ಗಣಪತಿಯ ಸ್ಮರಣೆಯಿಂದ ವಿಘ್ನಗಳ ಪರಿಹಾರ
ಹೊಳೆಹೊನ್ನೂರು : ಎಲ್ಲ ಶುಭ ಕಾರ್ಯಗಳಲ್ಲಿ ಬರುವ ವಿಘ್ನಗಳ ಪರಿಹಾರಕ್ಕಾಗಿ ಗಣಪತಿ ಯನ್ನು ನಾವು ನಿತ್ಯದಲ್ಲಿ ಸ್ಮರಣೆ ಮಾಡಬೇಕು ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಹೇಳಿದರು.
ಚಾತುರ್ಮಾಸ್ಯದ ಅಂಗವಾಗಿ ನಡೆದ ವಿದ್ವತ್ ಸಭೆಯಲ್ಲಿ ಶ್ರೀಪಾದಂಗಳವರು ಶ್ರೀ ಸತ್ಯಧರ್ಮ ತೀರ್ಥರ ವ್ಯಾಖ್ಯಾನಾಧಾರಿತ ಮಹಾಭಾರತ ವಿರಾಟ ಪರ್ವ ಮತ್ತು ಗಣಪತಿ ಹಬ್ಬದ ನಿಮಿತ್ತ ಶಮಂತಕೋ ಪಾಖ್ಯಾನದ ಅನುಗ್ರಹ ಸಂದೇಶದ ನೀಡಿದರು.
ಭಗವಂತ ಆದೇಶ ಮಾಡಿದ ಸತ್ಕಾರ್ಯಗಳನ್ನು ಮಾಡುವಾಗ ಸಜ್ಜನರಿಗೆ ಬರುವಾಗ ವಿಘ್ನಗಳನ್ನು ತಡೆಯಲು ಗಣಪತಿಗೆ ವಿಶಿಷ ಸ್ಥಾನವನ್ನು ದೇವರು ಕೊಟ್ಟಿzನೆ. ವಿಶ್ವನಾಮಕನಾದ ಪರಮಾತ್ಮನ ೧೯ ಮುಖದೊಳಗಿನ ಮಧ್ಯದ ಮುಖ ಗಜಮುಖ. ಅಂತಹ ಗಜಮುಖ ವನ್ನು ಗಣಪತಿ ಪಡೆದಿzನೆ ಎಂದರು.
ದೇವರ ಗುಣಗಳ ಚಿಂತನ, ದೇವರ ಸರ್ವೋತ್ತಮತ್ವ, ದೇವರ ಆe ಪಾಲಿಸಬೇಕಾದ ಪ್ರವೃತ್ತಿ ಇದೇ ಮೊದಲಾದ ಸುeನಕ್ಕೆ ಬರುವ ವಿಘ್ನವನ್ನು ತಡೆಯಬೇಕೆಂದು ಗಣಪತಿಯಲ್ಲಿ ನಾವು ಪ್ರಾರ್ಥಿಸ ಬೇಕು. ವೇದವ್ಯಾಸ ದೇವರ ಆeಯಂತೆ ಮಹಾಭಾರತವನ್ನು ಬರೆದ ಗಣಪತಿ ನಮ್ಮ ಮಸ್ತಕ ದಲ್ಲಿಯೂ ಮಹಾಭಾರತದ eನ ವನ್ನು ನೀಡುವಂತೆ ಪ್ರಾರ್ಥಿಸಬೇಕು ಎಂದರು.
ಪ್ರಹ್ಲಾದ ರಾಜರಂತೆ ಭಕ್ತಿ ಇರಬೇಕು :
ಪಂಡಿತರಾದ ಕೃಷ್ಣಾಚಾರ್ಯ ರಾಯಚೂರು ಮಾತನಾಡಿ, ಎಂತಹ ಸಂಕಷ್ಟ, ಪ್ರತೀ ಅವಸ್ಥೆ ಯಲ್ಲಿಯೂ ದೇವರು ನಮ್ಮನ್ನು ರಕ್ಷಣೆ ಮಾಡುತ್ತಾನೆ ಎಂಬುದನ್ನು ಪ್ರಹ್ಲಾದರಾಜರ ಚರಿತ್ರೆಯಿಂದ ತಿಳಿದುಕೊಳ್ಳಬಹುದು. ಆದರೆ ನಮ್ಮಲ್ಲಿ ಅಂತಹ ಪುಣ್ಯ ಇರಬೇಕು. ಕಿಂಚಿತ್ತಾದರೂ ದೇವರಲ್ಲಿ ಭಕ್ತಿ ಇರಬೇಕು ಎಂದರು.
ದೇವರ ನಾಮಸ್ಮರಣೆಯನ್ನು ಭಕ್ತಿ ಶ್ರದ್ಧೆಯಿಂದ ಮಾಡಿದರೆ ಸ್ವಪ್ನದಲ್ಲಿಯೂ ಯಮಭಟರ ಕಾಟ ನಮಗೆ ಇರುವುದಿಲ್ಲ ಎಂದು ಶಾಸ ಹೇಳುತ್ತದೆ. ಹೀಗಾಗಿ ದೇವರ ನಾಮ ಸ್ಮರಣೆ ಸದಾಕಾಲ ಮಾಡಬೇಕು. ವೈರಾಗ್ಯಯುತವಾದ ಬದುಕು ನಡೆಸಬೇಕು. ಮಹಾನು ಭಾವರಾದ ಸ್ವಾಮಿಗಳ ಮುಖೇನ eನೋಪದೇಶ ಪಡೆಯಬೇಕು ಎಂದರು.
ಪಂಡಿತ ಶರತ್ಚಂದ್ರಾ ಚಾರ್ಯ ಪ್ರವಚನ ನೀಡಿದರು. ಪಂಡಿತ ಪೂಜ್ಯರಾದ ಗುತ್ತಲ ರಂಗಾಚಾರ್ಯ, ಮಠದ ದಿವಾನರಾದ ಶಶಿ ಆಚಾರ್ಯ, ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ನವರತ್ನ ಸುಬ್ಬಣ್ಣಾಚಾರ್ಯ, ನವರತ್ನ ಶ್ರೀನಿವಾಚಾರ್ಯ, ನವರತ್ನ ಪುರುಷೋತ್ತ ಮಾಚಾರ್ಯ, ನವರತ್ನ ರಾಮಾಚಾರ್ಯ, ಕಡೂರು ಮಧುಸೂಧನಾಚಾರ್ಯ, ರಘೂತ್ತಮಾಚಾರ್ಯ ಸಂಡೂರು, ಕಪುರ ಜಯತೀರ್ಥಾಚಾರ್ಯ, ಬಾಳಗಾರು ಜಯತೀರ್ಥಾ ಚಾರ್ಯ ಮೊದಲಾದವರಿದ್ದರು.