ಮಳೆ ಬೆಳೆ ಹಾಗೂ ರೋಗಗಳಿಂದ ರಕ್ಷಣೆಗಾಗಿ ದುರ್ಗಾದೇವಿಗೆ ಗ್ರಾಮ್ಥರಿಂದ ವಿಶೇಷ ಪೂಜೆ
ಕುಕನೂರು: ಸಮೃದ್ಧ ಮಳೆ ಬೆಳೆ ಜೊತೆಗೆ ರೈತರ ಬದುಕು ಹಸನಾಗಲಿ ಎಂಬ ಉದ್ದೇಶದಿಂದ ಗಾಳಿ ದುರ್ಗಾದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.
ತಾಲೂಕಿನ ಮಂಡಲಗಿರಿ ಗ್ರಾಮದ ಗಾಳಿ ದುರ್ಗಾದೇವಿ ದೇವಸ್ಥಾನದಲ್ಲಿ ಪ್ರತಿ ಸಿಗಿ ಹುಣ್ಣಿಮೆಯ ದಿನದಂದು ಸಮೃದ್ಧ ಮಳೆ ಬೆಳೆ ಹಾಗೂ ಮಹಾಮಾರಿ ರೋಗಗಳಿಂದ ಜಗತ್ತನ್ನು ಕಾಯುವ ದೃಷ್ಟಿಯಿಂದ ವಿಶೇಷ ಪೂಜೆ ಜರುಗಿಸುತ್ತಿದ್ದು ಈ ವರ್ಷವೂ ಸಹ ಬಹುತೇಕ ಪ್ರದೇಶಗಳಲ್ಲಿ ಮಳೆಯ ಕೊರತೆ ಎದ್ದು ಕಾಣುತ್ತಿದ್ದು ಉತ್ತಮ ಮಳೆಯಾಗುವುದರೊಂದಿಗೆ ಒಳ್ಳೆಯ ಬೆಳೆ ಬಂದು ರೈತರ ಜೀವನ ಹಸನ್ಮುಖಿಯಾಗಲೆಂದು ಪ್ರಾರ್ಥಿಸಿ ದೇವಸ್ಥಾನದಲ್ಲಿ ವಿಶೇಷ ಪೂಜೆಯೊಂದಿಗೆ ಅನ್ನದಾಸೋಹದ ಮಹಾಪ್ರಸಾದ ವ್ಯವಸ್ಥೆಯನ್ನು ಆಯೋಜನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಬೆಳಗಿನ ಜವದಿಂದ ಜರುಗಿದ ಪೂಜ ಕಾರ್ಯದಲ್ಲಿ ಪಾಲ್ಗೊಂಡು ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿ ಶ್ರೀ ದುರ್ಗಾದೇವಿಯ ಕೃಪೆಗೆ ಪಾತ್ರರಾದರು. ಸಹಸ್ರಾರು ಜನಭಕ್ತರು ದೇವಿಯ ಪೂಜ ಕಾರ್ಯದಲ್ಲಿ ಪಾಲ್ಗೊಂಡು ತಮ್ಮ ಹರಕೆ ಇಷ್ಟಾರ್ಥಗಳನ್ನು ಈಡೇರಿಸಿ,ಪ್ರಸಾದ ಸೇವಿಸಿ ದೇವಿ ಕೃಪೆಗೆ ಪಾತ್ರರಾದರು.
ಪ್ರಮುಖರಾದ ಮಲ್ಲಯ್ಯ ಗದುಗಿನ, ಜಯಪ್ರಕಾಶ ಗೌಡ ಪೊಲೀಸ್ ಪಾಟೀಲ, ವೀರನಗೌಡ ತೋಟಗಂಟಿ, ಹನುಮಂತಪ್ಪ ಕೊನಾರಿ, ರಾಚಯ್ಯ ಗದುಗಿನ, ಶಿವನಗೌಡ ಬಿನ್ನಾಳ, ವೆಂಕಟೇಶ ಇಳಿಗೆರ, ದೇವೇಂದ್ರಪ್ಪ ದಳವಾಯಿ, ಈಶ್ವರಯ್ಯ ಚಂದ್ರಗಿರಿ, ಮುಸ್ತಫ ಬಾಗಲಿ, ವಿಶ್ವನಾಥ ಹಿರೇಗೌಡರ, ಗವಿಸಿದ್ದಪ್ಪ ಅಂಗಡಿ, ನಾಗಪ್ಪ ಕವಲೂರ, ದೇವಪ್ಪ ದಳವಾಯಿ, ಸಂಚಾಳಪ್ಪ ಸಂಗಟಿ, ಬಸನಗೌಡ ಬಿನ್ನಾಳ, ಮಾರುತಿ ಗೊಲ್ಲರ, ಇನ್ನಿತರರು ಪಾಲ್ಗೊಂಡಿದ್ದರು.