ಸಾಹಿತ್ಯದ ಓದು ಬರಹ ಆತ್ಮಸ್ಥೈರ್ಯ ತುಂಬಲಿದೆ:ಡಿ.ಮಂಜುನಾಥ್
ಶಿವಮೊಗ್ಗ : ಸಾಹಿತ್ಯದ ಓದು ಬರಹದಿಂದ ಬದುಕಿನಲ್ಲಿ ಎದುರಾ ಗುವ ಅನೇಕ ಸವಾಲುಗಳನ್ನು ಎದುರಿಸುವ ಆತ್ಮಸ್ಥೈರ್ಯ ತುಂಬ ಲಿದೆ ಎಂದು ಜಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ. ಮಂಜು ನಾಥ ಅಭಿಪ್ರಾಯಪಟ್ಟರು.
ಜಿ ಕನ್ನಡ ಸಾಹಿತ್ಯ ಪರಿಷತ್ತು, ಜಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ನಗರದ ದುರ್ಗಿಗುಡಿ ಸರ್ಕಾರಿ ಪ್ರೌಢಶಾಲಾ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ವಿದ್ಯಾರ್ಥಿ ಗಳಿಗಾಗಿ ಶಾಲಾ ಕಾಲೇಜು ಅಂಗಳದಲ್ಲಿ ಕನ್ನಡ ಪಠ್ಯ ಆಧರಿಸಿ ಕಥೆ ಕವನ ಪ್ರಬಂಧ ರಚನಾ ಕಮ್ಮಟವನ್ನು ಗಿಡಕ್ಕೆ ನೀರೆಯುವ ಮೂಲಕ ಉದ್ಘಾಟಿಸಿದರು.
ವಿದ್ಯಾರ್ಥಿಗಳು ಕನ್ನಡ ಪಾಠವನ್ನು ಪರೀಕ್ಷೆಗಾಗಿ ಮಾತ್ರ ಸೀಮಿತಗೊಳಿಸಿ ಕೊಂಡರೆ ಭವಿಷ್ಯ ದಲ್ಲಿ ನಿಮ್ಮೊಳಗೆ ಸೃಜನಾತ್ಮಕ ಚಿಂತನೆಗಳು ಮೂಡಲು ಸಾಧ್ಯ ವಿಲ್ಲ. ಪಾಠದಲ್ಲಿರುವ ಕಥೆ, ಕವನ, ಪ್ರಬಂಧಗಳನ್ನು ಓದುವ, ಆಲೋ ಚನೆ ಮಾಡುವ, ಬರೆಯುವ ವಿಚಾರವಾಗಿ ಚಿಂತನೆ ಮಾಡಿ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮು ಖ್ಯೋಪಾಧ್ಯಾಯ ಕೆ.ಎಂ. ಮೋ ಹನ್ ಮಾತನಾಡಿ, ಈ ರೀತಿಯ ಕಮ್ಮಟ ಎ ವಿದ್ಯಾ ರ್ಥಿಗಳಿಗೂ ಅಗತ್ಯವಿದೆ. ಹತ್ತನೆ ಯ ತರಗತಿ ಮಕ್ಕಳಿಗೆ ಪರೀಕ್ಷೆ ದೃಷ್ಟಿಯಿಂದ ಮಹತ್ವzಗಿದೆ ಎಂದರು.
ಕಥಾ ಪ್ರಕಾರ ಕುರಿತು ಸಾಹಿತಿಗಳಾದ ಡಾ.ಎಚ್.ಟಿ. ಕೃಷ್ಣಮೂರ್ತಿ ಅವರು ಬದುಕಿನ ಬಗ್ಗೆ ಕಾಳಜಿ ವಹಿಸಬೇಕು. ತಮ್ಮ ಭಾವನೆಗಳನ್ನು ಬೇರೆಯವರೊಂ ದಿಗೆ ಹೇಳಿಕೊಳ್ಳಬೇಕು. ನಮ್ಮ ನಡುವೆ ಗೋಡೆ ಕಟ್ಟಿಕೊಂಡು ಮನದಲ್ಲಿರುವ ಕಥೆ ಹೇಳದಿದ್ದರೆ ಆತ್ಮಹತ್ಯೆಯಂತಹ ಕೆಟ್ಟ ಆಲೋಚ ನೆಗಳು ಬಂದುಬಿಡುತ್ತದೆ. ಎರಡು ಪಾತ್ರಗಳನ್ನು ಸೃಷ್ಟಿ ಮಾಡಿ ಪರಸ್ಪರ ಮಾತನಾಡುತ್ತಲೆ ಒಳಗಿನ ಭಾವನೆ ಹಂಚಿಕೊಳ್ಳುವುದೇ ಕಥೆ ಎಂದು ಮಾಹಿತಿ ನೀಡಿದರು.
ಸಾಹಿತ್ಯದಲ್ಲಿನ ಕಾವ್ಯದ ಮಹತ್ವ, ಓದುವ, ಬರೆಯುವ ಅರ್ಥೈಸುವ ವಿಧಾನವನ್ನು ವಿಶ್ರಾಂ ತ ಉಪನ್ಯಾಸಕರಾದ ಮಂಜುಳಾ ರಾಜು ವಿವರಿಸಿದರು. ಪ್ರಬಂಧ ಕುರಿತು ಹೇಗೆ ಬರೆಯಬಹುದು. ವಿಷಯ, ಆಲೋಚನೆ, ಅಭಿವ್ಯಕ್ತಿ ಕ್ರಮವನ್ನು ಸಾಹಿತಿಗಳು, ಉಪ ನ್ಯಾಸಕರು ಆಗಿರುವ ಡಾ. ಕಲೀಂ ಉ ಅವರು ಮಾಹಿತಿ ನೀಡಿ ದರು.ದುರ್ಗಿಗುಡಿ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ರಾಘವೇಂದ್ರ, ಸದಸ್ಯರಾದ ಮಂಜುನಾಥ, ಶೇಷಮ್ಮ, ಅಜುಂ ಬಾನು, ಕಸಾಪ ಪಧಾದಿಕಾರಿ ಗಳಾದ ಎಂ.ನವೀನ್ ಕುಮಾರ, ಎಂ.ಎಂ. ಸ್ವಾಮಿ, ಅನುರಾಧಾ, ತಾಲ್ಲೂಕು ಕಸಾಪ ಅಧ್ಯಕ್ಷರಾದ ಮಹಾದೇವಿ, ಸುಶೀಲಾ ಷಣ್ಮಗಂ, ಡಿ. ಗಣೇಶ್, ನಳಿನಾಕ್ಷಿ, ಕುಬೇ ರಪ್ಪ, ಸೋಮಿನಕಟ್ಟಿ ಸೇರಿದಂತೆ ಹಲವರು ಭಾಗವಹಿಸಿದ್ದರು. ವಿದ್ಯಾರ್ಥಿನಿ ಐಶ್ವರ್ಯ ಸ್ವಾಗತಿಸಿ, ಗ್ಲೋರಿಯಾ ನಿರೂಪಿಸಿದರು.