ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಕೆಪಿಸಿಸಿ 2 ಲಕ್ಷ ದೇಣಿಗೆ ನೀಡಿ ಅರ್ಜಿ ಸಲ್ಲಿಸಿದ ಮೂಲ ಕಾಂಗ್ರೆಸ್ಸಿಗರಿ ಟಿಕೆಟ್ ನೀಡಿ…

Share Below Link

ಶಿವಮೊಗ್ಗ: ಮುಂಬರುವ ವಿಧಾನಸಾಭ ಚುನಾವಣೆಗೆ ಶಿವಮೊಗ್ಗ ನಗರ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಹನ್ನೊಂದು ಮಂದಿ ಆಕಾಂಕ್ಷಿಗಳು ಈಗಾಗಲೇ ಅರ್ಜಿ ಸಲ್ಲಿಸಿzರೆ. ಅರ್ಜಿ ಸಲ್ಲಿಸಿದವರಲ್ಲಿ ಯಾರಿಗಾ ದರೂ ಒಬ್ಬರಿಗೆ ಟಿಕೆಟ್ ಕೊಡ ಬೇಕೇ ವಿನಃ ಹೊರಗಿನಿಂದ ಬಂದ ವರಿಗೆ ಅಥವಾ ದಿಢೀರ್ ಪಕ್ಷಕ್ಕೆ ಬಂದವರಿಗೆ ಟಿಕೆಟ್ ನೀಡಬಾರದು ಎಂದು ೩೨ ವಾರ್ಡಿನ ಅಧ್ಯಕ್ಷರು ಸಭೆ ಸೇರಿ ತೀರ್ಮಾನ ಮಾಡಿದ್ದು, ಪ್ರಮಾಣ ಕೂಡ ಮಾಡಿ zರೆ.
ಈ ಸಂದರ್ಭದಲ್ಲಿ ವಾರ್ಡಿನ ಪ್ರಮುಖರು ಚರ್ಚಿಸಿ ತೀರ್ಮಾ ನಕ್ಕೆ ಬಂದಿದ್ದು, ಅರ್ಜಿ ಸಲ್ಲಿಸಿದ ವರಿಗೆ ಟಿಕೆಟ್ ನೀಡಬೇಕು. ಪಕ್ಷದಲ್ಲಿ ಕನಿಷ್ಠ ಮೂರರಿಂದ ಐದು ವರ್ಷವಾದರೂ ಕೆಲಸ ಮಾಡಿರಬೇಕು. ಅದನ್ನು ಬಿಟ್ಟು ಈಗ ಬಂದವರಿಗೆ ಯಾವುದೇ ಕಾರಣಕ್ಕೂ ಮಣೆ ಹಾಕಬಾರದು. ಪಕ್ಷಕ್ಕಾಗಿದುಡಿದ ಕಟ್ಟಕಡೆಯ ಕಾರ್ಯಕರ್ತನಿಗೆ ಟಿಕೆಟ್ ನೀಡಿ ದರೂ ಕೂಡ ನಾವು ಒಪ್ಪುತ್ತೇವೆ. ಆದರೆ ಹೊರಗಿನಿಂದ ಬಂದವರಿಗೆ ಮಣೆ ಹಾಕಿದಲ್ಲಿ ನಾವೆಲ್ಲರೂ ವಾರ್ಡಿನ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಸ್ಥಾನಕ್ಕೆ ಸಾಮೂಹಿಕ ರಾಜೀನಾಮೆ ನೀಡಿ ಚುನಾವಣೆ ಯಿಂದ ದೂರ ಉಳಿಯುತ್ತೇವೆ ಎಂದು ಎಚ್ಚರಿಸಿದರು.
ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಸಂಘಟನೆಗಾಗಿ, ಬಲವ ರ್ಧನೆಗಾಗಿ ಸದಸ್ಯತ್ವ ನವೀಕರಣ ಕ್ಕಾಗಿ, ಪ್ರಚಾರಕ್ಕಾಗಿ, ಆಡಳಿತ ಪಕ್ಷದ ವಿರುದ್ಧ ಪ್ರತಿಭಟನೆಗಾಗಿ ಹಗಲು ರಾತ್ರಿ ಶ್ರಮಿಸಿzರೆ. ಇಷ್ಟು ವರ್ಷ ನಾವು ಕಟ್ಟಿ ಬೆಳೆಸಿದ ಪಕ್ಷದಲ್ಲಿ ಗೆದ್ದಲು ನಿರ್ಮಿಸಿದ ಹುತ್ತದಲ್ಲಿ ಹಾವು ಸೇರಿಕೊಂಡಂತೆ ಕಾಂಗ್ರೆಸ್ ಪಕ್ಷವನ್ನು ಸೇರಿಕೊಂಡರೆ ಅವರಿಗೆ ಮಣೆ ಹಾಕಬಾರದು ಎಂದು ತಿಳಿಸಿzರೆ.