ಉದ್ದಿಮೆಗಳ ಅಭಿವೃದ್ಧಿಗೆ ಕೌಶಲ್ಯತೆ ಬಹಳ ಪ್ರಮುಖ :ಡಿಸಿ
ಶಿವಮೊಗ್ಗ: ಉದ್ದಿಮೆಗಳ ಅಭಿವೃದ್ಧಿಗೆ ಕೌಶಲ್ಯತೆ ಬಹಳ ಪ್ರಮುಖ ಎಂದು ಜಿಧಿಕಾರಿ ಡಾ. ಆರ್. ಸೆಲ್ವಮಣಿ ಹೇಳಿದರು.
ಅವರು ಇಂದು ಜಿ ವಾಣಿ ಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಸಂಘದ ಶಾಂತಲಾ ಸ್ಪೆರೋಕ್ಯಾಸ್ಟ್ ಸಭಾಂಗಣದಲ್ಲಿ ಆಯೋಜಿಸಿದ್ದ ಇಂಜಿನಿಯರ್ಸ್ ಡೇ ಮತ್ತು ಸರ್ ಎಂ. ವಿಶ್ವೇಶ್ವರ ಯ್ಯ ಜನ್ಮದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿಶ್ವೇಶ್ವರಯ್ಯನವರು ಈ ನಾಡು ಕಂಡು ಅದ್ಭುತ ವ್ಯಕ್ತಿ. ಶಿವ ಮೊಗ್ಗ ಜಿಗೂ ಇವರ ಕೊಡುಗೆ ಅಪಾರವಾಗಿದೆ. ಭದ್ರಾವತಿಯ ಎರಡು ಕಾರ್ಖಾನೆಗಳ ಸ್ಥಾಪನೆಗೆ ಇವರು ಕಾರಣರಾಗಿzರೆ. ಸ್ವತಂ ತ್ರ ಭಾರತದ ಸಮಗ್ರ ಅಭಿವೃದ್ಧಿ ಯಲ್ಲಿ ಇವರ ಪಾತ್ರವೂ ಇದೆ. ಇವರ eನ ಕೌಶಲ್ಯ ಶಕ್ತಿ ಅಪಾರ ವಾದುದು ಎಂದರು.
ಯಾವುದೇ ಉದ್ಯಮಗಳು ಯಶಸ್ವಿಯಾಗಬೇಕಾದರೆ ಕೌಶಲ್ಯತೆ ಬಹಳ ಮುಖ್ಯವಾಗುತ್ತದೆ. ಜಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘವು ಕೂಡ ಶಿವಮೊಗ್ಗದಲ್ಲಿ ಕೌಶಲ್ಯಾಭಿವೃದ್ಧಿ ಕೇಂದ್ರವನ್ನು ಸ್ಥಾಪಿಸುವ ಚಿಂತನೆ ಇದೆ. ಈ ಬಗ್ಗೆ ಹಲವು ಬಾರಿ ಪ್ರಸ್ತಾಪಿಸಿzರೆ ಕೂಡ. ಇದರಿಂದ ಇಲ್ಲಿ ಕೈಗಾರಿಕೆ ಗಳು ಯಶಸ್ವಿಯಾಗಲು ಸಹಕಾರಿ ಯಾಗುತ್ತದೆ. ಸರ್ಕಾರದ ಸಹಾಯ ದಿಂದ ಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪನೆಗೆ ನಿವೇಶನ ನೀಡಲು ಪ್ರಯತ್ನಿಸಲಾಗುವುದು ಎಂದರು.
ಇಂದು ಪ್ರಜಪ್ರಭುತ್ವದ ದಿನಾಚರಣೆ ಕೂಡ. ಭಾರತವು ಇಡೀ ಜಗತ್ತಿನಲ್ಲಿಯೇ ಬಹು ದೊಡ್ಡ ಪ್ರಜಪ್ರಭುತ್ವದ ರಾಷ್ಟ್ರವಾ ಗಿದೆ. ಸ್ವಾತಂತ್ರ್ಯದ ನಂತರ ಭಾರತ ಅಭಿವೃದ್ಧಿಯತ್ತ ಸಾಗಿದೆ. ಶಿವ ಮೊಗ್ಗವೂ ಇದಕ್ಕೆ ಹೊರತಾಗಿಲ್ಲ. ಉದ್ದಿಮೆಗಳಿಗೆ ಅನುಕೂಲವಾಗು ವಂತೆ ವಿಮಾನ ನಿಲ್ದಾಣ ಕೂಡ ಆರಂಭವಾಗಿದೆ. ಮುಂದಿನ ದಿನ ಗಳಲ್ಲಿ ಶಿವಮೊಗ್ಗದಿಂದ ಭಾರತ ದಿಂದ ಎ ಪ್ರಮುಖ ನಗರಗ ಳಿಗೂ ಹಾರಾಟ ಸೌಲಭ್ಯವನ್ನು ಕಲ್ಪಿಸಲಾಗುವುದು. ಮತ್ತು ಬೆಂಗ ಳೂರಿಗೆ ಇನ್ನೊಂದು ವಿಮಾನ ಶೀಘ್ರವೇ ಸಂಚಾರ ಆರಂಭಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಹಾರನ ಹಳ್ಳಿ ಕೆ. ಮಂಜಪ್ಪ ಅಂಡ್ ಕೋ.ನ ಹೆಚ್.ಎಂ. ಲೀಲಾಮೂರ್ತಿ, ಮಾಚೇನಹಳ್ಳಿಯ ವಿಜಯ್ ಟೆಕ್ನೋಕ್ರಾಟ್ಸ್ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಡಿ.ಜಿ. ಬೆನಕಪ್ಪ ಅವ ರನ್ನು ವಿಶೇಷವಾಗಿ ಸನ್ಮಾನಿಸಲಾ ಯಿತು. ಹಾಗೆಯೇ ೨೦೨೩ನೇ ಸಾಲಿನ ವಾಣಿಜ್ಯ ಪ್ರಶಸ್ತಿಯನ್ನು ಪುರಸ್ಕತ ಸಂಸ್ಥೆಗಳಾದ ಪ್ರಣವ್ ಪ್ಯಾಕೇಜಿಂಗ್ ಪ್ರೈವೇಟ್ ಲಿಮಿ ಟೆಡ್, ಶಿವಾಜಿ ಆಗ್ರೋ ಕಾಂಪೊ ನೆಂಟ್ಸ್, ಎನ್.ಎನ್. ಇಂಜಿನಿಯ ರಿಂಗ್ ಸಂಸ್ಥೆಗಳಿಗೆ ನೀಡಲಾಯಿ ತು.ಮತ್ತು ಅತ್ಯುತ್ತಮ ಕಾರ್ಮಿಕ ಪ್ರಶಸ್ತಿ ಪಡೆದ ಪ್ರಾರ್ಥನಾ ಇಂಜಿ ನಿಯರಿಂಗ್ ಪ್ರೈವೇಟ್ ಲಿಮಿ ಟೆಡ್ನ ಸೂಪರ್ವೈಸರ್ ಕೆ.ವೇದ ನಾಥನ್, ವೋಲ್ಮ್ಯಾಕ್ ಕಾಂಪೊನೆಂಟ್ಸ್ನ ಮೇಲ್ವಿಚಾರಕ ಸಿ. ವೀರೇಂದ್ರ ಅವರನ್ನು ಸನ್ಮಾನಿಸಲಾ ಯಿತು. ಮತ್ತು ವಿಶ್ವೇಶ್ವರಯ್ಯ ಅವರ ಜನ್ಮ ದಿನಾಚರಣೆ ಅಂಗ ವಾಗಿ ಶಾಲಾ ಮಕ್ಕಳಿಗೆ ಏರ್ಪಡಿ ಸಿದ್ದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಜಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್. ಗೋಪಿ ನಾಥ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ದ ಇನ್ಸ್ಟಿ ಟ್ಯೂಟ್ ಆಫ್ ಇಂಡಿಯನ್ ಫೌಂಡ್ರಿಮೆನ್ ನ ರಾಷ್ಟ್ರೀಯ ಅಧ್ಯಕ್ಷ ಡಿ.ಎಸ್. ಚಂದ್ರಶೇಖರ್, ವಾಣಿಜ್ಯ ಸಂಘದ ಪದಾಧಿಕಾರಿಗಳಾದ ವಸಂತ್ ಹೋಬಳಿದಾರ್, ಜಿ. ವಿಜಯ ಕುಮಾರ್, ಬಿ.ಆರ್. ಸಂತೋಷ್ ಇದ್ದರು.
ಉಪಾಧ್ಯಕ್ಷ ಬಿ.ಗೋಪಿ ನಾಥ್ ಸ್ವಾಗತಿಸಿದರು. ಖಜಂಚಿ ಎಂ. ರಾಜು ಪ್ರಾಸ್ತಾವಿಕ ಮಾತ ನಾಡಿದರು. ಸಂಘದ ಕಾರ್ಯಕಾರಿ ಮಂಡಳಿ ಸದಸ್ಯರು ಹಾಜರಿದ್ದರು.