ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ತಾಲೂಕು ಮಟ್ಟದ ಮೇರಿ ಮಾಟಿ ಮೇರಾ ದೇಶ್ ಅಮೃತ ಕಳಶ ಯಾತ್ರೆ …

Share Below Link

ಶಿವಮೊಗ್ಗ: ಸ್ವಾತಂತ್ರ್ಯಕ್ಕಾಗಿ ಹೋರಾಡಿ ಪ್ರಾಣ ತೆತ್ತ ಯೋಧ ರು ಮತ್ತು ಭಾರತದ ಪರಂಪರೆ ಯನ್ನು ಉಳಿಸಿ ಬೆಳೆಸಿ ಮುನ್ನಡೆಸಿದೆ ರಾಜಮಹಾರಾಜರ ಬಗ್ಗೆ ಮತ್ತು ದೇಶದ ಸಂಸ್ಕಾರ-ಸಂಸ್ಕೃತಿಯ ಬಗ್ಗೆ ಯುವಕರಲ್ಲಿ ಅರಿವು ಮೂಡಿಸುವ ಸಲುವಾಗಿ ಕೇಂದ್ರ ಸರ್ಕಾರ ತಾಲೂಕು ಮಟ್ಟದ ಮೇರಿ ಮಾಟಿ ಮೇರಾ ದೇಶ್ ಅಮೃತ ಕಳಶ ಯಾತ್ರೆ ಹಮ್ಮಿಕೊಂಡಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿzರೆ.
ಅವರು ಇಂದು ನಗರದ ತಾ.ಪಂ.ಕಚೇರಿ ಮುಂಭಾಗದಲ್ಲಿ ಜಿಡಳಿತ, ಜಿ ಪಂಚಾಯತ್, ಶಿವಮೊಗ್ಗ ನೆಹರು ಯುವಕೇಂದ್ರ, ತಾಲೂಕು ಪಂಚಾಯತ್,ಕುವೆಂಪು ವಿವಿ ರಾಷ್ಟ್ರೀಯ ಸೇವಾ ಯೋಜನೆ ಘಟಕ ಹಾಗೂ ವಿವಿಧ ಸಂಘ ಸಂಸ್ಥೆ ಗಳ ವತಿಯಿಂದ ಹಮ್ಮಿಕೊಂಡಿದ್ದ ಮೇರಿ ಮಾಟಿ ಮೇರಾ ದೇಶ್ ಅಮೃತ ಕಳಶ ಯಾತ್ರೆಯ ಮೆರ ವಣಿಗೆಗೆ ಚಾಲನೆ ನೀಡಿ ಮಾತನಾ ಡಿದರು.


ನಮ್ಮ ಜಿಯ ಶಿಕಾರಿಪುರದ ಈಸೂರು ಗ್ರಾಮ ಸ್ವಾತಂತ್ರ್ಯ ಹೋರಾಟಕ್ಕೆ ಸಾಕ್ಷಿಯಾಗಿ ದೇಶದ ಗಮನ ಸೆಳೆದಿತ್ತು. ಕೆಳದಿ ಶಿವಪ್ಪ ನಾಯಕರು ಕೂಡ ತಮ್ಮದೇ ಆದ ಕೊಡುಗೆ ನೀಡಿzರೆ. ಇಡೀ ದೇಶದಲ್ಲಿ ಲಕ್ಷಾಂತರ ಹೋರಾಟ ಗಾರರು ಸ್ವಾತಂತ್ರ್ಯಕ್ಕಾಗಿ ಪ್ರಾಣ ತೆತ್ತಿzರೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ ೭೫ ವರ್ಷ ಪೂರೈಸಿದ ಆಜದಿ ಕಾ ಅಮೃತ ಮಹೋತ್ಸವ್ ಸಂದರ್ಭ ದಲ್ಲಿ ಪ್ರಧಾನಿ ನರೇಂದ್ರ ಮೋದಿ ಯವರ ಅಪೇಕ್ಷೆಯಂತೆ ಯುವ ಶಕ್ತಿಗೆ ಅರಿವು ಮೂಡಿಸುವ ಕೆಲಸ ವನ್ನು ದೇಶದ ಹಿತದೃಷ್ಟಿಯಿಂದ ಜಿಡಳಿತ ಈ ಯೋಜನೆ ಮಾಡಿದೆ. ದೆಹಲಿಯಲ್ಲಿ ಕೂಡ ಪ್ರಮುಖ ರಸ್ತೆಯಲ್ಲಿ ಕರ್ತವ್ಯ ಪಥ ಎಂದು ಘೋಷಣೆ ಮಾಡಿ ದೇಶದ ೮ ಲಕ್ಷ ಗ್ರಾಮಗಳಿಂದ ಸಸಿ ಮತ್ತು ಮಣ್ಣು ತಂದು ಅಲ್ಲಿ ಸಸಿ ನೆಡುವ ಪುಣ್ಯದ ಕಾರ್ಯ ಮಾಡಲಾಗು ತ್ತಿದೆ. ಇದರಲ್ಲಿ ಭಾಗವಹಿಸಿದ ಒಂದು ಅವಕಾಶ ನಿಮಗೂ ಸಲ್ಲತ್ತೆ ಎಂದರು.
ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಇದು ಮಣ್ಣು ಮಾತ್ರ ಅಲ್ಲ. ಮಾತೃಭೂಮಿ ಎಂದು ನಾವು ಈ ದೇಶದ ಮಣ್ಣನ್ನು ಪೂಜಿಸುತ್ತೇವೆ. ಉದಾತ್ತ ಭಾವನೆಯಿಂದ ನಾವು ಈ ಮಣ್ಣನ್ನು ಗೌರವಿಸುತ್ತೇವೆ. ಕರ್ತವ್ಯ ಪಥ ಈ ದೇಶಕ್ಕೆ ಮಾತ್ರ ವಲ್ಲ. ಜಗತ್ತಿಗೇ ಶಕ್ತಿ ತುಂಬುವಂ ಥದ್ದು. ವಿವೇಕಾನಂದರು ವಿದೇಶ ಯಾತ್ರೆ ಮುಗಿಸಿ ನಮ್ಮ ದೇಶಕ್ಕೆ ವಾಪಾಸ್ ಬಂದಾಗ ಈ ಮಣ್ಣಿನಲ್ಲಿ ಹೊರಳಾಡಿ ಮಾತೃಭೂಮಿಗೆ ಬಂದ ಸಂತಸ ವ್ಯಕ್ತಪಡಿಸಿ, ವಿದೇಶ ಯಾತ್ರೆಯ ಕಳಂಕವೇನಾದರೂ ಇದ್ದರೆ ಈ ಮಾತೃಭೂಮಿ ಹೋಗ ಲಾಡಿಸಲಿ ಎಂದಿದ್ದರು.
ಕ್ಷಮಿಸುವ ಗುಣ ಮಾತ್ರಭೂಮಿಗೆ ಮಾತ್ರ ಸಾಧ್ಯ. ಈ ದೇಶದ ಮಣ್ಣಿನ ಗುಣವೇ ಅಂತದ್ದು, ಮಾತೃಭೂಮಿಯ ಋಣ ತೀರಿಸಲಾಗುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ನಮ್ಮ ದೇಶದ ಸಂವಿಧಾನ ಮತ್ತು ಕಾನೂನು ಪಾಲಿಸುತ್ತೇವೆ. ದೇಶಕ್ಕೆ ಅಪಮಾನ ಆಗುವ ರೀತಿಯಲ್ಲಿ ನಡೆದುಕೊಳ್ಳುವುದಿಲ್ಲ. ದೇಶಕ್ಕೆ ಗೌರವ ತರುತ್ತೇವೆ ಎಂಬ ಪ್ರಮಾ ಣ ವಚನ ಸ್ವೀಕರಿಸಲಾಯಿತು. ನಗರದ ಪ್ರಮುಖ ರಸ್ತೆಗಳಲ್ಲಿ ಅಮೃತ ಕಳಶ ಯಾತ್ರೆ ಹಮ್ಮಿಕೊ ಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಜಿಧಿಕಾರಿ ಡಾ. ಆರ್.ಸೆಲ್ವಮಣಿ, ಜಿ.ಪಂ ಸಿಇಒ ಸ್ನೇಹಲ್ ಸುಧಾಕರ್ ಲೋಖಂಡೆ, ನೆಹರು ಯುವ ಕೇಂದ್ರದ ಅಧಿಕಾರಿ ಉಸ್, ಕನ್ನಡ ಮತ್ತು ಸಂಸ್ಕತಿ ಇಲಾಖೆ, ಶಿವಮೊಗ್ಗ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಭಾರತ್ ಸ್ಕೌಟ್ಸ್ ?ಗೈಡ್ಸ್, ಭಾರತೀಯ ಅಂಚೆ ಇಲಾಖೆ ಹಾಗೂ ವಿವಿಧ ಸಂಘಸಂಸ್ಥೆಗಳು, ಕಾಲೇಜು ವಿದ್ಯಾರ್ಥಿಗಳು ಈ ಅಭಿಯಾನ ದಲ್ಲಿ ಭಾಗವಹಿಸಿದ್ದರು.