ನಂದಿನಿ ಸಿಹಿ ಉತ್ಸವಕ್ಕೆ ಶಿಮುಲ್ ಅಧ್ಯಕ್ಷ ಶ್ರೀಪಾದರಾವ್ರಿಂದ ಚಾಲನೆ
ಶಿವಮೊಗ್ಗ: ಒಕ್ಕೂಟವು ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಗಳ ಕಾರ್ಯ ವ್ಯಾಪ್ತಿಯನ್ನು ಹೊಂದಿದ್ದು, ಕಾರ್ಯವ್ಯಾಪ್ತಿಯ ಜಿಗಳ ೧,೨೫೩ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಪ್ರತಿನಿತ್ಯ ೨ ಸರತಿಗಳಲ್ಲಿ ಸರಾಸರಿ ಒಟ್ಟು ೬.೫೦ ಲಕ್ಷ ಕೆ.ಜಿ ಹಾಲನ್ನು ಸಂಗ್ರಹಿಸಲಾ ಗುತ್ತಿದೆ. ಸದರಿ ಹಾಲನ್ನು ಅತ್ಯಾಧುನಿಕ ತಂತ್ರeನ ಹೊಂದಿದ ಡೇರಿ ಘಟಕಗಳಲ್ಲಿ ಸಂಸ್ಕರಿಸಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಒಕ್ಕೂಟದ ವ್ಯಾಪ್ತಿಯಲ್ಲಿರುವ ೧೭೫೦ ಹಾಲಿನ ಡೀಲರ್ದಾರರು, ೧೧೪ ಫ್ರಾಂಚೈಸಿ ಪಾರ್ಲರ್ದಾರರು ಹಾಗೂ ೪೮ ಒಕ್ಕೂಟದ ಸ್ವಂತ ಮಿಲ್ಕ್ ಪಾರ್ಲರ್ ಗಳ ಮೂಲಕ ಪ್ರತಿನಿತ್ಯ ೨.೭೦ ಲಕ್ಷ ಲೀಟರ್ ಹಾಲು ಮತ್ತು ಸರಾಸರಿ ೫೫ ಸಾವಿರ ಕೆ.ಜಿ. ಮೊಸರನ್ನು ಮಾರಾಟ ಮಾಡಲಾಗುತ್ತಿದೆ. ಇದರೊಂದಿಗೆ ವಿವಿಧ ನಂದಿನಿ ಹಾಲಿನ ಉತ್ಪನ್ನಗಳನ್ನು ಹಾಗೂ ನಂದಿನಿ ಸಿಹಿ ತಿನಿಸುಗಳನ್ನೂ ಕೂಡ ಮಾರಾಟ ಮಾಡಲಾಗುತ್ತಿದೆ.
ಒಕ್ಕೂಟದ ಮಾರುಕಟ್ಟೆ ವ್ಯಾಪ್ತಿಯ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಗಳಲ್ಲಿ ಗ್ರಾಹಕರಿಗೆ ನಂದಿನಿ ಹಾಲಿನಿಂದ ತಯಾರಿಸಿದ ಉತ್ಪನ್ನಗಳನ್ನು ಗ್ರಾಹಕರಿಗೆ ಅನುಕೂಲವಾಗುವಂತೆ ಶೇ.೨೦ ರಿಯಾಯಿತಿ ದರಗಳಲ್ಲಿ ಮಾರಾಟ ಮಾಡಲು ನಂದಿನಿ ಸಿಹಿ ಉತ್ಸವ ಆಚರಣೆಯನ್ನು ಆ.೧೫ರಿಂದ ಹಮ್ಮಿಕೊಳ್ಳಲಾಗಿದ್ದು, ಈ ಉತ್ಸವದ ಅವಧಿಯಲ್ಲಿ ಎ ನಂದಿನಿ ಸಿಹಿ ಉತ್ಪನ್ನಗಳ ಗರಿಷ್ಠ ಮಾರಾಟ ಬೆಲೆಯ ಮೇಲೆ ಈ ರಿಯಾಯಿತಿ ನೀಡಲಾಗುವುದು.
ಪ್ರತಿ ವರ್ಷದಂತೆ ಈ ವರ್ಷವೂ ಸಹ ಕರ್ನಾಟಕ ಸಹಕಾರ ಹಾಲು ಮಹಾಮಂಡಳ ಹಾಗೂ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿ ಸಹಕಾರ ಹಾಲು ಒಕ್ಕೂಟದ ಸಹಯೋಗ ದೊಂದಿಗೆ ನಂದಿನಿ ಸಿಹಿ ಉತ್ಪನ್ನ ಗಳನ್ನು ಹೆಚ್ಚಿನ ಸಂಖ್ಯೆಯ ಜನತೆಗೆ ಪರಿಚಯಿಸಿ, ನಂದಿನಿ ಸಿಹಿ ಉತ್ಪನ್ನಗಳ ಮಾರಾಟವನ್ನು ಹೆಚ್ಚಿಸಲು ಈ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ.
ನಂದಿನಿ ಸಿಹಿ ಉತ್ಸವವನ್ನು ಒಕ್ಕೂಟದ ಅಧ್ಯಕ್ಷ ಎನ್.ಎಚ್. ಶ್ರೀಪಾದರಾವ್ ಅವರು ಶಿವಮೊಗ್ಗ ಜಿ ಪಂಚಾಯತ್ ಮಿಲ್ಕ್ ಪಾರ್ಲರ್ನಲ್ಲಿ ವಿದ್ಯುಕ್ತವಾಗಿ ಚಾಲನೆ ನೀಡಿದರು. ಈ ಸಂದರ್ಭ ದಲ್ಲಿ ಒಕ್ಕೂಟದ ಆಡಳಿತ ಮಂಡಳಿ ನಿರ್ದೇಶಕರಾದ ಡಿ.ಆನಂದ ಮತ್ತು ದಿನೇಶ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎಸ್.ಜಿ.ಶೇಖರ್ ಉಪಸ್ಥಿತರಿದ್ದರು. ವ್ಯವಸ್ಥಾಪಕರು (ಶೇಮತಾಂ), ವ್ಯವಸ್ಥಾಪಕರು (ಮಾರುಕಟ್ಟೆ) ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.