ವಂಚನೆಗೊಳಗಾದ ಸಂತ್ರಸ್ತರಿಗೆ ನ್ಯಾಯ ಒದಗಿಸಲು ಆಗ್ರಹಿಸಿ ಡಿಸಿಗೆ ಮನವಿ
ಶಿವಮೊಗ್ಗ: ಜಿಯಲ್ಲಿ ವಿವಿಧ ಹಣಕಾಸು ಸಂಸ್ಥೆಗಳಲ್ಲಿ ಹೂಡಿಕೆ ಮಾಡಿ ವಂಚನೆಗೊಳ ಗಾದ ಸಂತ್ರಸ್ತರಿಗೆ ನ್ಯಾಯ ಒದಗಿ ಸಬೇಕು ಎಂದು ಆಗ್ರಹಿಸಿ ವಂಚನೆ ಸಂತ್ರಸ್ತರ ಠೇವಣಿದಾರರ ಕುಟುಂ ಬ (ಥಗಿ ಪೀಡಿತ್ ಜಮಾಕರ್ತ ಪರಿವಾರ (ಟಿಪಿಜೆಪಿ))ವತಿಯಿಂ ದ ಜಿಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯದ ವಿವಿಧ ಜಿಗಳಲ್ಲಿ ವಿವಿಧ ಹಣಕಾಸು ಸಂಸ್ಥೆ ಮತ್ತು ಕಂಪನಿಗಳಲ್ಲಿ ಹೂಡಿಕೆದಾರರು, ನಾಗರಿಕರು ಹಣವನ್ನು ಹೂಡಿಕೆ ಮಾಡಿದ್ದರು. ಹೀಗೆ ವಿವಿಧ ನೂರಾರು ಹಣ ಕಾಸು ಕಂಪೆನಿಗಳು ಸಾರ್ವಜನಿಕ ರನ್ನು ವಂಚಿಸಿ ಕೋಟ್ಯಂತರ ರೂ. ಗಳನ್ನು ಸಂಗ್ರಹ ಮಾಡಿಕೊಂಡಿ ರುತ್ತಾರೆ. ವಂಚನೆಗೆ ಒಳಗಾದ ಸಾವಿರಕ್ಕೂ ಹೆಚ್ಚು ಜನರು ಆತ್ಮ ಹತ್ಯೆ ಕೂಡ ಮಾಡಿಕೊಂಡಿzರೆ ಎಂದು ಮನವಿದಾರರು ತಿಳಿಸಿ ದರು.
ಈ ವಂಚನೆಯನ್ನು ಮನಗಂಡ ಕೇಂದ್ರ ಸರ್ಕಾರ ಇದಕ್ಕಾಗಿ ಅನಿಯ ಂತ್ರಿತ ಠೇವಣಿ ಯೋಜನೆಗಳ ನಿಷೇಧ ಕಾಯ್ದೆ ೨೦೧೯ (ಬಡ್ಸ್ಆಕ್ಟ್ ) ಜರಿಗೊಳಿಸಿತ್ತು. ರಾಜ್ಯ ಸರ್ಕಾ ರ ಕೂಡ ಈ ಕಾಯಿದೆಯನ್ನು ಜರಿಗೆ ತಂದಿದೆ ಎಂದರು.
ಇದರ ಅನ್ವಯ ವಂಚನೆಗೆ ಒಳಗಾದ ಸಂತ್ರಸ್ತರ ಹಣವನ್ನು ಮರುಪಾವತಿಸಲು ಮತ್ತು ವಂಚ ಕರನ್ನು ಶಿಕ್ಷಿಸಲು ಅನಕೂಲವಾ ಗುತ್ತದೆ. ಠೇವಣಿದಾರರ ಹಣ ವನ್ನು ವಾಪಾಸು ಕೊಡದಿದ್ದರೆ ಅವರಿಗೆ ದಂಡ ಮತ್ತು ಜೈಲುಶಿಕ್ಷೆ ಅಥವಾ ಅವರ ಕಂಪನಿ ವ್ಯವಹಾರ ಮತ್ತು ಆಸ್ತಿಯನ್ನು ಜಪ್ತಿ ಮಾಡಿ ಠೇವಣಿದಾರರಿಗೆ ಹಿಂದಿರುಗಿಸಬ ಹುದಾಗಿದೆ. ಇದಕ್ಕೆ ಸಂಬಂಧಿಸಿದಂತೆ ಜಿ ಮಟ್ಟದಲ್ಲಿ ಸಕ್ಷಮ ಪ್ರಾಧಿಕಾರವನ್ನು ರಚನೆ ಮಾಡಿ, ವಿಶೇಷ ನ್ಯಾಯಾಲಯ ಒದಗಿ ಸಲು ಮತ್ತು ಪೊಲೀಸ್ ಅಧೀಕ್ಷಕ ರನ್ನು ನೇಮಿಸಲು ಅವಕಾಶವಿದೆ. ಆದರೆ ನಮ್ಮ ಜಿಯಲ್ಲಿ ಈ ಬಗ್ಗೆ ಯಾವುದೇ ಮಾಹಿತಿಯೂ ಇಲ್ಲ. ಈ ಕುರಿತ ನಾಮಫಲಕಗಳು ಕಛೇರಿಯಲ್ಲೂ ಇಲ್ಲ ಎಂದು ಮನವಿದಾರರು ತಿಳಿಸಿದರು.
ಈ ಹಿಂದೆ ಠೇವಣಿ ಯೋಜ ನೆಯಲ್ಲಿ ಹೂಡಿಕೆ ಮಾಡಿ ವಂಚನೆ ಗೊಳಗಾದ ಸಂತ್ರಸ್ತರು ತಮಗೆ ಮನವಿ ಮಾಡಿದ್ದರು. ಆದರೆ ಯಾವುದೇ ಪ್ರಯೋಜನವಾಗಿಲ್ಲ ಆದ್ದರಿಂದ ಅರ್ಜಿ ಸಲ್ಲಿಸಲು ಅವ ಕಾಶವಾಗುವಂತೆ ವಿಶೇಷ ಕೌಂಟರ್ ತೆರೆಯಬೇಕು ಮತ್ತು ೧೮೦ ದಿನಗ ಳಲ್ಲಿ ಹಣ ಮರುಪಾವತಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಬಡ್ಸ್ ಆಕ್ಟ್ಅನ್ನು ಅನುಷ್ಠಾನ ಮಾಡಲು ಮುಂದಾಗಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಪ್ರಮುಖ ರಾದ ಎಂ.ಬಿ. ರಾಜು, ಪೂರ್ಣೇ ಶ್, ಸುರೇಶ್, ಸೋಮಶೇಖರ್, ಮಮತಾ ಇನ್ನಿತರರಿದ್ದರು.