ಗೋಬರ್ ಗ್ಯಾಸ್ ಘಟಕಗಳ ಮಹತ್ವ ಮತ್ತು ಘಟಕ ರಚನೆ ಮಾಡುವ ಕುರಿತು ತರಬೇತಿ ಕಾರ್ಯಗಾರ
ಸೊರಬ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಸೊರಬ ವತಿಯಿಂದ ಧರ್ಮಾಧಿಕರಿ ಡಿ. ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ, ಭವಿಷದ ಹಸಿರು ಇಂಧನ ಕಾರ್ಯಕ್ರಮ ದಡಿಯಲ್ಲಿ ಗೋಬರ್ ಗ್ಯಾಸ್ (ಜೈವಿಕ ಅನಿಲ) ಘಟಕಗಳ ಮಹತ್ವ ಮತ್ತು ಘಟಕ ರಚನೆ ಮಾಡುವ ಕುರಿತು ತರಬೇತಿ ಕಾರ್ಯಗಾರ ನಡೆಯಿತು.
ಪಟ್ಟಣದ ಶ್ರೀ ಕ್ಷೇತ್ರ ಧರ್ಮ ಸ್ಥಳ ಗ್ರಾಮಾಭಿವೃದ್ಧಿ ಯೋಜ ನೆಯ ಕಚೇರಿಯಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿದ ತಾಲ್ಲೂಕು ಯೋಜನಾಧಿಕಾರಿ ಸುಬ್ರಾಯ ನಾಯ್ಕ ಮಾತನಾಡಿ ಹಸಿರು ಇಂಧನ ಘಟಕಗಳಾದ ಸೋಲಾರ್, ಗೋಬರ್ ಗ್ಯಾಸ್ ಘಟಕಗಳ ಮಹತ್ವ ಕುರಿತು ಮಾತ ನಾಡಿ ವಿಶ್ವದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಅಭಾವ ಮತ್ತು ಅದರ ಬೆಲೆ ಗಗನಕ್ಕೇರುತ್ತಿರುವುದರಿಂದ ದೇಶದಲ್ಲಿ ಇಂಧನ ಕೊರತೆ ತೀವ್ರವಾಗಿದೆ ಹಾಗಾಗಿ ನಾವು ಹಸಿರು ಇಂಧನ ಮೂಲಗಳ ಬಗ್ಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡಬೇಕಾಗಿದೆ. ಪರಿಸರ ಸ್ನೇಹಿ ಇಂದನಗಳನ್ನು ಬಳಕೆ ಮಾಡುವಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ.ಆ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಭಿ ವೃದ್ಧಿ ಯೋಜನೆ ಮುಂಚೂಣಿ ಯಲ್ಲಿದ್ದು ಹಸಿರು ಇಂಧನ ಘಟಕ ಅನುಷನಕ್ಕೆ ಸಹಕಾರ ನೀಡುತ್ತಿದೆ. ಇದರ ಸದುಪಯೋಗ ಪಡಿಸಿಕೊ ಳ್ಳಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಉಪಸ್ಥಿತ ರಿದ್ದ ಟರ್ನಕಿ ಎಜೆಂಟ್ ಪರಶು ರಾಮ ಮಾತನಾಡಿ ಮನೆಯಲ್ಲಿ ಜನುವಾರು ಸಾಕಾಣಿಕೆ ಮಾಡುತ್ತಿ ದ್ದರೆ ಗೋಬರ್ ಗ್ಯಾಸ್ ಘಟಕ ರಚನೆ ಮಾಡಿಕೊಂಡು ಅಡುಗೆ ಇಂಧನಕ್ಕಾಗಿಯೇ ವಾರ್ಷಿಕವಾಗಿ ೧೨ ಎಲ್ಪಿಜಿ ಸಿಲೆಂಡರ್ ಬಳಸು ವವರು ೩ ಸಿಲೆಂಡರ್ ಮಾತ್ರ ಬಳ ಸುವಂತಾಗುತ್ತರೆ. ಅಂದರೆ ವರ್ಷಕ್ಕೆ ೯ ಸಿಲೆಂಡರ್ ಹಣ ಉಳಿತಾಯ ಮಾಡಬಹುದು, ಈ ನಿಟ್ಟಿನಲ್ಲಿ ಹಸಿರು ಇಂಧನ ಘಟಕ ಗಳ ರಚನೆ ಮಹತ್ವದಾಗಿದ್ದು. ಸರಕಾರದಿಂ ದಲೂ ಸಹ ೪೦% ಸಬ್ಸಿಡಿ ದೊರ ಕುತ್ತಿದೆ ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಕೃಷಿ ಮೇಲ್ವಿ ಚಾರಕ ಲೋಕೇಶ್, ಸ್ವಸಹಾಯ ಮತ್ತು ಪ್ರಗತಿಬಂದು ಸಂಘದ ಸದಸ್ಯರು ಉಪಸ್ಥಿತರಿದ್ದರು.