ವೇದ ತಿಳಿದವರು ಜ್ಞಾನಿಯಲ್ಲ; ವೇದನೆಯನ್ನು ತಿಳಿದವರು ನಿಜವಾದ ಜ್ಞಾನಿಗಳು: ಜಿಎಸ್ಎನ್
ಶಿವಮೊಗ್ಗ: ವಿದ್ಯಾರ್ಥಿಗಳಿಗೆ ಪಠ್ಯಾಧಾರಿತ ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ನಾಗರಿಕ ಸಾಮಾಜಿಕ ಮಲ್ಯಗಳನ್ನು ಹೊಂದಿದ ಸರ್ವಾ ಂಗೀಣ ಶಿಕ್ಷಣ ಅತ್ಯಗತ್ಯ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್. ನಾರಾಯಣರಾವ್ ಅಭಿಪ್ರಾಯಪಟ್ಟರು.
ನಗರದ ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದಲ್ಲಿಂದು ಕರ್ನಾಟಕ ರಾಜ್ಯ ಮುಕ್ತ ವಿವಿ ಆಶ್ರಯದಲ್ಲಿ ಏರ್ಪಡಿಸಿದ್ದ ಪ್ರಥಮ ಮತ್ತು ದ್ವಿತೀಯ ಬಿಎಡ್ ಪ್ರಶಿಕ್ಷಣಾರ್ಥಿಗಳ ಸಂಪರ್ಕ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ ಮತ್ತು ಸಂಸ್ಕಾರ ಬದುಕಿನ ಮೂಲ ಮಂತ್ರ. ನಾವು ಕಲಿತ ಶಿಕ್ಷಣ ನಮ್ಮನ್ನು ಎಡವಲು ಬಿಡುವುದಿಲ್ಲ, ಹಾಗೆಯೇ ಸಂಸ್ಕಾರ ಬದುಕಿನಲ್ಲಿ ಕೆಡವಲು ಬಿಡು ವುದಿಲ್ಲ. ಶಿಕ್ಷಕರು ಪಾಠದ ಜೊತೆಗೆ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಬಿತ್ತುವ ಕಾರ್ಯ ಮಾಡಬೇಕಿದೆ. ಆಸಕಿಗೆ ಅನುಗುಣ ವಾಗಿ ಕಲಿಕೆಯ ಪರಿಪಕ್ವತೆ ಸಿಗಲಿದೆ. ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು. ಜನ ಕಲಿಸುವ ಎಲ್ಲರೂ ಪೂಜ್ಯನೀ ಯರು. ರೈತ, ಸೈನಿಕ ಮತ್ತು ಶಿಕ್ಷಕ ದೇಶದ ಚರಿತ್ರೆಯನ್ನು ಬದಲಾಯಿ ಸಬಹುದು. ಅಂತಹ ಬದಲಾವಣೆ ಗಾಗಿ ಕಲಿಕೆಯಲ್ಲಿ ಮಾನವೀಯ ಮಲ್ಯಗಳನ್ನು ಅಳವಡಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.
ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯ ನೀಡಲು ಸರ್ಕಾರ ಹೆಚ್ಚು ಒತ್ತು ನೀಡಬೇಕಿದೆ. ಸರ್ಕಾರಿ ಶಾಲೆಗಳು ಎಂದಿಗೂ ಕೀಳಲ್ಲ. ಅಗತ್ಯ ಸೌಕರ್ಯಗಳನ್ನು ಸರಿಯಾಗಿ ನೀಡಿದ್ದೆ ಆದಲ್ಲಿ ಯಾವುದೇ ಖಾಸಗಿ ಶಾಲೆಗಳಿಗೆ ಸಾಟಿಯಿಲ್ಲವೆಂಬಂತೆ ರೂಪಿಸಬ ಹುದಾಗಿದೆ ಎಂದರು.
ಪೋಷಕರಲ್ಲಿ ಗುಣಾತ್ಮಕ ಶಿಕ್ಷಣಕ್ಕಿಂತ ಧನಾತ್ಮಕ ಶಿಕ್ಷಣದ ಬಗ್ಗೆ ಯೋಚನೆಗಳು ಹೆಚ್ಚಾಗುತ್ತಿರು ವುದು ದುರಂತ. ಉತ್ತಮ ಮಾತಿನ ಕಲೆಯನ್ನು ಮಕ್ಕಳಲ್ಲಿ ಕಲಿಸಬೇಕು. ವೇದ ತಿಳಿದವರು ಜನಿಯಲ್ಲ, ವೇದನೆಯನ್ನು ತಿಳಿದವರು ನಿಜವಾದ ಜನಿ. ಮಕ್ಕಳಲ್ಲಿನ ಕಲಿಕಾ ನ್ಯೂನತೆ ಗಳನ್ನು ಅರಿತು ತಾಳ್ಮೆಯಿಂದ ಅದನ್ನು ತಿದ್ದುವ ಪ್ರಯತ್ನ ಮಾಡಿ ಎಂದರು.
ಪ್ರಾಂಶುಪಾಲ ಡಾ.ಎನ್.ಕೆ. ಚಿದಾನಂದ ಮಾತನಾಡಿ, ಅನುಭ ವಾಧಾರಿತ ಕಲಿಕೆ ನೀಡುವಷ್ಟು ಜನ ಯಾವ ಪುಸ್ತಕದಿಂದಲೂ ಸಿಗಲಾರದು. ಅಂತಹ ಜನವನ್ನು ಮುಕ್ತವಾಗಿ ಸ್ವೀಕರಿಸುವ ಕಿವಿ ಮತ್ತು ತೆರೆದುಕೊಳ್ಳುವ ಮನಸ್ಸು ಶಿಕ್ಷಕ ರದಾಗಬೇಕಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಮುಕ್ತ ವಿವಿ ಸಹ ಸಂಯೋಜಕ ಡಾ.ಮಂಜು. ಎನ್.ಡಿ, ಪ್ರಾಧ್ಯಾಪಕ ಡಾ. ಪ್ರಕಾಶ್ ಇನ್ನಿತರರು ಉಪಸ್ಥಿತರಿ ದ್ದರು.