ನಿ ಡ್ರೈವರ್ ಪರಾರಿಯಾದ ಘಟನೆ ವರದಿಯಾಗಿದೆ.
ವಿಧಾನಸಭಾ ಚುನಾವಣೆ ನೀತಿಸಂಹಿತೆ ಜರಿಯಲ್ಲಿರುವ ಹಿನ್ನಲೆಯಲ್ಲಿ ರವಿಶಂಕರ್ ಅಬ ಕಾರಿ ಆಯುಕ್ತರು ಬೆಂಗಳೂರು ರವರ ನಿರ್ದೇಶನದಲ್ಲಿ ಅಬಕಾರಿ ಜಂಟಿ ಆಯುಕ್ತ ಮಂಗಳೂರು ವಿಭಾಗದ ನಾಗರಾಜಪ್ಪ ಟಿ, ಶಿವಮೊಗ್ಗ ಜಿಧಿಕಾರಿ ಸೆಲ್ವಮಣಿ ಆರ್ ಮತ್ತು ಜಿ ದಂಡಾಧಿಕಾರಿಗಳು ಅಬಕಾರಿ ಉಪ ಆಯು ಕ್ತರಾದ ಕ್ಯಾಪ್ಟನ್ ಅಜಿತ್‌ಕುಮಾರ್ ಅಬಕಾರಿ ಉಪ ಅಧೀಕ್ಷಕರಾದ ಶಿವಪ್ರಸಾದ್ ಹಾಗೂ ತಹಶೀ ಲ್ದಾರ್ ಅಮೃತ್ ಆತ್ರೇಶ್‌ರವರ ಮಾರ್ಗದರ್ಶನದಲ್ಲಿ ಖಚಿತ ವರ್ತಮಾನದ ಮೇರೆಗೆ ಏಪ್ರಿಲ್ ೪ನೇ ಮಂಗಳವಾರ ಬೆಳಿಗ್ಗೆ ಕೆಎ-೩೦ ಎಂ ೦೫೬೩ ನೊಂದಣಿ ಸಂಖ್ಯೆ ಹೊಂದಿದ ಮಾರುತಿ ಸುಜುಕಿ ಓಮ್ನಿಯಲ್ಲಿ ಅಕ್ರಮವಾಗಿ ಸಾಗಿಸು ತ್ತಿದ್ದ ೮೧,೦೨೦ ರೂಪಾಯಿ ಬೆಲೆ ಬಾಳುವ ಭಾರತೀಯ ತಯಾರಿಕಾ ಮದ್ಯ ೧೯೮.೭೨ ಲೀ. ದೊರೆತಿದ್ದು ಪ್ಲೆಯಿಂಗ್ ಸ್ಟ್ಯಾಂಡ್-೦೭ಸಿ ಹುಂಚ ಹೋಬಳಿ ತಂಡದ ಮುಖ್ಯಸ್ಥರು ಮತ್ತು ಸದಸ್ಯರ ಸಹಕಾರದೊಂದಿಗೆ ವಾಹನ ಮತ್ತು ವಾಹನದ ಮಾಲೀಕರ ವಿರುದ್ಧ ಕರ್ನಾಟಕ ಅಬಕಾರಿ ಕಾಯ್ದೆಯಡಿ ಅಮಿತ್‌ಕುಮಾರ್ ಎಸ್.ಎಂ ಅಬಕಾರಿ ನಿರೀಕ್ಷಕರು ತೀರ್ಥಹಳ್ಳಿ ಉಪವಿಭಾಗರವರು ಮೊಕದ್ದಮೆ ಯನ್ನು ದಾಖಲಿಸಿzರೆ.
ವಶಪಡಿಸಿಕೊಂಡಿರುವ ಮದ್ಯ ಮತ್ತು ವಾಹನ ಒಟ್ಟು ಮಲ್ಯ ೩,೩೧,೦೨೦ ರೂ. ಆಗಿದ್ದು ದಾಳಿ ಯಲ್ಲಿ ಅಬಕಾರಿ ಕಾನ್ಸ್‌ಟೇಬಲ್ ಮಲ್ಲಿಕ್ ಕೆ.ಜಿ, ರಾಕೇಶ್ ಎಂ.ಕೆ, ಶಕೀಲ್ ಅಹಮದ್, ವಾಹನ ಚಾಲಕ ಅಮಿತ್ ಬಿ.ಕೆ ಮತ್ತು ಪ್ರಸನ್ನರವರು ಪಾಲ್ಗೊಂಡಿದ್ದರು.