ದೇಶಕ್ಕಾಗಿ ಸೇವೆ ಮಾಡುವ ಕಾರ್ಯ ಅತ್ಯಂತ ಶ್ರೇಷ್ಠ…
ಶಿವಮೊಗ್ಗ: ದೇಶಕ್ಕಾಗಿ ಸೇವೆ ಮಾಡುವ ಕಾರ್ಯವು ಅತ್ಯಂತ ಶೇಷ್ಠವಾಗಿದ್ದು, ದೇಶಕ್ಕಾಗಿ ಕೆಲಸ ಮಾಡುವಾಗ ಸಿಗುವ ತೃಪ್ತಿ ವರ್ಣಿಸಲು ಸಾಧ್ಯವಿಲ್ಲ ಎಂದು ನಿವೃತ್ತ ಯೋಧ ಕರ್ನಲ್ ಗೋಪಾಲ್ ಕೌಶಿಕ್ ಹೇಳಿದರು.
ನಗರದಲ್ಲಿ ರೋಟರಿ ಶಿವಮೊಗ್ಗ ಪೂರ್ವ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತೀಯ ಸೇನೆ ಯಲ್ಲಿ ಸೇವೆ ಮಾಡಲು ಅರ್ಹತೆ ಮತ್ತು ದೇಶ ಪ್ರೇಮ ಇರಬೇಕು. ದೇಶ ನಮಗೆ ಎಲ್ಲವನ್ನು ಕೊಟ್ಟಿದೆ. ದೇಶದ ಋಣ ತೀರಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ದೇಶದ ವಿವಿಧ ಗಡಿಗಳಲ್ಲಿ ಸಲ್ಲಿಸಿದ ಸೇವೆ ಹಾಗೂ ಅನುಭವ ತುಂಬಾ ರೋಚಕ. ಒಂದು ಕಡೆ ದೇಶ ಪ್ರೇಮ, ಇನ್ನೊಂದು ಕಡೆ ಕುಟುಂಬದಿಂದ ದೂರವಿರುವುದು ತುಂಬಾ ಕಷ್ಟ. ದೇಶದ ಸೇನೆಯಲ್ಲಿ ಕೆಲಸ ನಿರ್ವಹಿಸಿದ ಸಾರ್ಥಕ ಭಾವ ಅತ್ಯಂತ ವಿಶೇಷ ಎಂದರು.
ಭಾರತ ದೇಶ ಇಂದು ತಂತ್ರeನ ಸೇರಿದಂತೆ ಎಲ್ಲ ಕ್ಷೇತ್ರ ಗಳಲ್ಲಿ ವಿಶೇಷ ಸಾಧನೆ ಹೊಂ ದಿದ್ದು, ಯುವಜನರು ದೇಶದ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡುವ ಸಂಕಲ್ಪ ಮಾಡಬೇಕು ದೇಶದ ಅಭಿವೃದ್ಧಿಯಲ್ಲಿ ಭಾಗಿಯಾಗಬೇಕೆಂದರು.
ಪ್ರೋಖಾಣ್ ಅಣುಬಾಂಬ್ ಪರೀಕ್ಷೆಯ ವಿಶೇಷ ಅನುಭವ ವನ್ನು ಹಂಚಿಕೊಂಡರು. ಆಪರೇಷನ್ ಶಕ್ತಿ, ಪ್ರೋಖಾನ್ ೨ ಸಮಯದಲ್ಲಿ ೫೮ ಇಂಜಿನಿಯರ್ ರೆಜಿಮೆಂಟ್ ಕಮಾಂಡ್ ಆಗಿ ನೇತೃತ್ವ ವಹಿಸಿದ್ದ ಕರ್ನಲ್ ಗೋಪಾಲ್ ಕೌಶಿಕ್ ಅವರನ್ನು ರೋಟರಿ ಶಿವಮೊಗ್ಗ ಪೂರ್ವ ವತಿಯಿಂದ ಸನ್ಮಾನಿಸಲಾಯಿತು.
ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಸತೀಶ್ ಚಂದ್ರ ಮಾತ ನಾಡಿ, ದೇಶಕ್ಕಾಗಿ ಸೇವೆ ಸಲ್ಲಿಸಿದ ಯೋಧರನ್ನು ಗೌರವಿಸುತ್ತಿ ರುವುದು ನಮ್ಮ ಪುಣ್ಯ. ದೇಶದ ಸೇನೆಯಲ್ಲಿ ಕೆಲಸ ಮಾಡಲು ಹೆಚ್ಚು ಯುವ ಜನರು ಮುಂದಾ ಗಬೇಕು ಎಂದು ತಿಳಿಸಿದರು.
ನಮ್ಮ ಟಿವಿ ಜಗದೀಶ್, ನಿರೂಪಕ ಜಿ.ವಿಜಯ್ಕುಮಾರ್, ರೋಟರಿ ಶಿವಮೊಗ್ಗ ಪೂರ್ವ ಕಿಶೋರ್ ಕುಮಾರ್, ಪೃಥ್ವಿ ಗಿರಿಮಾಜಿ, ಶ್ರೀಕಾಂತ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.