ವಿಮಾ ಪಾಲಿಸಿದರರೇ ಎಲ್ಐಸಿ ಬೆನ್ನೆಲುಬು: ಬಾಲಚಂದ್ರ
ಹೊನ್ನಾಳಿ: ಅನೇಕ ವಿಮಾ ಕ್ಷೇತ್ರಗಳಲ್ಲಿ ಭಾರತೀಯ ಜೀವ ವಿಮಾ ನಿಗಮವು ಆಲದ ಮರದಂತೆ ಹೆಮ್ಮರವಾಗಿ ಬೆಳೆದು ಪಾಲಿಸಿದಾರರ ನಂಬಿಕೆ ಉಳಿಸಿ ಕೊಂಡು ಅಗ್ರ ಸ್ಥಾನದಲ್ಲಿದೆ. ಈ ಮೂಲಕ ವಿಮಾ ಪಾಲಿಸಿದಾರರೆ ನಮ್ಮ ಬೆನ್ನೆಲುಬು ಎಂಬುದಾಗಿ ಭಾರತೀಯ ಜೀವ ವಿಮಾ ನಿಗಮದ ಹೊನ್ನಾಳಿ ಶಾಖೆಯ ವ್ಯವಸ್ಥಾಪಕ ಬಾಲಚಂದ್ರ ಕೆ ಹಂದಿಗೋಳ್ ಹೇಳಿದರು.
ಪಟ್ಟಣದ ಎಲ್ಐಸಿ ಕಛೇರಿ ಯಲ್ಲಿ ನಡೆದ ೬೭ನೇ ವಿಮಾ ಸಪ್ತಾಹ ಸಮಾರೂಪ ಸಮಾರಂ ಭದ ಅಧ್ಯಕ್ಷತೆ ವಹಿಸಿ ಮಾತ ನಾಡಿದರು. ಹೊನ್ನಾಳಿ ಶಾಖೆ ೧೯೯೦ರಲ್ಲಿ ಆರಂಭಗೊಂಡು ೪೪೦ ವಿಮಾ ಪ್ರತಿನಿಧಿಗಳಿಂದ ಹೆಚ್ಚಿನ ಸಂಖ್ಯೆ ಪಾಲಿಸಿದಾರರನ್ನ ಹೊಂದಿ ಉತ್ತಮ ವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು.
ವಿಮಾ ಸಪ್ತಾಹದ ಅಂಗವಾಗಿ ಕಳೆದ ಒಂದು ವಾರದಿಂದ ಹಮ್ಮಿ ಕೊಂಡಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ, ವಿಮಾ ನೌಕರರಿಗೆ ಬಹುಮಾನ ಗಳನ್ನ ವಿತರಿಸಲಾಯಿತು. ಎಲ್ಐಸಿ ನಿವೃತ್ತ ಆಡಳಿತಾಧಿಕಾರಿ ಬಿzಡಪ್ಪ ಮಾತನಾಡಿದರು.
ಅಭಿವೃದ್ಧಿ ಅಧಿಕಾರಿಗಳಾದ ಟಿಸಿ ನಾಗರಾಜ್, ಸಿಎನ್ ರಮೇಶ, ಪ್ರವಿಣ್ ಕುಮಾರ, ಪಿಎಸ್ ಸ್ವಾಮಿ, ವಿಮಾಪ್ರತಿನಿಧಿ ಬಸವರಾಜ್ ಇನ್ನಿತರರಿದ್ದರು.