ಅಹಮದೀಯ ಸಂಘಟನೆಯಿಂದ ಸರ್ವಧರ್ಮ ಶಾಂತಿ ಸಮ್ಮೇಳನ
ಶಿವಮೊಗ್ಗ: ಅಹ್ಮದಿಯಾ ಮುಸ್ಲಿಂ ಮಹಿಳಾ ಸಂಘಟನೆಯ ಶತಮಾನೋತ್ಸವದ ಅಂಗವಾಗಿ ಶಾಂತಿ ಮತ್ತು ಸೌಹಾರ್ದತೆ ಬೆಳೆಸುವ ಉದ್ದೇಶದಿಂದ ಸರ್ವ ಧರ್ಮ ಸಮ್ಮೇಳನವನ್ನು ಆಯೋಜಿಸಲಾಗಿತ್ತು.
ಶಿವಮೊಗ್ಗ ರಾಯಲ್ ಆರ್ಕಿಡ್‌ನಲ್ಲಿ ನಡೆದ ಸಮ್ಮೇಳನದ ಅಧ್ಯಕ್ಷತೆಯನ್ನು ಸಂಘಟನೆ ಅಧ್ಯಕ್ಷೆ ಅನೀಸ್ ಫಾತೀಮಾ ವಹಿಸಿದ್ದರು. ವಿಶೇಷ ಅತಿಥಿಗಳಾಗಿ ಸಂಘಟನೆಯ ಚಿತ್ರದುರ್ಗ ಮತ್ತು ಶಿವಮೊಗ್ಗ ಜಿಯ ಅಧ್ಯಕ್ಷ ಆಮ್ ತುಲ್ ರಹೀಂ ಮಜಹರ್, ನಗರ ಪಾಲಿಕೆ ಸದಸ್ಯೆ ಸುರೇಖಾ ಮುರಳಿಧರ್, ಹೊಳೆಹೊನ್ನೂರು ಕಾನ್ವೆಂಟ್‌ನ ಸೆಂಟ್ ಮೇರಿಸ್‌ನ ಸಿಸ್ಟರ್ ಟ್ರೀಸ ಎಸ್.ಹೆಚ್., ಗುರುನಾನಕ್ ದರ್ಬಾರ್‌ನ ಶ್ರೀಮತಿ ಜಗದೀಶ್ ಕೌರ್, ನಿವೃತ್ತ ಶಿಕ್ಷಕಿ ಸೈಯದ್ ಪರ್ವೀನ್ ತಾಜ್, ಬ್ರಹ್ಮಕುಮಾರಿ ವಿವಿಯ ಅಧ್ಯಕ್ಷೆ ರಾಜಯೋಗಿನಿ ಬ್ರಹ್ಮಕುಮಾರಿ ಅನಸೂಯಾಜೀ ಭಾಗವಹಿಸಿದ್ದರು. ಪವಿತ್ರ ಖುರ್‌ಆನ್ ಪಾರಾಯಣ ದೊಂದಿಗೆ ಆರಂಭವಾಯಿತು.
ಡಾ. ಹಸೀಬಾ ಅವರು ಆಧುನಿಕ ಸಮಾಜದಲ್ಲಿ ಧರ್ಮ ಮತ್ತು ಮಹಿಳೆಯ ಪಾತ್ರ ಎಂಬ ವಿಷಯದ ಉಪನ್ಯಾಸ ನೀಡಿದರು ಆಮ್‌ತುಲ್ ರಹೀಂ ಮಜಹರ್ ಅವರು ಆಧುನಿಕ ಯುಗದಲ್ಲಿ ಲೋಕದ ಜನರು ದೇವನಾಮಸ್ಮರಣೆಯ ಬಗ್ಗೆ ನಿರ್ಲಕ್ಷ ಹೊಂದಿದವರಾಗಿ ಬಹಳ ದೂರ ಸಾಗಿzರೆ. ಮನುಷ್ಯನು ತನ್ನ ಸೃಷ್ಟಿಕರ್ತನೊಡನೆ ನಿಷ್ಠೆಯ ಸಂಬಂಧವನ್ನು ಬೆಳೆಸುವುದರಿಂದ ಮಾತ್ರ ಶಾಂತಿಯನ್ನು ಗಳಿಸಲು ಸಾಧ್ಯ ಎಂದು ವಿವರಿಸಿದರು.
ಸಿಸ್ಟರ್ ಟ್ರೀಸ ಎಸ್ ಹೆಚ್ ಅವರು ಮಾತನಾಡಿ, ಎಲ್ಲವೂ ದೇವೇಚ್ಛೆಯಂತೆ ನಡೆಯುತ್ತದೆ. ದೇವನು ಸ್ತ್ರೀ-ಪುರುಷ ಎಂಬ ಎರಡೇ ಕುಲಗಳನ್ನು ಸೃಷ್ಟಿಸಿದನು. ನಾವು ಚರಿತ್ರೆಯನ್ನು ಮರೆಯ ಬಾರದು ಹಾಗೂ ಧಾರ್ಮಿಕ ಬೋಧನೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಬೇಕು ಎಂದು ಕರೆ ನೀಡಿದರು.
ಜಗದೀಶ್ ಕೌರ್ ಮಾತನಾಡಿ, ನಾವೆಲ್ಲರೂ ದೇವನ ಸೃಷ್ಟಿಗಳು ಆದ್ದರಿಂದ ಎ ಸೃಷ್ಟಿಗಳನ್ನು ನಾವು ಪ್ರೀತಿಸಬೇಕು. ಶಾಂತಿಯು ದೈವಿಕ ಕೊಡುಗೆಯಾಗಿದ್ದು ಎ ಜನಾಂಗ ದವರು ಪ್ರೀತಿ ಮತ್ತು ಶಾಂತಿಯಿಂದ ವರ್ತಿಸಬೇಕೆಂದು ನುಡಿದರು.
ಬ್ರಹ್ಮಕುಮಾರಿ ಅನಸೂಯಾ ಜಿ ಅವರು ಮಾತನಾಡಿ, ಹಸುಗಳ ಬಣ್ಣ ಹಲವಾರು ಆದರೆ ಹಾಲಿನ ಬಣ್ಣವು ಒಂದೇ ಆಗಿರುತ್ತದೆ. ನಾವೆಲ್ಲರೂ ಒಂದೇ ಕುಟುಂಬ ದವರು ದೇವನೊಬ್ಬ ನಾಮ ಹಲವು ಎಂದು ವಿವರಿಸಿದರು. ಸಂಘಟನೆಯ ಪತ್ರಿಕಾ ಕಾರ್ಯದರ್ಶಿ ಜನಾಬ್ ಮೀರ್ ಆಝಮ್ ಝಿಕ್ರಿಯಾ ಮತ್ತಿತರರು ಉಪಸ್ಥಿತರಿದ್ದರು.