ದೊಡ್ಡವರಲ್ಲಿ ವಿಶ್ವಾಸವಿಡಿ, ಅಹಂಕಾರ ಬಿಡಿ…
ಹೊಳೆಹೊನ್ನೂರು : ಶ್ರೀಕೃಷ್ಣನ ಸ್ಮರಣೆ ಮಾತ್ರದಿಂದಲೇ ನಮಗೆ ಭಯನಾಶ ಎಂಬುದಿರುವಾಗ ಅಂತಹ ಕೃಷ್ಣನಿಗೆ ಯಾವ ಭಯವೂ ಇಲ್ಲ ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಹೇಳಿದರು.
ಇಲ್ಲಿನ ಶ್ರೀ ಸತ್ಯಧರ್ಮ ಮಠದಲ್ಲಿ ನಡೆಯುತ್ತಿರುವ ೨೮ನೇ ಚಾತುರ್ಮಾಸ್ಯದಲ್ಲಿ ನಡೆದ ವಿದ್ವತ್ ಸಭೆಯಲ್ಲಿ ದಶಮ ಸ್ಕಂದ ಭಾಗವತ ಕುರಿತು ಪ್ರವಚನ ನೀಡಿದ ಪೂಜ್ಯರು, ಯಾವುದೋ ರಕ್ಷೆಯನ್ನು ಮಕ್ಕಳಿಗೆ ನೀಡುವುದಕ್ಕಿಂತ ಭಗವಂತನ ರಕ್ಷೆಯನ್ನು ಕೊಡಿ ಎನ್ನುವ ಸಂದೇಶ ನೀಡುವುದಕ್ಕಾಗಿ ಗೋಪಿಕಾ ಸ್ತ್ರೀಯರು ಶ್ರೀಕೃಷ್ಣನಿಗೆ ರಕ್ಷೆಯನ್ನು ಹಚ್ಚಿzರೆ. eನಿಗಳು, ಹಿರಿಯರು ಹಿತವನ್ನು ನುಡಿದಾಗ ನಾವು ವಿಶ್ವಾಸದಿಂದ ಪಾಲನೆ ಮಾಡಬೇಕು. ದೊಡ್ಡವರ ಮಾತಿನ ಮೇಲೆ ವಿಶ್ವಾಸವಿಡಬೇಕು. ಅದನ್ನು ಅನುಷ್ಠಾನಕ್ಕೆ ತರಬೇಕೇ ಹೊರತು ಅಹಂಕಾರ ಮಾಡಬಾರದು. ದೊಡ್ಡವರ ಮಾತು ಮೀರಿದರೆ ಅನರ್ಥವಾಗುತ್ತದೆ ಎಂದರು.
ಸಭಾ ಕಾರ್ಯಕ್ರಮದಲ್ಲಿ ಪ್ರವಚನ ನೀಡಿದ ಪಂಡಿತ ರಘೂತ್ತಮಾಚಾರ್ಯ ಮೊಕಾಶಿ, ದಶಮ ಸ್ಕಂದ ಭಾಗವತ ಎಂದರೆ ಕೃಷ್ಣಕಥಾಮೃತ. ಪರಮೋಪಕಾರ ಮಾಡಿದ ಕೃಷ್ಣನ ಕಥೆ ಸಂಕ್ಷಿಪ್ತವಾಗಿ ಹೇಳಬೇಡಿ. ನನ್ನನ್ನು ಗರ್ಭಾವಸ್ಥೆಯಿಂದಲೇ ರಕ್ಷಣೆ ಮಾಡಿದ್ದ ಶ್ರೀಕೃಷ್ಣನ ನನ್ನ ಪಾಲಿನ ನಿಧಿ ಎಂದು ಪರೀಕ್ಷಿತ ಮಹರಾಜ ಶುಕಾಚಾರ್ಯರಲ್ಲಿ ಮನವಿ ಮಾಡಿzನೆ. ಅದರಂತೆ ಇಡೀ ದಶಮ ಸ್ಕಂದದಲ್ಲಿರುವ ಕೃಷ್ಣನ ಕಥೆಯನ್ನು ವಿವರಣೆ ಮಾಡಿzರೆ ಎಂದರು.
ರಾಮಮೂರ್ತಿ ಆಚಾರ್ಯ ಕರಣಮ್, ನಾವು ಈಗ ಹುಟ್ಟಿದವರಿಗೆ ಮೋಕ್ಷ ನಿಶ್ಚಿತ. ಕಾರಣ ಇಂತಹ ಮಹಾ ಸ್ವಾಮಿಗಳ ಕಾಲದಲ್ಲಿ ಬದುಕಿದ್ದೇವೆ ಎಂಬುದೇ ನಮಗೆ ದೊಡ್ಡ ಹೆಮ್ಮೆ ಮತ್ತು ಅನಂತ ಪುಣ್ಯ. ಇಂತಹ ಸ್ವಾಮಿಗಳ ಬಳಿ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಕಲಿತುಕೊಳ್ಳಿ. ಸ್ವಾಮಿಗಳ ಗೌರವಕ್ಕೆ, ಆ ಸ್ಥಾನಕ್ಕೆ ಅಪಚಾರ ಸರ್ವಥಾ ಮಾಡಬೇಡಿ ಎಂದರು.
ಉತ್ತರಾದಿ ಮಠದ ದಿವಾನರಾದ ಶಶಿ ಆಚಾರ್, ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷರಾದ ಸುಬ್ಬಣ್ಣಾಚಾರ್ಯ ನವರತ್ನ, ಶ್ರೀನಿವಾಸಾಚಾರ್ಯ ನವರತ್ನ, ಪುರುಷೋತ್ತಮಾಚಾರ್ಯ ನವರತ್ನ, ರಘೂತ್ತಮಾಚಾರ್ಯ ಸಂಡೂರು, ಬಾಳಗಾರು ಜಯತೀರ್ಥಾಚಾರ್ಯ, ಕೃಷ್ಣಾಚಾರ್ಯ ರಾಯಚೂರು, ಪ್ರಕಾಶಾಚಾರ್ಯ, ಅನಿಲ್ ರಾಮಧ್ಯಾನಿ, ಗುರುರಾಜ್ ಕಟ್ಟಿ, ವಾದಿರಾಜ ಸಿ.ಪಿ. ಮೊದಲಾದವರಿದ್ದರು.