ಸೌಹಾರ್ದತೆಯಿಂದ ಗಣೇಶೋತ್ಸವ – ಈದ್ಮಿಲಾದ್ ಆಚರಿಸಿ ರಾಜ್ಯಕ್ಕೇ ಮಾದರಿಯಾಗೋಣ…
ಶಿವಮೊಗ್ಗ : ಪ್ರಸಕ್ತ ಮಾಹೆ ಯಲ್ಲಿ ಹಿಂದೂ ಮತ್ತು ಮುಸ್ಲಿಂ ಭಾಂದವರು ಆಚರಿಸುವ ಗಣೇಶೋತ್ಸವ ಹಾಗೂ ಈದ್ ಮಿಲಾದ್ ಹಬ್ಬಗಳು ಶಾಂತಿ ಸೌಹಾರ್ದತೆಯಿಂದ ನಡೆದು ರಾಜ್ಯಕ್ಕೆ ಮಾದರಿಯಾಗಿ ಉತ್ತಮ ಸಂದೇಶ ಸಾರುವಲ್ಲಿ ಎ ಧರ್ಮದ ಮುಖಂಡರು ವಿಶೇಷ ಗಮನಹರಿಸುವಂತೆ ಜಿಲ್ಲಾಧಿಕಾರಿ ಡಾ| ಸೆಲ್ವಮಣಿ ಅವರು ಮನವಿ ಮಾಡಿದರು.
ಜಿಡಳಿತ ಭವನದಲ್ಲಿ ಏರ್ಪಡಿಸಿದ್ದ ಜಿ ಶಾಂತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ವ ಧರ್ಮ ಸಮನ್ವಯದ ಸಂದೇಶ ಸಾರಲು, ಸರ್ವರೂ ಸಂಭ್ರಮ ಹಂಚಿಕೊಳ್ಳಲು ಇದೊಂದು ಸುಸಂದರ್ಭವಾಗಿದೆ ಎಂದವರು ನುಡಿದರು.
ಜಿಯಲ್ಲಿ ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ನಿಗಾವಹಿಸಲು ಪೊಲೀಸ್ ಇಲಾಖೆಯಿಂದ ನಿರಂತರ ಸಭೆಗಳನ್ನು ಆಯೋಜಿಸ ಲಾಗುತ್ತಿದೆ. ಅಲ್ಲದೇ ಕೈಗೊಳ್ಳ ಬೇಕಾದ ಕ್ರಮಗಳ ಬಗ್ಗೆಯೂ ಸಮಾಲೋಚನೆ ನಡೆಸಲಾಗುತ್ತಿದೆ ಎಂದ ಅವರು, ಜಿಯ ಆಯ್ದ ಸ್ಥಳಗಳಲ್ಲಿ ಬಿಗಿಬಂದೋಬಸ್ತ್ ಕೈಗೊಳ್ಳಲು ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಸೂಚಿಸಲಾಗಿದೆ ಅಲ್ಲದೇ ಅಗತ್ಯವಿ ರುವಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲು ಸೂಚಿಸಲಾಗಿದೆ. ಅಹಿತಕರ ಘಟನೆಗಳಿಗೆ ಕಾರಣ ವಾಗುವ ಪುಂಡರನ್ನು ಗುರುತಿಸಿ, ಕ್ರಮಕೈಗೊಳ್ಳಲು ವಿಶೇಷ ಗಮನಹರಿಸಲಾಗಿದೆ ಎಂದರು.
ಈ ಅವಧಿಯಲ್ಲಿ ಜಿಯ ವಿವಿಧ ಇಲಾಖೆಗಳಲ್ಲಿನ ಜವಾಬ್ದಾರಿಯುತ ಅಧಿಕಾರಿಗಳು ಕೇಂದ್ರ ಸ್ಥಾನದಿಂದ ಹೊರಹೋಗ ದಂತೆ ಹಾಗೂ ಕೇಂದ್ರಸ್ತಾನದಲ್ಲಿದ್ದು, ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ ಎಂದರು. ಸಾರ್ವಜನಿಕ ಸ್ಥಳಗಳಲ್ಲಿ ಪರಿಸರಕ್ಕೆ ಮಾರಕವಾಗುವ ಪ್ಲೆಕ್ಸ್ಗಳ ಅಳವಡಿಕೆಗೆ ನಿರ್ಬಂಧ ವಿಧಿಸ ಲಾಗಿದೆ. ಅಲ್ಲದೇ ಬ್ಯಾನರ್ ಅಳವಡಿಸಲು ಸಕ್ಷಮ ಪ್ರಾಧಿಕಾರ ಗಳಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಪ್ರಸ್ತುತ ಸಂದರ್ಭದಲ್ಲಿ ಸಾರ್ವಜನಿಕ ಸಭೆ, ಮೆರವಣಿಗೆಯಲ್ಲಿ ಡಿ.ಜೆ.ಸೌಂಡ್ಸ್ ಬಳಸುವು ದನ್ನು ಸುಪ್ರಿಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ನಿರ್ಬಂಧಿಸಲಾಗಿದೆ ಎಂದವರು ನುಡಿದರು.
ಜಿ ರಕ್ಷಣಾಧಿಕಾರಿ ಜಿ.ಕೆ. ಮಿಥುನ್ಕುಮಾರ್ ಅವರು ಮಾತನಾಡಿ, ಜಿಯಲ್ಲಿ ಎ ಧರ್ಮದ ಸಭೆ-ಸಮಾರಂ ಭಗಳು ಶಾಂತಿಯುತವಾಗಿ ನಡೆಯುವಂತೆ ಹಾಗೂ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಿಲ್ಲದಂತೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ಜಿಯಾದ್ಯಂತ ೩೦೦೦ಕ್ಕಿಂತ ಹೆಚ್ಚಿನ ಸ್ಥಳಗಳಲ್ಲಿ ಗಣೇಶ ಪ್ರತಿಷ್ಠಾಪನೆ, ಶಿವಮೊಗ್ಗ ನಗರ ಒಂದರಲ್ಲಿಯೇ ೫೦೦ಕ್ಕೂ ಹೆಚ್ಚಿನ ಗಣೇಶ ಪ್ರತಿಷ್ಠಾಪನೆಗೊಳ್ಳಲಿದೆ ಅಂತೆಯೇ ಈದ್ಮಿಲಾದ್ ಹಿನ್ನೆಲೆಯಲ್ಲಿ ಮೆರವಣಿ ಗೆಗಳೂ ಆಯೋಜನೆಗೊಳ್ಳಲಿವೆ ಎಂದ ಅವರು, ಪ್ರಸ್ತುತ ಸಂದರ್ಭದಲ್ಲಿ ಕ್ಷುಲ್ಲಕ ಕಾರಣಗಳಿಗಾಗಿ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಬ್ಯಾನರ್- ಭಂಟಿಂಗ್ಗಳ ಅಳವಡಿಕೆಗೆ ನಿರ್ಬಂಧ ವಿಧಿಸಲಾಗಿದೆ. ಈ ನಿರ್ಬಂಧ ಮುಂದಿನ ಎರಡು ವರ್ಷಗಳಿಗೂ ಮುಂದುವರೆಯ ಲಿದೆ ಎಂದವರು ನುಡಿದರು.
ಸಭೆ- ಸಮಾರಂಭ- ಮೆರವಣಿಗೆಗಳ ಬಗ್ಗೆ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯಲು ವಿದ್ಯುತ್, ಪೊಲೀಸ್, ಕಂದಾಯ, ಸ್ಥಳೀಯ ಸಂಸ್ಥೆಗಳು ಹಾಗೂ ತಹಶೀಲ್ದಾರರನ್ನೊಳ ಗೊಂಡ ಏಕಗವಾಕ್ಷಿ ಪದ್ದತಿಯನ್ನು ಅನುಷ್ಠಾನಕ್ಕೆ ತರಲಾಗಿದೆ. ಆಸಕ್ತರು ತಮ್ಮ ಕಾರ್ಯಕ್ರಮಗಳಿಗಾಗಿ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದರು.
ಜಿಯ ಎ ತಾಲೂಕು ಹೋಬಳಿ ಕೇಂದ್ರಗಳು ಸೇರಿದಂತೆ ಅಗತ್ಯವಿರುವಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಇನ್ನೂ ಕ್ಯಾಮರಾಗಳನ್ನು ಅಳವಡಿಸುವ ಉದ್ದೇಶ ಹೊಂದಲಾಗಿದೆ. ಅಲ್ಲದೇ ವಿಡಿಯೋ, ಫೋಟೋಗ್ರಫಿ ಮತ್ತು ಡ್ರೋಣ್ ಮೂಲಕ ಕಾರ್ಯಕ್ರಮ ಹಾಗೂ ಮೆರವಣಿಗೆಗಳ ಚಿತ್ರೀಕರಣ ನಡೆಸಲಾಗುವುದು ಎಂದರು.
ಜಿಯಲ್ಲಿ ಶಾಂತಿಭಂಗ ಮಾಡುವವರ ವರ್ತನೆಯನ್ನು ಸಹಿಸಿಕೊಳ್ಳಲಾಗುವುದಿಲ್ಲ. ಸಮಾಜ ಕಂಟಕರಿಗೆ ಕ್ರಮ ಅನಿವಾರ್ಯ ವಾಗಲಿದೆ. ಅಂತೆಯೇ ಸಾರ್ವಜನಿಕರ ರಕ್ಷಣೆಯೂ ಪರಮಗುರಿಯಾಗಿದೆ ಎಂದ ಅವರು, ಉಭಯ ಧರ್ಮಗಳ ಪ್ರಮುಖರು ತಮ್ಮ ಕಾರ್ಯಕ್ರಮ ಗಳ ಯಶಸ್ಸಿಗೆ ಸ್ವಯಂಸೇವಕರನ್ನು ನಿಯೋಜಿಸುವುದು ಉತ್ತಮ. ಕಾರ್ಯಕ್ರಮ ನಡೆಯುವ ಸ್ಥಳ ಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸು ವುದು ಕೂಡ ಉತ್ತಮ ವಿಧಾನವಾಗಿದೆ ಎಂದರು.
ಶಾಸಕ ಎನ್.ಎನ್. ಚನ್ನಬಸಪ್ಪ ಅವರು ಮಾತನಾಡಿ, ಎರಡೂ ಧರ್ಮದವರು ಹಬ್ಬಗಳನ್ನು ಸಂಭ್ರಮ ಸಡಗರ ಗಳಿಂದ ಅದ್ಧೂರಿಯಾಗಿ ಶಾಂತಿಗೆ ಭಂಗ ಬರದಂತೆ ಆಚರಿಸೋಣ. ಈ ಹಬ್ಬಗಳು ಮನಸ್ಸುಗಳನ್ನು ಅರಳಿಸುವ ಕೆಲಸ ಮಾಡಲಿ. ಅಗತ್ಯ ವಿದ್ದಲ್ಲಿ ಒಂದೆಡೆ ಕುಳಿತು ಚರ್ಚಿಸಬಹುದಾಗಿದೆ ಎಂದರು.
ಸಭೆಯಲ್ಲಿ ಜಿಪಂ ಸಿಇಓ ಸ್ನೇಹಲ್ ಸುಧಾಕರ್ ಲೋಖಂಡೆ, ಮಹಾನಗರಪಾಲಿಕೆ ಆಯುಕ್ತ ಮಾಯಣ್ಣಗೌಡ, ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ್ಕುಮಾರ್ ಭೂಮರೆಡ್ಡಿ, ಡಿವೈಎಸ್ಪಿ ಬಾಲರಾಜ್ ಸೇರಿದಂತೆ ಎ ಧರ್ಮಗಳ ಪ್ರಮುಖರು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.