ಲಿಂಗತ್ವ ಅಲ್ಪಸಂಖ್ಯಾತರನ್ನು ಗೌರವದಿಂದ ಕಾಣಬೇಕಿದೆ : ನ್ಯಾ.ಮಲ್ಲಿಕಾರ್ಜುನಗೌಡ
ಶಿವಮೊಗ್ಗ : ಕುಟುಂಬ ಮತ್ತು ಸಮಾಜ ಲಿಂಗತ್ವ ಅಲ್ಪಸಂಖ್ಯಾತ ರನ್ನು ಗೌರವದಿಂದ ಕಾಣಬೇಕು ಎಂದು ಪ್ರಧಾನ ಜಿ ಮತ್ತು ಸತ್ರ ನ್ಯಾಯಾಧೀಶರಾದ ಮಲ್ಲಿಕಾ ರ್ಜುನಗೌಡ ತಿಳಿಸಿದರು.
ಜಿಡಳಿತ, ಜಿ ಪಂಚಾಯತ್, ಜಿ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶಿವಮೊಗ್ಗ ಜಿ ಮತ್ತು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ದಿ ನಿಗಮ ಬೆಂಗಳೂರು ಹಾಗೂ ರಕ್ಷ ಸಮುದಾಯ ಸಂಘ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಇಂದು ಡಿ.ಆರ್.ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಲಿಂಗತ್ವ ಅಲ್ಪಸಂಖ್ಯಾತರಿಗೆ ಒಂದು ದಿನದ ಕಾರ್ಯಾಗಾರ ಹಾಗೂ ಸ್ವೀಪ್- ಮತದಾರರ ಜಗೃತಿ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿ ದ ಅವರು ನಾವು ಒಂದು ಅಂಗವಿಕಲ ಮಗು ಹುಟ್ಟಿದರೆ ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತೇವೆ. ಅದೇ ಟ್ರಾನ್ಸ್ಜೆಂಡರ್ ಎಂದು ತಿಳಿದಾಗ ತುಚ್ಚವಾಗಿ ಕಾಣಲು ಆರಂಭಿಸು ತ್ತೇವೆ. ಈ ನಮ್ಮ ಆತ್ಮ ಗಂಡೂ ಅಲ್ಲ, ಹೆಣ್ಣೂ ಅಲ್ಲ. ಅದನ್ನು ಲಿಂಗದಿಂದ ತುಲನೆ ಮಾಡಲು ಸಾಧ್ಯವಿಲ್ಲ. ವ್ಯಕ್ತಿತ್ವದಿಂದ ಅಥವಾ ಆತ್ಮದಿಂದ ವ್ಯಕ್ತಿಯನ್ನು ತುಲನೆ ಮಾಡಲಾಗುತ್ತದೆ. ಆದ್ದರಿಂದ ಯಾವುದೇ ಲಿಂಗತ್ವ ಅಲ್ಪಸಂಖ್ಯಾ ತರನ್ನು ತುಚ್ಚವಾಗಿ ಕಂಡು ಕಡೆಗಣಿಸಬಾರದು ಎಂದರು.
ಕುಟುಂಬ ಅಂತಹ ವ್ಯಕ್ತಿ ಯನ್ನು ಗೌರವ, ಪ್ರೀತಿಯಿಂದ ಕಾಣಬೇಕು. ಹಾಗೆ ಕಂಡಿದ್ದರೆ ಈ ರೀತಿ ತಮ್ಮ ಹಕ್ಕಿಗಾಗಿ ಹೋರಾ ಡುವ ಅವಶ್ಯಕತೆ ಬರುತ್ತಿರಲಿಲ್ಲ. ಕುಟುಂಬ ಮತ್ತು ಸಮಾಜ ಗೌರವ ದಿಂದ ಕಂಡು ಸ್ವೀಕರಿಸುತನಕ ಸಂಘಟಿತರಾಗಿ ಹೋರಾಡುವ ಅವಶ್ಯಕತೆ ಇದೆ.
ಸಂವಿಧಾನ ನಮ್ಮೆಲ್ಲರಿಗೂ ಸಮಾನತೆ ನೀಡಿದೆ. ಕಾನೂನಿನ ಮುಂದೆ ನಾವೆಲ್ಲರೂ ಸಮಾನರು. ಸಂವಿಧಾನದ ೨೧ ವಿಧಿ ನಮ್ಮೆಲ್ಲ ರಿಗೂ ಸಮಾನವಾಗಿ ಬದುಕುವ ಹಕ್ಕನ್ನು ನೀಡಿದೆ. ಹಕ್ಕು ಮತ್ತು ಬಾಧ್ಯತೆಗಳನ್ನು ಅರ್ಥೈಸಿಕೊಂಡು ನಾವೆಲ್ಲರೂ ಒಂದು ಎಂಬ ಒಗ್ಗಟ್ಟಿನಿಂದ ಬದುಕಬೇಕು ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದ ಬೆಂಗಳೂರಿನ ಪಯಣ ಸಂಸ್ಥೆಯ ನಿರ್ದೇಶಕಿ ಚಾಂದಿನಿ ಮಾತನಾಡಿ, ಲಿಂಗತ್ವ ಅಲ್ಪಸಂಖ್ಯಾತರನ್ನು ವಿವಿಧ ರಾಜ್ಯಗಳಲ್ಲಿ ವಿವಿಧ ರೀತಿಯಲ್ಲಿ ಕರೆಯುತ್ತಾರೆ. ಸಮಾಜ ನಮಗೆ ಒಂದು ಗುರುತನ್ನು ನೀಡಿಲ್ಲ. ಗುರುತಿಸುವಿಕೆ ಕೊರತೆ ಇದೆ.
ನಮ್ಮನ್ನು ಯಾರೂ ಆಳವಾಗಿ ತಿಳಿಯಲು ಪ್ರಯತ್ನಿಸಿಲ್ಲ. ಸರ್ಕಾರ ಪ್ರಾಣಿಗಳ ಸರ್ವೇ ಸಹ ಮಾಡಿದೆ. ಆದರೆ ನಮ್ಮ ಬಗ್ಗೆ ಸರ್ವೇ ಆಗಿಲ್ಲ. ೨೦೦೪ ರಲ್ಲಿ ಹೆಚ್ಐವಿ ಅನುದಾನ ಬರುವವರೆಗೆ ನಮ್ಮ ಬಗ್ಗೆ ಹೆಚ್ಚಾಗಿ ತಿಳಿದೇ ಇರಲಿಲ್ಲ. ಹೆಚ್ಐವಿ ನಮ್ಮಿಂದ ಹರಡಬಾರದು ಎಂಬ ಉದ್ದೇಶದಿಂದ ಆ ಕಾರ್ಯಕ್ರಮದ ಅಂಗವಾಗಿ ನಮ್ಮ ಮ್ಯಾಪಿಂಗ್ ಶುರು ಆಯಿತು. ಆಗಲೂ ಸಹ ಗುರುತಿಸಿಕೊಂಡವರು ತೀರಾ ಕಡಿಮೆ.
ಗುರುತಿಸುವಿಕೆ ಬಹಳ ಪ್ರಮುಖವಾಗುತ್ತದೆ. ನಮ್ಮಲ್ಲಿ ಅನೇಕ ವಿಧಗಳ ಜನರಿzರೆ. ಅವರ ಸರ್ವೇ ಆಗಿಲ್ಲ. ಗುರುತಿ ಸುವಿಕೆಯ ಆಧಾರದ ಮೇಲೆ ನಮಗೆ ಆಧಾರ್, ಇತರೆ ಗುರುತಿನ ಚೀಟಿಗಳು ಲಭ್ಯವಾಗುತ್ತಿಲ್ಲ. ಹಲವರು ಗಂಡು, ಹೆಣ್ಣು ಮತ್ತು ಕೆಲವರು ಟ್ರಾನ್ಸ್ಜೆಂಡರ್ ಎಂದು ಗುರುತಿಸಿಕೊಳ್ಳುತ್ತಾರೆ.
ಕುಟುಂಬದವರೇ ಆಗಲೀ ಅಥವಾ ಸಮಾಜ ನಮ್ಮನ್ನು ಪ್ರಾಣಿ ಗಿಂತ ಕೀಳಾಗಿ ಕಾಣುತ್ತಾರೆ. ಹೊರಗಿನ ದೇಹವನ್ನು ಮಾತ್ರ ನೋಡುತ್ತಾರೆ. ಮಾನಸಿಕವಾಗಿ ಕುಗ್ಗಿರುವುದು ಅವರಿಗೆ ಕಾಣುವುದಿಲ್ಲ. ಅನೇಕರು ಖಿನ್ನತೆ ಮತ್ತಿತರೆ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡಿzರೆ.
ನಮ್ಮ ಬಗ್ಗೆ ಸಮಾಜದಲ್ಲಿ ಯಾವ ರೀತಿಯಲ್ಲೂ ಅರಿವು ಮೂಡಿಸಲಾಗಿಲ್ಲ. ಪಠ್ಯ ಇತರೆ ಎಲ್ಲೂ ನಮ್ಮ ಬಗ್ಗೆ ಹೆಚ್ಚಿನ ಮಾಹಿ ತಿ ಇಲ್ಲ. (೨ನೇ ಪುಟಕ್ಕೆ)