ನೃತ್ಯ ಕಲೆ ಶಿವನಿಗೆ ಬಹುಪ್ರಿಯವಾದ ಕಲೆ: ಕೃಷ್ಣಮೂರ್ತಿ
ಸಾಗರ : ಕಲೆಯಲ್ಲಿ ಶೇಷ್ಠವಾದ ನೃತ್ಯ ಕಲೆ ಶಿವನಿಗೆ ಬಹುಪ್ರಿಯ ವಾದುದು ಎಂದು ರಂಗ ಕಲಾವಿದ ಜಿ.ಎಸ್.ಕೃಷ್ಣಮೂರ್ತಿ ಹೇಳಿ ದರು.
ಇಲ್ಲಿನ ಶ್ರೀನಗರದ ನೃತ್ಯ ಭಾಸ್ಕರ ಸಭಾಂಗಣದಲ್ಲಿ ನಾಟ್ಯ ತರಂಗ ಟ್ರಸ್ಟ್ ವತಿಯಿಂದ ಏರ್ಪ ಡಿಸಿದ್ದ ಋತು ನೃತ್ಯ ವೈವಿಧ್ಯ- ವರ್ಷ ನೃತ್ಯ ಹರ್ಷ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿ, ಶಿವ ತಾಂಡವ ನೃತ್ಯದ ಮೂಲಕ ಶಿವ ತನ್ನ ನಾಟ್ಯಪ್ರಿಯತೆಯನ್ನು ನಮಗೆ ತಿಳಿಸಿzನೆ ಎಂದರು.
ಪ್ರದೋಷ ಕಾಲದಲ್ಲಿ ಹುತ್ತದಿಂದ ಮಣ್ಣನ್ನು ತಂದು ಈಶ್ವರ ಲಿಂಗದ ಮೂಲಕ ಶಿವಾರಾಧನೆ ಮಾಡಿದರೆ ನಮ್ಮ ಇಷ್ಟಾರ್ಥ ಬೇಗ ಸಿದ್ಧಿಸುತ್ತದೆ ಎಂಬ ನಂಬಿಕೆಯಿದೆ. ಹಾಗಾಗಿ ವಿದ್ವಾನ್ ಜನಾರ್ದನ್ ಅವರ ಮನೆಯಲ್ಲಿ ಈ ಕಾರ್ಯ ನೆರವೇರಿಸಲಾಗಿದೆ. ಜನಾರ್ದನ್ ಅವರು ಬಾಲ್ಯದಿಂ ದಲೇ ನೃತ್ಯದ ಕಡೆ ಒಲವು ಬೆಳೆಸಿ ಕೊಂಡು ಈಗಾಗಲೇ ಸಾವಿರಾರು ವಿದ್ಯಾರ್ಥಿಗಳಿಗೆ ನೃತ್ಯಾಭ್ಯಾಸ ಮಾಡಿಸಿzರೆ. ವಿದೇಶಗಳಲ್ಲೂ ಅವರು ನೃತ್ಯ ಕಲೆಯನ್ನು ವಿಸ್ತರಿಸಿ zರೆ ಎಂದರು.
ವಿದ್ವಾನ್ ಜನಾರ್ದನ್ ಮಾತ ನಾಡಿ, ಪ್ರದೋಷ ಕಾಲದಲ್ಲಿ ಶಿವ ನನ್ನು ಆರಾಧಿಸಿ ನೃತ್ಯ ಸಮರ್ಪಣೆ ಮಾಡುವುದರಿಂದ ಶಿವ ತೃಪ್ತ ಗೊಂಡು ನಮ್ಮ ಇಷ್ಟಾರ್ಥ ಈಡೇರಿ ಸುತ್ತಾನೆ. ಇಂಥ ಸಮ ಯದಲ್ಲಿ ನಮ್ಮ ವಿದ್ಯಾರ್ಥಿಗಳು ಶಿವಸ್ತು ತಿಯ ಮೂಲಕ ಶಿವನಿಗೆ ನೃತ್ಯಾ ರ್ಚನೆ ಮಾಡುತ್ತಿzರೆ. ವರ್ಣಂ, ಈಶ, ಪಂಚಾಕ್ಷರಿ ನೃತ್ಯದ ಮೂಲಕ ಶಿವನನ್ನು ಸ್ಮರಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಕಲಾವಿದರಾದ ಪೂಜ, ಕಾವ್ಯ, ರಾಜಲಕ್ಷ್ಮಿ, ಅನುಷಾ ಹೆಗಡೆ, ಸೌಖ್ಯ ಕುಮಾರ್, ಶಮಾ ಕಿರುಗೊಡಿಗೆ, ಆಕಾಶ್ ಉಡುಪ ಅವರು ಶಿವಸ್ತುತಿಯ ನೃತ್ಯಾರ್ಚನೆ ಪ್ರಸ್ತುತ ಪಡಿಸಿದರು.