ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ವಿದ್ಯುತ್ ಸಮಸ್ಯೆ ಬಗೆಹರಿಯದಿದ್ದರೆ ಶಾಸಕರ ಮನೆ ಮುಂದೆ ಪ್ರತಿಭಟನೆ: ಉಮೇಶ್

Share Below Link

ನ್ಯಾಮತಿ: ಅರಣ್ಯ ಇಲಾಖೆಯ ಜಾಗವೆಂದು ಗುರುತಿಸಲ್ಪಟ್ಟಿದ್ದರೂ ಒಂದು ವೇಳೆ ರೈತರು ಉಳುಮೆ ಮಾಡುತ್ತಿದ್ದರೆ ಅವರನ್ನು ಒಕ್ಕಲೆಬ್ಬಿಸದಂತೆ ಕಂದಾಯ ಸಚಿವರು ಸೂಚನೆ ನೀಡಿ zರೆ ಎಂದು ಎಸಿ ಹುಲ್ಲುಮನಿ ತಿಮ್ಮಣ್ಣ ಮಾಹಿತಿ ನೀಡಿದರು.
ಪಟ್ಟಣದ ಬನಶಂಕರಿ ಸಮುದಾಯ ಭವನದಲ್ಲಿ ರೈತ ಸಂಪರ್ಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕಂದಾಯ ಇಲಾಖೆಯ ಸಚಿವ ಕೃಷ್ಣ ಬೈರೇಗೌಡ ಅವರಿಂದ ಮುಂದಿನ ಆದೇಶ ಬರುವವರೆಗೂ ಫಲವನಹಳ್ಳಿ, ಕ್ಯಾತಿನಕೊಪ್ಪ ಸೇರಿದಂತೆ ಅವಳಿ ತಾಲ್ಲೂಕುಗಳ ಯಾವ ಹಳ್ಳಿ ಗಳಲ್ಲಿಯೂ ರೈತರನ್ನು ಒಕ್ಕಲೆಬ್ಬಿಸ ದಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಕುಡಿಯುವ ನೀರಿನ ಸಮಸ್ಯೆ ಎದುರಾದರೆ ಸ್ಥಳಿಯರಿಂದ ಮೋಟಾರ್ ಪಂಪ್‌ಸೆಟ್‌ಗಳನ್ನು ಬಾಡಿಗೆ ಪಡೆದು ಸಮಸ್ಯೆ ಬಗೆಹರಿಸ ಬೇಕು. ಮೋಟಾರ್ ಪಂಪ್‌ಸೆಟ್ ಗಳು ಬಾಡಿಗೆಗೆ ಸಿಗದಿದ್ದಲ್ಲಿ ಟ್ಯಾಂಕರ್ ಮೂಲಕ ನೀರು ತಲುಪಿಸುವ ವ್ಯವಸ್ಥೆ ಮಾಡ ಬೇಕೆಂದು ತಾಪಂ ಇಒ ಎಚ್.ವಿ. ರಾಘವೇಂದ್ರ ಅವರಿಗೆ ಸೂಚಿಸಿದರು.


ಬೆಳಗುತ್ತಿಯ ೩ ಕೆರೆಗಳನ್ನು ಸರ್ವೇ ಮಾಡಿಸಿ ಟ್ರೆಂಚ್ ಮಾಡಿ ಕೊಡಬೇಕೆಂದು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿ ವಿಕಾಸ್ ಅವರಿಗೆ ಸೂಚಿಸಿದರು.
ಗೋ ಶಾಲೆಯ ಅವಶ್ಯಕತೆ ಕಂಡುಬಂದರೆ ಜಿಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ಇದುವರೆಗೂ ಒಟ್ಟು ೨೮ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ೪ ಮನೆಗಳು ಬಿದ್ದಿದ್ದು ಸಂಬಂಧ ಪಟ್ಟವರ ಖಾತೆಗೆ ಪರಿಹಾರವನ್ನು ವಿತರಿಸಲಾಗಿದೆ ಎಂದು ತಿಳಿಸಿದರು. ಬರುವ ಶುಕ್ರವಾರ ಬ್ಯಾಂಕ್ ಅಧಿಕಾರಿಗಳ ಸಭೆ ಕರೆದು ಬರಗಾಲ ಘೋಷಣೆಯಾಗಿರುವ ಹಿನ್ನೆಲೆ ಯಲ್ಲಿ ಸಾಲ ವಸೂಲಿಗೆ ಮುಂದಾಗ ದಂತೆ ಕ್ರಮ ವಹಿಸಲಾಗುವುದು ಎಂದು ವಿವರಿಸಿದರು.
ತಹಶೀಲ್ದಾರ್ ಎಚ್.ಬಿ. ಗೋವಿಂದಪ್ಪ ಅವರು ಮಾತನಾಡಿ ತಾಲ್ಲೂಕಿನ ಎ ಹಳ್ಳಿಗಳಿಗೂ ಶಾಸಕ ಡಿ.ಜಿ.ಶಾಂತನಗೌಡ, ಕೃಷಿ ಮತ್ತು ತೋಟಗಾರಿಕಾ ಇಲಾಖೆಯ ಅಧಿಕಾರಿಗಳ ತಂಡದೊಂದಿಗೆ ವೀಕ್ಷಣೆ ಮಾಡಿ ಬರಗಾಲದ ಬಗ್ಗೆ ವರದಿ ನೀಡಿದ ಹಿನ್ನೆಲೆಯಲ್ಲಿ ನ್ಯಾಮತಿ ತಾಲ್ಲೂಕು ಬರಗಾಲದ ಪಟ್ಟಿಯಲ್ಲಿ ಸೇರಿದ್ದು ನಮ್ಮ ವರದಿಯ ಬಗ್ಗೆ ಕಂದಾಯ ಇಲಾಖೆಯ ಸಚಿವರು ರೈತರರಿಗೆ ಅನುಕೂಲವಾದ ವರದಿ ನೀಡಿದ್ದೀ ರೆಂದು ವೀಡಿಯೋ ಕಾನ್ಫರೆನ್ಸ್ ಮೂಲಕ ವರದಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿzರೆ ಎಂದರು.
ತಾಪಂ ಇಒ ಎಚ್.ವಿ. ರಾಘವೆಂದ್ರ ಅವರು ಮಾತನಾಡಿ, ತಾಲ್ಲೂಕಿನಲ್ಲಿರುವ ಗ್ರಾಪಂಗಳಿಗೆ ಸಂಬಂಧಪಟ್ಟ ಸ್ಮಶಾನಗಳ ಅಭಿವೃದ್ಧಿ, ಗ್ರಾಪಂ ವ್ಯಾಪ್ತಿಯ ಕೆರೆಗಳನ್ನು ಸರ್ವೇ ಮಾಡಿಸಿ ಸಮಗ್ರ ಅಭಿವೃದ್ಧಿಗೆ ಕ್ರಮ ವಹಿಸಲಾಗು ವುದು. ಇ-ಸ್ವತ್ತನ್ನು ನಿಯಮಾನು ಸಾರವಾಗಿ ಅರ್ಜಿ ಹಾಕಿದವರಿಗೆ ಸಿಗುವಂತೆ ಎ ಪಿಡಿಒಗಳಿಗೆ ಸೂಚಿಸಲಾಗುವುದು ಎಂದು ಮಾಹಿತಿ ನೀಡಿದರು.
ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಬಿ.ಎಚ್. ಉಮೇಶ್ ಮಾತನಾಡಿ ಈಗಾಗಲೇ ರೈತರು ಬರಗಾಲದಿಂದ ಆತಂಕಕ್ಕೊಳಗಾಗಿದ್ದು ಬ್ಯಾಂಕ್‌ಗಳು ಇಂತಹ ವಿಷಮ ಪರಿಸ್ಥಿತಿಯಲ್ಲಿ ರೈತ ರಿಗೆ ನೀಡಿದ ಸಾಲ ಮರುಪಾ ವತಿಗೆ ನೋಟೀಸ್ ಜಾರಿ ಮಾಡುತ್ತಿದ್ದು ನೋಟೀಸ್ ಜಾರಿ ಮಾಡುವುದನ್ನು ಕೂಡಲೇ ಕೈಬಿಡಬೇಕು. ಇದು ಹೀಗೆಯೇ ಮುಂದುವರೆದರೆ ಬ್ಯಾಂಕ್‌ಗಳ ಮುಂದೆ ಉಗ್ರ ಹೋರಾಟ ಮಾಡ ಲಾಗುವುದು ಎಂದು ಬ್ಯಾಂಕ್ ಅಧಿಕಾರಿಗಳಿಗೆ ಎಚ್ಚರಿಸಿದರು.
ಪದೇ-ಪದೇ ಟಿಸಿಗಳು ಸುಡು ತ್ತಿದ್ದು ಬೆಸ್ಕಾಂ ಇಲಾಖೆಯವರು ಟಿಸಿಯನ್ನು ಮರು ಅಳವಡಿಸಲು ರೈತರಿಂದ ಹಣ ವಸೂಲಿಗೆ ಮುಂದಾಗದೇ ರೈತರ ಕೆಲಸಗಳನ್ನು ಸಕಾಲದಲ್ಲಿ ಮಾಡಿಕೊಡಬೇ ಕೆಂದು ಮನವಿ ಮಾಡಿದರು. ಬ್ಯಾಂಕ್‌ಗಳು ವಿದ್ಯಾಭ್ಯಾಸಕ್ಕೆ ಮತ್ತು ಸ್ವ-ಉದ್ಯೋಗಕ್ಕಾಗಿ ತರಬೇತಿ ಮುಗಿಸಿಕೊಂಡವರಿಗೆ ಸಾಲ ಕೊಡದೇ ಸತಾಯಿಸುತ್ತಿರುವ ಆರೋಪಗಳು ಕೇಳಿ ಬರುತ್ತಿವೆ. ಈ ಬಗ್ಗೆ ಲೀಡ್ ಬ್ಯಾಂಕ್ ಅಧಿಕಾರಿಗಳು ಕ್ರಮಜರುಗಿಸಬೇಕು ಎಂದು ಒತ್ತಾಯಿಸಿದರು. ವಿದ್ಯುತ್ ಸಮಸ್ಯೆ ಬಗೆಹರಿಯದಿದ್ದರೆ ಶಾಸಕರ ಮನೆ ಮುಂದೆ ಅ.೧೬ರ ಸೋಮವಾರ ಪ್ರತಿಭಟನೆ ನಡೆಸ ಲಾಗುವುದು ಎಂದು ಎಚ್ಚರಿಸಿ ದರು.
ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಹೊನ್ನಾಳಿಯ ಅಧ್ಯಕ್ಷ ಅರಬಗಟ್ಟೆ ಕೆ.ಸಿ.ಬಸಪ್ಪ ಮಾತ ನಾಡಿ ೨೬೧ ಬರಗಾಲ ಪೀಡಿತ ತಾಲ್ಲೂಕು ಗಳ ಎ ಸೊಸೈಟಿ ಗಳಲ್ಲಿರುವ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು. ಬೆಳೆ ಪರಿಹಾರವನ್ನು ಎಕರೆಗೆ ೨೫೦೦೦ ರಂತೆ ನೀಡಬೇಕು ಮತ್ತು ತುರ್ತಾಗಿ ಬೆಳೆ ಪರಿಹಾರ ನೀಡಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಕುರುವ ಗಣೇಶಪ್ಪ, ಕರಿಬಸಪ್ಪ ಗೌಡ ಅವರು ಮಾತನಾಡಿದರು.
ಸಮಾಜ ಕಲ್ಯಾಣಾಧಿಕಾರಿ ಎಚ್.ಎಲ್. ಉಮಾ, ಬಿಸಿಎಂ ಅಧಿಕಾರಿ ಟಿ.ಎಚ್. ಮೃತ್ಯುಂ ಜಯಸ್ವಾಮಿ, ಯು.ಟಿ.ಪಿ. ಎಇಇ ಕೆ.ಎಂ. ಮಂಜುನಾಥ್, ಟಿಎಚ್‌ಒ ಡಾ.ಕೆಂಚಪ್ಪ ಆರ್.ಬಂತಿ, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಗಣೇಶ್ ರಾವ್, ಬೆಸ್ಕಾಂ ಎಇಇ ಬಿ.ಕೆ. ಶ್ರೀನಿವಾಸ್, ಗ್ರಾಮೀಣ ಕುಡಿಯುವ ನೀರು ಮತ್ತು ನೈಮಲ್ಯ ಇಲಾಖೆಯ ಸೋಮ್ಲಾನಾಯ್ಕ್, ಪಿಐ ಎನ್. ರವಿ, ಪಿಎಸ್‌ಐ ಜಯಪ್ಪನಾಯ್ಕ್, ಅರಣ್ಯ ಇಲಾಖೆಯ ಸೈಯದ್ ರಿಜನ್ ಭಾಷಾ ಲೋಕೋಪ ಯೋಗಿ ಇಲಾಖೆಯ ಎಸ್.ಕೆ. ಕಣುಮಪ್ಪ, ತೋಟಗಾರಿಕಾ ಇಲಾಖೆಯ ಸಿ.ವೈ. ರಮೇಶ್, ರಾಜಸ್ವ ನಿರೀಕ್ಷಕರಾದ ವೃಷಭೇಂದ್ರಯ್ಯ, ಸಂತೋಷ್, ಶಿರಸ್ತೇದಾರ್ ಕೆಂಚಮ್ಮ, ಗ್ರಾಮ ಆಡಳಿತಾಧಿಕಾರಿಗಳಾದ ರಾಘವೇಂದ್ರ, ಗಣೇಶ್, ವಿಜಯಕುಮಾರ್, ಮಶಪ್ಪ, ಶಿವಕುಮಾರ್, ಮಂಜುನಾಥ್, ಎಫ್.ಡಿ.ಎ.ಸುಧೀರ್, ಧನುಷ್ ಹಾಗೂ ಅವಳಿ ತಾಲ್ಲೂಕುಗಳ ರೈತರು ಉಪಸ್ಥಿತರಿದ್ದರು.