ಜಿಲ್ಲಾ ಸುದ್ದಿತಾಜಾ ಸುದ್ದಿ

ಉದ್ಯಮದ ಜತೆಯಲ್ಲಿ ಸೇವಾ ಕಾರ್ಯವು ಅತ್ಯಂತ ಮುಖ್ಯ…

Share Below Link

ಶಿವಮೊಗ್ಗ: ಯುವ ಉದ್ಯಮಿ ಗಳು ಉದ್ಯಮವನ್ನು ಯಶಸ್ವಿ ಯಾಗಿ ಮುನ್ನಡೆಸುವ ಜತೆಯಲ್ಲಿ ಸಮಾಜದ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ವಿಪ ಸದಸ್ಯ ಎಸ್.ರುದ್ರೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.
ಶಿವಮೊಗ್ಗ ಜಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಸಂಘದ ಮಾಜಿ ಅಧ್ಯಕ್ಷ ಹಾಗೂ ಎಫ್‌ಕೆಸಿಸಿಐ ಮ್ಯಾನೇಜಿಂಗ್ ಕಮಿಟಿ ಸದಸ್ಯ ರಾಗಿ ಆಯ್ಕೆಯಾಗಿರುವ ಡಿ.ಎಂ. ಶಂಕರಪ್ಪ ಅವರಿಗೆ ಮಾಜಿ ಅಧ್ಯ ಕ್ಷರು ಆಯೋಜಿಸಿದ್ದ ಅಭಿನಂದನಾ ಕಾರ್‍ಯಕ್ರಮದಲ್ಲಿ ಮಾತನಾಡಿದರು.
ತಂತ್ರeನ ಕ್ಷೇತ್ರದಲ್ಲಿ ಯುವ ಉದ್ಯಮಿಗಳಿಗೆ ಹೆಚ್ಚಿನ ಅವಕಾಶ ಇದ್ದು, ಪರಿಣಾಮಕಾರಿಯಾಗಿ ಬಳಸಿಕೊಂಡು ಹಂತ ಹಂತವಾಗಿ ಬೆಳೆಯಬೇಕು. ಸಂಸ್ಥೆ ಪ್ರಗತಿ ಹೊಂದುವ ಜತೆಯಲ್ಲಿ ಸಮಾಜದ ಬೆಳವಣಿಗೆಯಲ್ಲಿ ಪಾಲ್ಗೊಳ್ಳಬೇಕು. ಸಮಾಜಮುಖಿ ಕಾರ್ಯಗಳಲ್ಲಿ ಯುವ ಉದ್ಯಮಿಗಳನ್ನು ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಶಿವಮೊಗ್ಗ ಜಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘವು ಈಗಾ ಗಲೇ ಹಿರಿಯ ಅಧ್ಯಕ್ಷರ ಕೊಡುಗೆ ಯಿಂದ ರಾಜ್ಯದಲ್ಲಿಯೇ ಮಾದರಿ ಸಂಘಟನೆಯಾಗಿ ಗುರುತಿಸಿ ಕೊಂಡಿದೆ. ಸ್ಕಿಲ್ ಅಕಾಡೆಮಿ ಆರಂಭ ಮಾಡಲು ಮುಂದಾಗಿ ರುವುದು ಶ್ಲಾಘನೀಯ ಎಂದರು.
ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಮಾತನಾಡಿ, ಡಿ.ಎಂ.ಶಂಕರಪ್ಪ ಅವರು ಅನೇಕ ಸಂಘ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ವಾಣಿಜ್ಯ ಸಂಘದಲ್ಲಿ ಉನ್ನತ ಸ್ಥಾನ ತಲುಪಿ ಸಮರ್ಥವಾಗಿ ಸೇವಾ ಕಾರ್ಯ ನಡೆಸುವಂತಾಗಲಿ ಎಂದು ಶುಭಕೋರಿದರು.
ಇದೇ ಸಂದರ್ಭದಲ್ಲಿ ಶಿವಮೊಗ್ಗ ಜಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮಾಜಿ ಅಧ್ಯಕ್ಷ ರಿಂದ ಎಫ್‌ಕೆಸಿಸಿಐ ಮ್ಯಾನೇಜಿಂಗ್ ಕಮಿಟಿ ಸದಸ್ಯ ಡಿ.ಎಂ.ಶಂಕರಪ್ಪ ಅವರಿಗೆ ಆತ್ಮೀಯವಾಗಿ ಅಭಿನಂದಿ ಸಲಾಯಿತು.
ಶಿವಮೊಗ್ಗ ಜಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಮಾತನಾಡಿ, ಡಿ.ಎಂ.ಶಂಕರಪ್ಪ ಅವರು ಶಿವಮೊಗ್ಗ ಸಂಘದ ಅಧ್ಯಕ್ಷ ರಾಗಿ ಯೂ ಕಾರ್ಯ ನಿರ್ವಹಿಸಿ zರೆ. ಇದೀಗ ಮ್ಯಾನೇಜಿಂಗ್ ಕಮಿಟಿ ಸದಸ್ಯರಾಗಿ ಆಯ್ಕೆ ಆಗಿರುವುದು ಹೆಮ್ಮೆಯ ಸಂಗತಿ. ಮುಂದಿನ ದಿನಗಳಲ್ಲಿ ಉನ್ನತ ಸ್ಥಾನ ತಲುಪು ವಂತಾಗಲಿ ಎಂದು ಆಶಿಸಿದರು.
ಶಿವಮೊಗ್ಗ ಜಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮಾಜಿ ಅಧ್ಯಕ್ಷ ಟಿ.ಆರ್.ಅಶ್ವತ್ಥ್ ನಾರಾ ಯಣ ಶೆಟ್ಟಿ, ಕೆ.ವಿ.ವಸಂತ್ ಕುಮಾರ್, ಜೆ.ಆರ್.ವಾಸು ದೇವ್, ಉಪಾಧ್ಯಕ್ಷ ಬಿ.ಗೋಪಿ ನಾಥ್, ಕಾರ್ಯದರ್ಶಿ ವಸಂತ್ ಹೋಬಳಿದಾರ್, ಸಹ ಕಾರ್ಯ ದರ್ಶಿ ಜಿ.ವಿಜಯ್‌ಕುಮಾರ್ ಉಪಸ್ಥಿತರಿದ್ದರು.