ಯಕ್ಷಗಾನ ಕಲಾವಿದರನ್ನು ಪೋತ್ಸಾಹಿಸಿ ಕಲೆಯನ್ನು ಉಳಿಸಿಕೊಳ್ಳಬೇಕು: ಶಾಸಕ ಬೇಳೂರು
ಸಾಗರ: ವೈಭವದಿಂದ ಮೆರೆದ ಯಕ್ಷಗಾನ ಕಲಾ ಪ್ರದರ್ಶನ ಇಂದು ಕಡಿಮೆಯಾಗುತ್ತಿದೆ. ಕಲಾವಿದರನ್ನು ಪ್ರೋತ್ಸಾಹಿಸುವ ಮೂಲಕ ಕಲೆಯನ್ನು ಉಳಿಸಿಕೊಳ್ಳಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಅಭಿಪ್ರಾಯಪಟ್ಟರು.
ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ತಾಲ್ಲೂಕು ಒಕ್ಕಲಿಗರ ಸಂಘದ ವತಿಯಿಂದ ಏರ್ಪಡಿಸಿದ್ದ ಶ್ರೀ ಕಾಲಭೈರೇಶ್ವರ ಮಹಾತ್ಮೆ ಯಕ್ಷಗಾನ ಪ್ರದರ್ಶನ ಮತ್ತು ನಾಟ್ಯಶ್ರೀ ರಜತ ನೂಪುರ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಧರ್ಮಸ್ಥಳ, ಕಟೀಲು ಮುಂತಾದ ಮೇಳಗಳು ದೇವರ ಹೆಸರಿನಲ್ಲಿ ನಡೆಯುತ್ತಿವೆ. ಇಂಥ ದೇವಸ್ಥಾನಗಳು ಲಾಗಾಯ್ತಿ ನಿಂದಲೂ ಕಲೆಯನ್ನು ಪೋಷಿಸಿ ಕೊಂಡು ಬರುತ್ತಿವೆ. ಜನರಿಗೆ ಕಲೆಯ ಬಗ್ಗೆ ಆಸಕ್ತಿಯಿದೆ. ಯಕ್ಷಗಾನ ಪ್ರದರ್ಶನಕ್ಕೆ ಬಸವೇಶ್ವರ ಚರಿತ್ರೆ, ಭಕ್ತ ಕನಕದಾಸ, ಕಾಲಭೈರೇಶ್ವರ ಮಹಾತ್ಮೆ ಮುಂತಾದ ಐತಿಹಾಸಿಕ ಸಂಗತಿ ಗಳನ್ನು ಆಯ್ಕೆ ಮಾಡಿಕೊಂಡು ಕಲೆಯ ಮೂಲಕ ಅವರ ಸಂದೇಶ ಗಳನ್ನು ಹಾಗೂ ಸ್ಥಳ ಮಹಾತ್ಮೆಗಳನ್ನು ಜನರ ಅರಿವಿಗೆ ತರುವ ಪ್ರಯತ್ನ ನಾಟ್ಯಶ್ರೀ ತಂಡದಿಂದ ನಡೆಯು ತ್ತಿದೆ. ನಮ್ಮ ಸಮುದಾಯದ ಚಾರಿತ್ರಿಕ ಸಂಗತಿಗಳನ್ನು ಆಧರಿಸಿ ಪ್ರಸಂಗ ರಚಿಸಿ ಯಕ್ಷಗಾನಕೆ ಅಳವಡಿಸಿ ಪ್ರದರ್ಶನ ನೀಡುವಂತಾ ದರೆ ಅದಕ್ಕೆ ಪೂರ್ಣ ಸಹಕಾರ ಕೊಡುವುದಾಗಿ ಭರವಸೆ ನೀಡಿದರು.
ನಾಟ್ಯಶ್ರೀ ಕಲಾ ತಂಡದ ಸಂಚಾಲಕ, ಕಲಾವಿದ ವಿದ್ವಾನ್ ದತ್ತಮೂರ್ತಿ ಭಟ್ ಮಾತನಾಡಿ, ಯಕ್ಷಗಾನಕ್ಕೆ ಪೌರಾಣಿಕ, ಐತಿಹಾಸಿಕ ಕಥೆಗಳ ಆಯಾಮ ಗಳಿವೆ. ಇವುಗಳಿಗೆ ಭಿನ್ನವಾಗಿ ಬಸವಣ್ಣನನ್ನು ಯಕ್ಷರಂಗಕ್ಕೆ ತಂದೆವು. ಈ ಬಗ್ಗೆ ಕೆಲವು ಅಪಸ್ವರಗಳು ಕೇಳಿಬಂದರೂ ಯಾವುದೇ ಹೊಸತನಕ್ಕೂ ಮೊದಲಿಗೆ ಇಂಥ ಪ್ರತಿಕ್ರಿಯೆಗಳು ಸಹಜ. ಈಗಾಗಲೇ ಬಸವೇಶ್ವರ ಚರಿತ್ರೆ ರಾಜ್ಯದಾದ್ಯಂತ ೩೫೦ಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ. ಶ್ರೀ ಕಾಲಭೈರವೇಶ್ವರ ಮಹಾತ್ಮೆ ೯೩ ಪ್ರದರ್ಶನಗಳನ್ನು ಕಂಡಿದೆ. ಮಹಾತ್ಮರ ಕಥೆಗಳನ್ನು ಯಕ್ಷಗಾನಕ್ಕೆ ಅಳವಡಿಸಿದರೆ ಅವರ ಸಂದೇಶಗಳು ಪ್ರೇಕ್ಷಕರನ್ನು ತಲುಪುತ್ತದೆ. ಒಕ್ಕಲಿಗ ಸಮುದಾಯದ ಆದಿಚುಂಚನಗಿರಿ ಮಠವು ಜತಿ, ಮತ ಪಂಥಗಳ ಭೇದವಿಲ್ಲದೆ ಎಲ್ಲರನ್ನೂ ಒಳಗೊ ಳ್ಳುವ ಧಾರ್ಮಿಕ ಕೇಂದ್ರ. ಇಲ್ಲಿ ಸರ್ವಧರ್ಮ ಸಮ್ಮೇಳನ ನಡೆಯುವುದು ವಿಶೇಷ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿ ದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್. ಎಂ. ಮಂಜುನಾಥ ಗೌಡ ಅವರು, ಒಕ್ಕಲಿಗ ಸಮಾಜ ಅಲ್ಪಸಂಖ್ಯಾತ ವಾಗಿದ್ದು, ಆರ್ಥಿಕವಾಗಿಯೂ ದುರ್ಬಲವಾಗಿದೆ. ನಾವು ಎಲ್ಲ ಸಮಾಜದವರನ್ನೂ ಪ್ರೀತಿಸು ತ್ತೇವೆ. ಈ ಸಮುದಾಯ ಭವನಕ್ಕೆ ಸಿಗಬೇಕಾದ ಸರ್ಕಾರದ ೫೦ ಲಕ್ಷ ರೂ. ಆರ್ಥಿಕ ನೆರವನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಬಳಿ ಚರ್ಚಿಸಿ ಮಂಜೂರು ಮಾಡಿಸಲು ಶಾಸಕ ಬೇಳೂರು ಜೊತೆ ನಾನು ಶ್ರಮವಹಿಸುತ್ತೇನೆ ಎಂದರು.
ನಾಟ್ಯಶ್ರೀ ರಜತ ನೂಪುರ ಪುರಸ್ಕಾರ ಪಡೆದ ಎಂ.ಆರ್. ಲಕ್ಷ್ಮೀನಾರಾಯಣ ಅಮಚಿ ಅವರು ಮಾತನಾಡಿ, ತಾಲ್ಲೂಕಿ ನಲ್ಲಿ ಕಲಾಭಿಮಾನಿಗಳೂ ನನ್ನನ್ನು ಪ್ರೋ ಬೆಳೆಸಿದವರಿಗೆ ಈ ಸನ್ಮಾನ ಸೇರುತ್ತದೆ ಎಂದರು.
ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಂ.ಟಿ.ಗುಂಡಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು. ಆಪ್ಸ್ ಕೋಸ್ ಸಂಸ್ಥೆ ಅಧ್ಯಕ್ಷ ಬಿ.ಎ. ಇಂದೂಧರ ಗೌಡ, ಕೆಂಪೇಗೌಡ ಯುವಜನ ಸಂಘದ ಧ್ಯಕ್ಷ ನವೀನ್, ನಗರಸಭೆ ಸದಸ್ಯ ಗಣಪತಿ ಮಂಡಗಳಲೆ, ಸಂಘದ ವೆಂಕಟರಮಣ ಗೌಡ, ಭಾಗೀರಥಿ ಪ್ರಕಾಶ್, ರಮೇಶ್ ಎನ್. ಮತ್ತಿತರರು ಹಾಜರಿದ್ದರು.
ವಿಶಾಲಾಕ್ಷಿ ಪ್ರಾರ್ಥಿಸಿದರು. ದಿನೇಶ್ ಸ್ವಾಗತಿಸಿದರು. ಮಂಜುನಾಥ ಗೌಡ ವಂದಿಸಿದರು. ಬಸವರಾಜು ನಿರೂಪಿಸಿದರು.
ನಂತರ ನಾಟ್ಯಶ್ರೀ ಕಲಾ ತಂಡದಿಂದ ಶ್ರೀ ಕಾಲಭೈರೇಶ್ವರ ಮಹಾತ್ಮೆ ಯಕ್ಷಗಾನ ಪ್ರದರ್ಶನ ನಡೆಯಿತು. ಹಿಮ್ಮೇಳದಲ್ಲಿ ಕೊಳಗಿ ಕೇಶವ ಹೆಗಡೆ, ಗಣೇಶಮೂರ್ತಿ, ಲಕ್ಷ್ಮೀನಾರಾಯಣ ಸಂಪ ಹಾಗೂ ಮುಮ್ಮೇಳದಲ್ಲಿ ಕಲಾವಿದರಾಗಿ ವಿದ್ವಾನ್ ದತ್ತಮೂರ್ತಿ ಭಟ್, ಅಶೋಕ್ ಭಟ್ ಸಿzಪುರ, ಪ್ರಭಾಕರ ಹೆಗಡೆ, ನಾಗೇಂದ್ರ ಭಟ್ ಮೂರೂರು, ಸದಾಶಿವ ಭಟ್ ಮಲವಳ್ಳಿ, ವಿಜಯ ಗಾಣಿಗ ಬೀಜಮಕ್ಕಿ, ವೆಂಕಟೇಶ್ ಬಗರಿಮಕ್ಕಿ, ಪ್ರಣವ ಭಟ್ ಶಿರಳಗಿ ಭಾಗವಹಿಸಿದ್ದರು.