ಏ.2: ಆರೋಗ್ಯ ಉತ್ಸವ ಜನಜಾಗೃತಿ ಸಮಾವೇಶ…
ಶಿವಮೊಗ್ಗ: ಪ್ರತಿಷ್ಠಿತ ವಿನ್ಲೈಫ್ ಟ್ರಸ್ಟ್ ವತಿಯಿಂದ ಆರೋಗ್ಯ ಉತ್ಸವ ಜನಜಾಗೃತಿ ಸಮಾವೇಶವನ್ನು ಏ.೨ರ ಭಾನುವಾರ ಬೆಳಿಗ್ಗೆ ೯ರಿಂದ ಮಧ್ಯಾಹ್ನ ೨ರವರೆಗೆ ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ವಿನ್ಲೈಫ್ ಮ್ಯಾನೇಜಿಂಗ್ ಟ್ರಸ್ಟಿ ಹಾಗೂ ಮೆಟ್ರೋ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಪಥ್ವಿ ಬಿ.ಸಿ. ಅವರು ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ವಿನ್ಲೈಫ್, ಮೆಟ್ರೋ ಆಸ್ಪತ್ರೆ ಹಾಗೂ ಮಣಿಪಾಲ್ ಆಸ್ಪತ್ರೆ, ಬೆಂಗಳೂರು ಇವರ ಸಹಯೋಗ ದಲ್ಲಿ ತುರ್ತು ಜೀವರಕ್ಷಕ ತರಬೇತಿ ಮತ್ತು ಕಾರ್ಯಾಗಾರ ದೈನಂದಿನ ಬದುಕಿನಲ್ಲಿ ಒತ್ತಡ ನಿರ್ವಹಣೆ, ಮಧುಮೇಹ ೩೬೦ ಈ ವಿಷಯಗಳ ಕುರಿತು ಅರಿವು ಮೂಡಿಸುವ ದೃಷ್ಟಿಯಿಂದ ಆರೋಗ್ಯ ಉತ್ಸವ ಜನಜಗೃತಿ ಸಮಾವೇಶ ಆಯೋಜಿಸಲಾಗಿದೆ ಎಂದರು.
ಈ ಸಮಾವೇಶದಲ್ಲಿ ಆರೋಗ್ಯ ಕುರಿತು ಪ್ರಾಯೋಗಿಕ ತರಬೇತಿ, ಕಾರ್ಯಾಗಾರ, ಯೋಗ, ವಸ್ತು ಪ್ರದರ್ಶನ, ಕಿರುನಾಟಕ ಪ್ರದರ್ಶನ, ಸಮಾಲೋಚನೆ ಹಾಗೂ ಉಪನ್ಯಾಸ ಏರ್ಪಡಿಸಲಾಗಿದೆ. ಎಲ್ಲರೂ ಈ ಆರೋಗ್ಯ ಉತ್ಸವದ ಸಮಾವೇಶ ದಲ್ಲಿ ಭಾಗವಹಿಸಿ ಹೆಚ್ಚಿನ ಅರಿವು ಪಡೆದುಕೊಳ್ಳಬೇಕಾಗಿ ಅವರು ವಿನಂತಿಸಿದರು.
ಇದೊಂದು ಆರೋಗ್ಯದ ಜನಜಾಗೃತಿ ಸಮಾವೇಶವಾಗಿದೆ. ಆರೋಗ್ಯವು ನಮ್ಮ ನಮ್ಮ ಕೈಯಲ್ಲಿಯೇ ಇರುತ್ತದೆ. ಈ ಬಗ್ಗೆ ಅರಿವು ಮೂಡಿಸುವುದು ಇಂದಿನ ಅವಶ್ಯಕತೆಯಾಗಿದೆ. ಮಧುಮೇಹವನ್ನು ಕೂಡ ಎ ಆಯಾಮದಲ್ಲೂ ಚಿಕಿತ್ಸೆ ಪಡೆದುಕೊಂಡರೆ ೧೦೦ ವರ್ಷ ಬದುಕಲು ಸಾಧ್ಯವಾಗುತ್ತದೆ. ಉಚಿತ ನೊಂದಣಿಗಾಗಿ ಮೊ: ೭೮೯೯೨೦೩೦೩೮ಕ್ಕೆ ಕರೆ ಮಾಡಬಹುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಿನ್ಲೈಫ್ನ ನಿದೇಶಕರಾದ ಡಾ|| ಶಂಕರ್, ಡಾ|| ವಿಜಯ್ ಕುಮಾರ್, ರೆಹಮತ್, ಬದ್ರಿನಾಥ್ ಉಪಸ್ಥಿತರಿದ್ದರು.