ಅಕ್ಷರ ಕಾಲೇಜ್ನಲ್ಲಿ ನವರಾತ್ರಿ ಕಾರ್ಯಕ್ರಮ ಜನಮನ ಸೆಳೆದ ಶಿಕ್ಷಕ-ಪೋಷಕರ ನೃತ್ಯ…
ಶಿವಮೊಗ್ಗ: ನಮ್ಮ ಪರಂಪರೆ ಯಿಂದ ಬಂದ ಹಬ್ಬಗಳನ್ನು ಒಟ್ಟುಗೂಡಿ ಸಂಭ್ರಮಿಸುವ ಸುಸಂದರ್ಭಗಳು ಕಾಲಕ್ರಮೀಣ ಮರಿಚಿಕೆಯಾಗುತ್ತಿರುವ ಪ್ರಸ್ತುತ ದಿನಗಳಲ್ಲಿ ಹಬ್ಬದ ಮಹತ್ವವನ್ನು ಮುಂದಿನ ಪೀಳಿಗೆಗೆ ತಿಳಿಸುವ ಉದ್ದೇಶವನ್ನು ಇಟ್ಟುಕೊಂಡು ನಗರದ ಪ್ರತಿಷ್ಠಿತ ಅಕ್ಷರ ಸಂಯುಕ್ತ ಸಂಸ್ಥೆಯಲ್ಲಿ ಪ್ರಪ್ರಥಮ ಬಾರಿಗೆ ನಾಡಹಬ್ಬ ದಸರಾ ಪ್ರಯುಕ್ತ ಅಕ್ಷರ ನವರಾತ್ರಿ ಉತ್ಸವ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕಾರ್ಯಕ್ರಮವನ್ನು ಗರ್ಭಾ ಪೂಜೆಯನ್ನು ಮಾಡುವ ಮೂಲಕ ಉದ್ಘಾಟಿಸಲಾಯಿತು.
ವಿಧಾನ ಪರಿಷತ್ ಸದಸ್ಯ ಡಿ ಎಸ್ ಅರುಣ್ ಮುಖ್ಯ ಅತಿಥಿಗಳಾಗಿ ಆಗಮಿಸಿ, ನವರಾತ್ರಿಯ ಶುಭಾಶಯವನ್ನು ತಿಳಿಸುವ ಮೂಲಕ ಮಕ್ಕಳೊಂದಿಗೆ ಪೋಷಕರಿಗೂ ವೇದಿಕೆಯನ್ನು ಕಲ್ಪಿಸಿರುವ ಸಂಸ್ಥೆಗೆ ಅಭಿನಂದನೆ ತಿಳಿಸಿದರು. ಹಬ್ಬಗಳನ್ನು ಶಾಲೆಯಲ್ಲಿ ಆಚರಿಸುವದರಿಂದ ಹಬ್ಬದ ಮೌಲ್ಯಗಳು ಮುಂದಿನ ಪೀಳಿಗೆಗೆ ತಿಳಿಯುತ್ತದೆ. ಈ ನಿಟ್ಟಿನಲ್ಲಿ ಈ ಸಂಸ್ಥೆ ಹಬ್ಬವನ್ನು ಆಚರಿಸುತ್ತಿರುವುದು ಸಂತಸ ತಂದಿದೆ ಎಂದರು.
ಅಕ್ಷರ ಸಂಸ್ಥೆಯ ಶಿಕ್ಷಕಿಯರು ಮಾಡಿದ ನವದುರ್ಗೆಯರ ನೃತ್ಯ ಮತ್ತು ಪೋಷಕರ ನೃತ್ಯವು ನೋಡುಗರ ಗಮನ ಸೆಳೆಯಿತು. ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ರತ್ನ ಕುಮಾರಿ, ಕಾರ್ಯದರ್ಶಿ ಕೆ ಬಿ ಅಶೋಕ್ ನಾಯ್ಕ್, ಅಕ್ಷರ ಕಾಲೇಜಿನ ವಾಣಿಜ್ಯ ವಿಭಾಗದ ಪ್ರಾಂಶುಪಾಲ ಗಿರೀಶ್, ವಿeನ ವಿಭಾಗದ ಪ್ರಾಂಶುಪಾಲ ಮೋಹನ್, ಶಾಲೆಯ ಪ್ರಾಂಶುಪಾಲ ಡಾ|| ಸಂದೀಪ್, ಅಕ್ಷರ ಸಂಸ್ಥೆಯ ಉಪನ್ಯಾಸಕರು, ಶಿಕ್ಷಕರು, ಪೋಷಕರು ಉಪಸ್ಥಿತರಿದ್ದರು.