ಜಿಲ್ಲಾ ಸುದ್ದಿತಾಜಾ ಸುದ್ದಿ

ನಟ ದೊಡ್ಡಣ್ಣರಿಗೆ ವಿಐಎಸ್‌ಎಲ್ ಭಾವನಾತ್ಮಕ ಸಂಬಂಧ ಇಲ್ಲ : ಸುರೇಶ್ ಆರೋಪ

Share Below Link

ಭದ್ರಾವತಿ: ವಿಐಎಸ್‌ಎಲ್ ಕಾರ್ಖಾನೆ ಶತಮಾನೋತ್ಸವ ಆಚರಣೆ ನೆಪದಲ್ಲಿ ಕಾರ್ಖಾನೆಯ ಹೆಸರು ಹಾಗು ಸರ್ಕಾರದ ಹೆಸರನ್ನು ದುರುಪಯೋಗ ಮಾಡುತ್ತಿರು ವುದು ಖಂಡನೀಯ. ಇದಲ್ಲದೆ ಈ ಕಾರ್ಯಕ್ರಮದ ನೆಪದಲ್ಲಿ ಕಾರ್ಖಾನೆಯ ಮಾಜಿ ಉದ್ಯೋಗಿ ಹಾಗು ಚಲನ ಚಿತ್ರ ನಟ ದೊಡ್ಡಣ್ಣ ರಾಜಕಾರಣಿಗಳು, ಉzಮೆದಾರರು, ರಿಯಲ್ ಎಸ್ಟೇಟ್ ಸೇರಿದಂತೆ ಇತರರಿಂದ ಹಣ ಸಂಗ್ರಹ ಮಾಡಿ ಲೂಟಿ ಮಾಡುತ್ತಿzರೆ ಎಂದು ವಿಐಎಸ್‌ಎಲ್ ಉಳಿಸಿ ಭದ್ರಾವತಿ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಸುರೇಶ್ ನೇರವಾಗಿ ಗಂಭೀರ ಆರೋಪಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾರ್ಖಾನೆಯ ಪ್ರಾರಂಭೋತ್ಸವದ ಶತಮಾನೋತ್ಸವ ಕಾರ್ಯಕ್ರಮದ ಬಗ್ಗೆ ಹಲವಾರು ಆರೋಪಗಳನ್ನು ಮಾಡಿದರು.


ಕಾರ್ಖಾನೆಯು ಕಳೆದ ಕೆಲ ವರ್ಷಗಳಿಂದ ತ್ರೀವ ಸಂಕಷ್ಟ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಗಣಿ ಮಂಜೂರಾತಿ, ಅಭಿವೃದ್ಧಿ ಹಾಗು ಆಧುನೀಕರಣಗಳ ಬಗ್ಗೆ, ಗುತ್ತಿಗೆ ಕಾರ್ಮಿಕರ ಕೆಲಸ ಬಗ್ಗೆ ಎಂದೂ ಚಕಾರ ಎತ್ತಿಲ್ಲ. ಅಲ್ಲದೆ ಈಗ ಕಾರ್ಖಾನೆ ಮುಚ್ಚುವ ಬಗ್ಗೆ ಆದೇಶ ಬಂದಿದೆ ಎಂಬ ಬಗ್ಗೆ ದಟ್ಟವಾದ ಮಾಹಿತಿ ಇದೆ. ಇಂತಹ ಸಂದರ್ಭ ದಲ್ಲಿ ದೊಡ್ಡಣ್ಣ ಈಗ ಏಕಾ ಏಕಿ ಕಾರ್ಖಾನೆಯ ಶತಮಾನೋತ್ಸವ ಸಮಾರಂಭವನ್ನು ಅದ್ದೂರಿಯಾಗಿ ಮಾಡುತ್ತಿರುವ ಹಿನ್ನಲೆ ಏನು ಎಂದು ಪ್ರಶ್ನಿಸಿ, ಇದು ಕೇವಲ ಸಂಭ್ರಮಾಚರಣೆ ನೆಪದಲ್ಲಿ ಹಣ ಮಾಡುವುದಾಗಿದೆ ಎಂದು ಆರೋಪಿಸಿದರು. ಅವರಿಗೆ ವಿಐಎಸ್‌ಎಲ್ ಕಾರ್ಖಾನೆ ಬಗ್ಗೆ ವಾಣಿಜ್ಯ ಹಾಗು ವ್ಯವಹಾರಿಕ ಸಂಬಂಧ ಇದೆ ಹೊರತು ಭಾವನಾತ್ಮಕ ಸಂಭಂಧ ಇಲ್ಲ ಎಂದು ಲೇವಡಿ ಮಾಡಿದರು.
ಕಾರ್ಯಕ್ರಮವನ್ನು ಆಯೋಜಿಸುವ ಮೊದಲು ನಗರದ ಸಂಘ ಸಂಸ್ಥೆಗಳ ವಿಶ್ವಾಸ, ಅಭಿಪ್ರಾಯ, ಪಾಲ್ಗೊಳ್ಳುವಿಕೆ ಇಲ್ಲದೆ, ಕಾರ್ಖಾನೆಯ ಅಧಿಕಾರಿಗಳು, ಕಾರ್ಮಿಕರು, ಗುತ್ತಿಗೆ ಕಾರ್ಮಿಕರು ಪಾಲ್ಗೊಳ್ಳದೆ ಕೇವಲ ತಮ್ಮ ಮೂಗಿನ ನೇರಕ್ಕೆ ಏಕ ಪಕ್ಷೀಯವಾಗಿ ಮಾಡುತ್ತಿzರೆ. ಇದರಿಂದ ಅವರೆ ಇಲ್ಲಿ ಇದ್ದು ಬೆಂಗಳೂರಿಗೆ ಹೋಗಿ ಚಿತ್ರ ರಂಗದಲ್ಲಿ ಖ್ಯಾತಿ ಗಳಿಸಿ ಈಗ ನಮ್ಮ ಊರಿಗೆ ಕೆಟ್ಟ ಹೆಸರು ತರುತ್ತಿzರೆ ಎಂದು ಆರೋಪಿಸಿದರು.
ಎಲ್ಲದಕ್ಕಿಂತ ಬಹು ಮುಖ್ಯವಾಗಿ ಈ ಸಮಾರಂಭಕ್ಕೆ ಹಣಕಾಸು ಖರ್ಚು ವೆಚ್ಚ ಹೇಗೆ ಮಾಡಿಕೊಂಡಿzರೆ, ಯಾವ ಯಾವ ಬಾಬ್ತುಗಳಿಗೆ ಎಷ್ಟು ಖರ್ಚು ಮಾಡುತ್ತಿzರೆ ಎಂಬ ಬಗ್ಗೆ ಯಾವುದೆ ತರಹದ ಮಾಹಿತಿ ಇಲ್ಲ. ಬಿಲ್ಡರ್‌ಗಳು, ಉದ್ದಿಮೆದಾರರು, ರಿಯಲ್ ಎಸ್ಟೇಟ್ ಏಜಂಟರು, ಅಬಕಾರಿ ಗುತ್ತಿಗೆದಾರರು ಸೇರಿ ದಂತೆ ಇತರರರಿಂದ ಹಣ ಸಂಗ್ರಹಣೆ ಮಾಡಿzರೆ. ಆಹ್ವಾನ ಪತ್ರಿಕೆಯಲ್ಲಿ ನಗರದ ಶಾಸಕರು ಹಾಗು ಜಿಯ ಸಂಸದರ ಹೆಸರನ್ನು ಹೊರತು ಪಡಿಸಿ ಬೇರೆ ಯಾರ ಹೆಸರುಗಳು ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಖಾನೆಯಲ್ಲಿ ಕೆಲಸ ಮಾಡಿದ ಹಿರಿಯ ಕಾರ್ಮಿಕರು, ಸಂಘದ ಅಧ್ಯಕ್ಷರು, ಕಾರ್ಮಿಕ ಮುಖಂಡರುಗಳು, ಹೋರಾಟ ಗಾರರು, ಸಂಘದ ಪದಾಧಿಕಾರಿಗಳು, ವಿವಿಧ ರಾಜಕೀಯ ಪಕ್ಷಗಳು, ಮಹಿಳಾ ಸಂಘಟನೆ ಗಳು, ರೈತ ಸಂಘಟನೆಗಳು, ಧಾರ್ಮಿಕ ಸಂಘಟನೆಗಳು ಸೇರಿದಂತೆ ಇತರ ಯಾರ ಹೆಸರೂ ಮುದ್ರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಲಿತ ಸಂಘಟನೆಯ ಸತ್ಯ ಅವರು ಮಾತನಾಡಿ, ನಮ್ಮೂರಿನವರಾದ ಚಲನ ಚಿತ್ರ ನಟ ದೊಡ್ಡಣ್ಣ ನವರ ಬಗ್ಗೆ ನಮಗೆ ಗೌರವ ಅಭಿಮಾನ ಹಾಗು ಹೆಮ್ಮೆ ಇದೆ. ಆದರೆ ಅವರು ಕಾರ್ಖಾನೆಯ ಮಾಜಿ ಉದ್ಯೋಗಿಯಾಗಿ ಕಾರ್ಖಾನೆಗೆ ಅವರ ಕೊಡುಗೆ ಏನಿದೆ ಎಂದು ಪ್ರಶ್ನಿಸಿದರು.
ಒಂದು ರೀತಿಯಲ್ಲಿ ಸತ್ತ ವ್ಯಕ್ತಿಯನ್ನು ಮರೆತು ಈಗ ಅವರ ಹುಟ್ಟು ಹಬ್ಬವನ್ನು ಅದ್ದರೂರಿಯಾಗಿ ಅಚರಣೆ ಮಾಡಿದ ಹಾಗೆ ಆಗಿದೆ. ಅದೇ ರೀತಿ ಮುಚ್ಚುತ್ತಿರುವ ಕಾರ್ಖಾನೆಗೆ ಶತಮಾನೋತ್ಸವ ಆಚರಣೆ ಮಾಡುತ್ತಿರುವುದು ಹಾಸ್ಯಾಸ್ಪದ ಸಂಗತಿಯಾಗಿದೆ ಎಂದು ಚೇಡಿಸಿದರು.
ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಮಾತನಾಡಿ, ಈ ಕಾರ್ಯಕ್ರಮದ ಬಗ್ಗೆ ಆಹ್ವಾನ ಪತ್ರಿಕೆಯಲ್ಲಿ ಹೆಸರಿರುವ ಮೈಸೂರಿನ ಮಹಾರಾಜರು, ಸ್ವಾಮಿಗಳವರು, ಮಂತ್ರಿಗಳು, ಸಂಸದರು, ಶಾಸಕರು, ಗಣ್ಯರುಗಳು, ಉದ್ದಿಮೆದಾರರು, ಬಿಲ್ಸರ್‍ಸ್, ಆಬಕಾರಿ ಗುತ್ತಿಗೆದಾರರು ಸೇರಿದಂತೆ ಇವರೆಲ್ಲರಿಗೆ ಕಾರ್ಯಕ್ರಮ ನಡೆಯುತ್ತಿರುವ ಹಿನ್ನಲೆ ತಿಳಿಸಿದ್ದು, ಯಾರೂ ಭಾಗವಹಿಸಬಾರದು ಬಹಿಷ್ಕರಿಸಿ ಎಂದು ಮನವಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಈ ಕಾರ್ಯಕ್ರಮ ಒಂದು ರೀತಿಯಲ್ಲಿ ಈವೆಂಟ್ ಮ್ಯಾನೇಜ್‌ಮೆಂಟ್ ಕಾರ್ಯಕ್ರಮದ ರೀತಿಯಲ್ಲಿದೆ. ಕಾರ್ಯಕ್ರಮದ ಹೆಸರಿನಲ್ಲಿ ಹಣ ಎತ್ತುವಳಿ ಮಾಡುವುದು, ಕಾರ್ಯಕ್ರಮವನ್ನು ನಡೆಸುವವರಿಗೆ ಗುತ್ತಿಗೆ ನೀಡುವುದು, ಕೆಲವರಿಗೆ ಸನ್ಮಾನ ಮಾಡಿ ಹಾರ ತುರಾಯಿ ಆರ್ಪಿಸುವುದು ಹಾಗು ಭಾಗವಹಿಸಿದವರಿಗೆ ಊಟ ಹಾಕಿ ಉಳಿದ ಹಣ ಸ್ವಾಹಃ ಮಾಡುವು ದಾಗಿದೆ ಎಂದು ಆರೋಪಿಸಿದರು. ಹಾಗಾಗಿ ಈ ಕಾರ್ಯಕ್ರವನ್ನು ನಗರದ ಜನತೆ ಬಹಿಷ್ಕರಿಸಬೇಕು ಎಂದು ಕರೆ ನೀಡಿದರು.
ನಗರಸಭೆ ಮಾಜಿ ಸದಸ್ಯ ಮಹೇಶ, ಪಾಸ್ಟರ್ ಭಾಸ್ಕರ್ ಬಾಬು, ಪ್ರೇಮ ಕುಮಾರ್, ದೇವು, ವೆಂಕಟೇಶ್, ಚಂದ್ರಶೇಖರ್ ಇತರರು ಪತ್ರಿಕಾ ಗೋಷ್ಟಿಯಲ್ಲಿ ಹಾಜರಿದ್ದರು.