ಮೂವರು ಸಚಿವರನ್ನು ಸಂಪುಟದಿಂದ ವಜಾ ಮಾಡಿ:ಈಶ್ವರಪ್ಪ ಆಗ್ರಹ
ಶಿವಮೊಗ್ಗ: ಡಿಸಿಎಂ ಡಿ.ಕೆ. ಶಿವಕುಮಾರ್ ಸಚಿವರಾದ ಭೈರತಿ ಸುರೇಶ್, ಶರಣಪ್ರಕಾಶ್ ಪಾಟೀಲ್, ಈ ಮೂವರು ವಿವಿಧ ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಡಲೇ ರಾಜೀನಾಮೆ ನೀಡ ಬೇಕು. ಇಲ್ಲದಿದ್ದರೆ ಮುಖ್ಯಮಂತ್ರಿ ಗಳೇ ಇವರನ್ನು ಸಚಿವ ಸ್ಥಾನದಿಂದ ವಜಗೊಳಿಸಬೇಕು ಎಂದು ಇಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಆಗ್ರಹಿಸಿದರು.
ಅವರ ಇಂದು ಜಿ ಬಿಜೆಪಿ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಡಿ.ಕೆ. ಶಿವಕುಮಾರ್ ಅವರ ಭ್ರಷ್ಟಾಚಾ ರದ ಬಗ್ಗೆ ಈಗಾಗಲೇ ತನಿಖೆ ನಡೆಯುತ್ತಿದೆ. ಹಾಗೆಯೇ ಸಚಿವ ಭೈರತಿ ಸುರೇಶ್ ಆಪ್ತರು ಎನ್ನ ಲಾದ ಮನೇಶ್, ರಾಘವೇಂದ್ರ ಮುಂತಾದವರು ನಕಲಿ ವೋಟರ್ ಐಡಿ, ಪಾನ್ ಕಾರ್ಡ್, ಆಧಾರ್ ಕಾರ್ಡ್ಗಳನ್ನು ಸೃಷ್ಟಿ ಮಾಡುತ್ತಿ zರೆ ಎಂದು ತಿಳಿದುಬಂದಿದೆ. ಹಾಗೆಯೇ ಶಿವಕುಮಾರ್ ಎಂಬ ಯುವಕ ನನ್ನ ಸಾವಿಗೆ ಸಚಿವ ಶರಣಪ್ರಕಾಶ್ ಪಾಟೀಲ್ ಅವರೇ ಕಾರಣ ಎಂದು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿzರೆ. ಈ ಮೂರೂ ಪ್ರಕರಣಗಳು ತುಂಬಾ ಗಂಭೀರವಾದುವು. ಆದ್ದರಿಂದ ಈ ಮೂವರು ಸಚಿವರು ತಕ್ಷಣವೇ ರಾಜೀನಾಮೆ ಕೊಡಬೇಕು ಎಂದರು.
ಡಿ.ಕೆ. ಶಿವಕುಮಾರ್ ತಾನೊಬ್ಬ ಸತ್ಯಹರಿಶ್ಚಂದ್ರ ಎಂಬಂತೆ ಮಾತನಾಡುತ್ತಿzರೆ. ಅವರು ಮತ್ತೊಮ್ಮೆ ಜೈಲಿಗೆ ಹೋಗು ವುದರಲ್ಲಿ ಯಾವ ಅನುಮಾನವೂ ಇಲ್ಲ. ಹೀಗೆಂದು ಹೇಳಿದ್ದಕ್ಕೆ ಈಶ್ವರಪ್ಪ ಜಡ್ಜಾ ಎಂದು ಅವರು ಕೇಳಿದ್ದರು. ಆದರೆ ಅವರದೇ ಪಕ್ಷದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಆರೋಪಮುಕ್ತರಾಗಿ ಬರುತ್ತಾರೆ ಎಂದು ಹೇಳಿzರೆ. ಹಾಗಾದರೆ ಅವರು ಜಡ್ಜೇ ಎಂದು ಪ್ರಶ್ನಿಸಿದ ಅವರು, ಇನ್ನು ಮೂರು ತಿಂಗಳೊ ಳಗೆ ವಿಚಾರಣೆ ಮುಗಿಯುತ್ತದೆ. ಅಷ್ಟರಲ್ಲಿಯೇ ಅವರು ಜೈಲಿಗೆ ಹೋಗುವುದು ಖಚಿತ ಎಂದು ಅವರು ಪುನರುಚ್ಚರಿಸಿದರು.
ಕಾಂಗ್ರೆಸ್ ಸರ್ಕಾರದಲ್ಲಿ ಏನೆ ಅವಾಂತರಗಳು ನಡೆಯು ತ್ತವೆ ಎಂಬುದಕ್ಕೆ ನಕಲಿ ವೋಟ್ ಐಡಿ ಸೃಷ್ಟಿಯೇ ಕಾರಣವಾಗಿದೆ. ಅದರಲ್ಲೂ ಈ ಸೃಷ್ಟಿಕರ್ತರು ಸಚಿವರ ಆಪ್ತರು ಎಂದು ತಿಳಿದು ಬಂದಿದೆ. ನಕಲಿ ವೋಟರ್ ಐಡಿ ಮಾಡುವುದು ಸಾಮಾನ್ಯ ವಿಷ ಯವೇ. ಇದು ಪ್ರಜಪ್ರಭುತ್ವದ ವ್ಯವಸ್ಥೆಯ ಮೇಲೆಯೇ ಪರಿ ಣಾಮ ಬೀರುತ್ತದೆ. ಎಷ್ಟು ವರ್ಷ ದಿಂದ ಮಾಡುತ್ತಿzರೆ. ಮುಂದಿನ ಲೋಕಸಭಾ ಚುನಾವಣೆಯ ಉದ್ದೇಶ ಇದಕ್ಕಿದೆಯೇ ಎಂಬುದು ತನಿಖೆಯಾಗಬೇಕು. ಈ ಘಟನೆ ಯನ್ನು ಸಿಬಿಐಗೆ ಒಪ್ಪಿಸಬೇಕು ಎಂದರು.
ಹಾಗೆಯೇ ಯುವಕನೊಬ್ಬ ನನ್ನ ಸಾವಿಗೆ ಸಚಿವ ಶರಣ ಪ್ರಕಾಶ್ ಪಾಟೀಲ್ ಕಾರಣ ಎಂದು ಬರೆದಿ ರುವುದಲ್ಲದೆ ವೀಡಿಯೋ ಕೂಡ ಮಾಡಿzರೆ. ಈ ಹಿಂದೆ ಇಂತ ಹುದೇ ಘಟನೆಗೆ ಸಂಬಧಿಸಿದಂತೆ ನನ್ನ ಬಗ್ಗೆ ಆರೋಪ ಬಂದಾಗ ನಾನು ತಕ್ಷಣವೇ ರಾಜೀನಾಮೆ ಕೊಟ್ಟಿz. ಹಾಗೆಯೇ ಶರಣ ಪ್ರಕಾಶ್ ಪಾಟೀಲ್ ಕೂಡ ರಾಜೀ ನಾಮೆ ನೀಡಬೇಕು ಎಂದರು.
ಕಾಂಗ್ರೆಸ್ ಸರ್ಕಾರ ದಿವಾಳಿ ಯಾಗಿದೆ. ಎ ಭಾಗ್ಯಗಳು ವಿಫಲವಾಗಿವೆ. ಶಿವಮೊಗ್ಗ ದಸರಾಕ್ಕೆ ೨೦ಲಕ್ಷ ಕೊಡುತ್ತಾರೆ ಎಂದರೆ ಸರ್ಕಾರದ ಸ್ಥಿತಿ ಎಲ್ಲಿಗೆ ಬಂದಿದೆ ಎಂದು ತಿಳಿಯಬಹುದು. ಆ ಹಣ ನಮಗೆ ಬೇಡ. ಶಿವಮೊಗ್ಗದ ಜನರು ನಾವೇ ಸೇರಿ ಹಬ್ಬ ಮಾಡುತ್ತೇವೆ ಎಂದರು.
ಸಚಿವ ಎಂ.ಬಿ. ಪಾಟೀಲ್ ಈಶ್ವರಪ್ಪನವರು ಕಾಂಗ್ರೆಸ್ ಸೇರುತ್ತಾರೆ ಎಂದು ಹೇಳಿzರೆ. ಇದು ಅರ್ಥವಿಲ್ಲದ ಮಾತು. ನಾನು ನನ್ನ ದೇಶ, ಧರ್ಮ, ಪಕ್ಷದ ಮೇಲೆ ನಿಷ್ಠೆ ಇಟ್ಟವನು. ಕಾಂಗ್ರೆಸ್ ಸೇರಿದರೆ ನನ್ನ ತಾಯಿಗೆ ದ್ರೋಹ ಬಗೆದಂತೆ. ಎಂ.ಬಿ.ಪಾಟೀಲ್ ಹಿರಿಯರಿzರೆ. ಅವರು ಕ್ಷಮೆ ಕೇಳಲಿ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ, ಶಿವರಾಜ್, ಸುಧೀಂದ್ರ ಇದ್ದರು.