ಸಹಕಾರ ಕ್ಷೇತ್ರದ ಅಭಿವೃದ್ಧಿಯಲ್ಲಿ ಯೂನಿಯನ್ ಪಾತ್ರ ಪ್ರಮುಖ…
ದಾವಣಗೆರೆ : ಸಹಕಾರ ಕ್ಷೇತ್ರದ ಬೆಳವಣಿಗೆ ಮತ್ತು ಅಭಿವೃದ್ಧಿಯಲ್ಲಿ ಜಿ ಸಹಕಾರ ಯೂನಿಯನ್ ಪ್ರಮುಖ ಪಾತ್ರ ವಹಿಸಿದೆ ಎಂದು ಜಿ ಸಹಕಾರ ಯೂನಿಯನ್ ಅಧ್ಯಕ್ಷ ಸಿರಿಗೆರೆ ರಾಜಣ್ಣ ಹೇಳಿದರು.
ನಗರದ ಸದ್ಯೋಜತ ಹಿರೇಮಠದಲ್ಲಿ ನಡೆದ ಒಕ್ಕೂಟದ ೨೦೨೨-೨೩ನೇ ಸಾಲಿನ ೨೦ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯೂನಿಯನ್ ಸ್ಥಾಪನೆಗೊಂಡ ಈ ೧೯ ವರ್ಷಗಳಲ್ಲಿ ಸಹಕಾರ ಕ್ಷೇತ್ರದ ಬಲವರ್ಧನೆಗಾಗಿ ಸಾಕಷ್ಟು ಶ್ರಮಿಸಿದೆ. ಜಿಯಲ್ಲಿ ಸುಮಾರು ೧೨೫೨ ವಿವಿಧ ರೀತಿಯ ಸಹಕಾರ ಸಂಸ್ಥೆಗಳು ಕಾರ್ಯನಿರ್ವಹಿಸು ತ್ತಿದ್ದು, ಸಹಕಾರ ಚಳುವಳಿಗೆ ಅಗತ್ಯವಿರುವ ಶಿಕ್ಷಣ, ತರಬೇತಿ ಮತ್ತು ಪ್ರಚಾರ ನೀಡುವ ನೆಲೆಯಲ್ಲಿ ಮಾತೃಸಂಸ್ಥೆಯಾಗಿ ಕೆಲಸ ಮಾಡುತ್ತಿದೆ ಎಂದರು.
ಯೂನಿಯನ್ ಹಿರಿಯ ನಿರ್ದೇಶಕ ಡಾ.ಜೆ.ಆರ್. ಷಣ್ಮುಖಪ್ಪ ಮಾತನಾಡಿ, ಕೇಂದ್ರ ಸರ್ಕಾರ ದೇಶದಲ್ಲಿ ಸಹಕಾರ ಕ್ಷೇತ್ರವನ್ನು ಮತ್ತಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಸಾಕಷ್ಟು ಬದಲಾವಣೆ ಗಳನ್ನು ತರುತ್ತಿದೆ. ಭವಿಷ್ಯದಲ್ಲಿ ಸಹಕಾರ ಸಂಘಗಳ ಮೂಲಕವೇ ಎಲ್ಲ ಅಗತ್ಯ ವಸ್ತುಗಳ ಮಾರಾಟ ಮಾಡಲು ನಿರ್ಧರಿಸಿದೆ. ಈ ಮೂಲಕ ಸಹಕಾರ ಸಂಘಗಳನ್ನು ಆರ್ಥಿಕವಾಗಿ ಬಲಗೊಳಿಸುವುದು ಕೇಂದ್ರ ಸರ್ಕಾರದ ಚಿಂತನೆಯಾಗಿದೆ ಎಂದರು.
ಸಭೆಯಲ್ಲಿ ಯೂನಿಯನ್ ಉಪಾಧ್ಯಕ್ಷ ಬೇತೂರು ರಾಜಣ್ಣ, ನಿರ್ದೇಶಕರಾದ ಎಸ್.ಬಿ. ಶಿವ ಕುಮಾರ್, ಡಿ.ಎಂ. ಮುರುಗೇಂ ದ್ರಯ್ಯ, ಆರ್.ಜಿ. ಶ್ರೀನಿವಾಸ ಮೂರ್ತಿ, ಕೆ.ಜಿ. ಸುರೇಶ್, ಎಸ್.ಜಿ. ಪರಮೇಶ್ವರಪ್ಪ, ಶ್ರೀಮತಿ ಅನ್ನಪೂರ್ಣ, ಎಂ.ವಿ.ರಾಜ್, ಎನ್.ಎಂ.ಸ್ವಾಮಿ, ಸಿಬ್ಬಂದಿಗಳಾದ ಮಂಗಳಗೌಡ ದಾನಪ್ಪ ಗೌಡ, ಕೆ.ಎಚ್.ಸಂತೋಷ್ ಕುಮಾರ್, ಕೆ.ಎಂ.ಜಗದೀಶ್,ವಿ.ರಂಗನಾಥ್ ಮತ್ತು ಆರ್.ಸ್ವಾಮಿ ಉಪಸ್ಥಿತರಿದ್ದರು.