ಸ್ವಾತಂತ್ರ ದಿನಾಚರಣೆಯ ಪೂರ್ವಭಾವಿ ಸಭೆಗೆ ಗೈರಾದ 9 ಅಧಿಕಾರಿಗಳಿಗೆ ನೋಟೀಸ್…
ಹೊನ್ನಾಳಿ: ಆಗಸ್ಟ್ ೧೫ರಂದು ಆಚರಿಸಲಿರುವ ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆಯಲ್ಲಿ ತಾಲೂಕು ಕಚೇರಿ ಸಭಾಂಗಣದಲ್ಲಿ ಕರೆಯಲಾಗಿದ್ದ ಪೂರ್ವಭಾವಿ ಸಭೆಗೆ ಪೊಲೀಸ್ ಇನ್ಸ್ಪೆಕ್ಟರ್, ಬಿ.ಇ.ಒ, ಉಪನೋಂದಣಾಧಿಕಾರಿ, ಎಡಿಎಲ್‌ಆರ್, ಅಬಕಾರಿ, ಮೀನುಗಾರಿಕೆ, ಪ್ರಾದೇಶಿಕ ವಲಯ ಅರಣ್ಯಾಧಿಕಾರಿ, ಪುರಸಭೆಯ ಮುಖ್ಯಾಧಿಕಾರಿ, ಉಪಖಜನೆಯ ಅಧಿಕಾರಿಗಳು ಭಾಗವಹಿಸದೇ ಗೈರುಹಾಜರಾಗಿರುವ ಅಧಿಕಾರಿ ಗಳಿಗೆ ನೋಟೀಸ್ ಜರಿ ಮಾಡಿ ಸಭೆಯನ್ನು ನಾಳೆಗೆ ಮುಂದೂ ಡಿರುವ ಘಟನೆ ಜರುಗಿದೆ.
ಪೂರ್ವಭಾವಿ ಸಭೆಗೆ ತಾಲ್ಲೂಕಿನ ಹೆಚ್ಚಿನ ಸಂಖ್ಯೆಯ ಅಧಿಕಾರಿಗಳೇ ಗೈರುಹಾಜರಾಗಿದ್ದನ್ನು ಗಮನಿಸಿದ ಸಭೆಯ ಅಧ್ಯಕ್ಷತೆ ವಹಿಸಿದ್ದ ಉಪವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ ಅವರು ತೀವ್ರ ಅಸಮಾಧಾನಗೊಂಡು ಸಭೆಗೆ ಗೈರುಹಾಜರಾಗಿರುವ ಎ ಅಧಿಕಾರಿಗಳಿಗೆ ನೋಟೀಸ್ ಜರಿ ಮಾಡುವಂತೆ ರಾಷ್ಟ್ರೀಯ ಹಬ್ಬಗಳ ಸಮಿತಿ ಅಧ್ಯಕ್ಷರು ಹಾಗೂ ತಹಶೀ ಲ್ದಾರ್ ತಿರುಪತಿ ಪಾಟೀಲ್‌ಗೆ ಸೂಚಿಸಿ ಈ ಬಗ್ಗೆ ಜಿಧಿಕಾರಿಗಳ ಗಮನಕ್ಕೂ ತರುವುದಾಗಿ ಹೇಳಿ ಸಭೆಯನ್ನು ಮುಂದೂಡಿದ ಪ್ರಸಂಗ ನಡೆಯಿತು.
ತಾಲೂಕು ಸಭಾಂಗಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಚರಣೆಯ ಸಲುವಾಗಿ ಕರೆಯ ಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಅಧಿಕಾರಿಗಳಿಗಿಂತ ಸ್ಥಳೀಯ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮಾಜಿ ಸೈನಿಕರ ಕ್ಷೇಮಾಭಿವೃದ್ದಿ ಸಂಘದ ಪದಾಧಿಕಾರಿಗಳು, ಹಾಗೂ ಪತ್ರಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಆದರೇ ಸರ್ಕಾರಿ ಇಲಾಖೆಗಳ ಕೆಲವೇ ಅಧಿಕಾರಿಗಳು ಮಾತ್ರ ಹಾಜರಾಗಿದ್ದು ಬಹಳಷ್ಟು ಜನ ಅಧಿಕಾರಿಗಳು ಸಭೆಗೆ ಹಾಜರಾಗದೇ ತಮ್ಮ ಬದಲಿಗೆ ಬೇರೆ ಅಧಿಕಾರಿಗಳನ್ನು ಕಳುಹಿರುವುದನ್ನು ಕಂಡು ಉಪವಿಭಾಗಾಧಿಕಾರಿ ಯವರು ತೀವ್ರ ಬೇಸರಗೊಂಡು ಪಕ್ಕದ ಉಪಸ್ಥಿತರಿದ್ದ ತಹಶೀಲ್ದಾರ್ ತಿರುಪತಿ ಪಾಟೀಲ್ ಅವರಿಗೆ ಸಭೆಗೆ ಗೈರು ಹಾಜರಾಗಿರುವ ಅಧಿಕಾರಿಗಳಿಗೆ ಕಾರಣ ಕೇಳಿ ಕೂಡಲೇ ನೋಟೀಸ್ ಜರಿ ಮಾಡುವಂತೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾ ಡಿದ ಅವರು ಅನೇಕ ಮಾಹಾನ್ ಪುರುಷರ ತ್ಯಾಗ ಬಲಿದಾನ ಗಳಿಂದಾಗಿ ಬ್ರಿಟೀಷರ ಆಳ್ವಿಕೆಯಿಂದ ನಮ್ಮ ದೇಶ ಸ್ವಾತಂತ್ರ್ಯ ಪಡೆದಿದ್ದು ಈ ಅವಿಸ್ಮರಣೀಯ ದಿನವನ್ನು ಪ್ರತಿಯೊಬ್ಬ ಭಾರತೀಯ ಪ್ರಜೆ ಹಬ್ಬದ ರೂಪದಲ್ಲಿ ಅಚರಿಸುವುದು ಅವರ ಕರ್ತವ್ಯವಾಗಿದೆ ಹಾಗೂ ಜವಾಬ್ದಾರಿ ಕೂಡ ಅಗಿದ್ದು, ಸ್ವಾತಂತ್ರ್ಯ ದಿನಾಚರಣೆಯಂತಹ ಪವಿತ್ರ ರಾಷ್ಟ್ರೀಯ ಹಬ್ಬ ಆಚರಣೆಯ ರೂಪುರೇಷೆಗಳನ್ನು ರೂಪಿಸುವ ಹಾಗೂ ಆಚರಣೆಯ ಜವಾಬ್ದಾರಿಗಳನ್ನು ನಿಭಾಯಿಸುವ ಪ್ರಮುಖ ಇಲಾಖೆಗಳ ಅಧಿಕಾರಿಗಳೇ ಗೈರುಹಾಜರಾಗಿ ರುವುದು ತಾಲೂಕು ಅಡಳಿತಕ್ಕೆ ಮುಜುಗರ ತರುವ ವಿಷಯವಾಗಿದ್ದು, ತಮಗೂ ಕೂಡ ತೀವ್ರ ಬೇಸರ ತಂದಿದ್ದು ಈ ಘಟನೆಯ ವಿವರಗಳನ್ನು ಜಿಧಿಕಾರಿಗಳ ಗಮನಕ್ಕೂ ತರುವುದಾಗಿ ಸಭೆಯಲ್ಲಿ ತಿಳಿಸಿ ಸಭೆಯನ್ನು ಮುಂದೂಡಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಹಾಜರಿದ್ದ ಮಾಜಿ ಸೈನಿಕರ ಕ್ಷೇಮಾಭಿವೃದ್ದಿ ಸಂಘದ ತಾಲೂಕು ಅಧ್ಯಕ್ಷ ಪರಮೇಶ್ವರಪ್ಪ ಗೌಡ, ಕಾರ್ಯದರ್ಶಿ ಎಂ. ಗಂಗಾಧರಪ್ಪ ಕತ್ತಿಗೆ ಮತ್ತು ಯುವಶಕ್ತಿ ಒಕ್ಕೂಟದ ಮುಖಂಡ ಕತ್ತಿಗೆ ನಾಗರಾಜ್ ಅವರುಗಳು ಮಾತನಾಡಿ, ಬಹುತೇಕ ಸಭೆಗಳಿಗೆ ಇಲಾಖೆಯ ಪ್ರಮುಖ ಅಧಿಕಾರಿಗಳು ಭಾಗವಹಿಸದೇ ತಮ್ಮ ಬದಲಾಗಿ ಇತರೆ ಅಧಿಕಾರಿಗಳನ್ನು ಕಳುಹಿಸುವುದನ್ನು ರೂಢಿಯನ್ನಾಗಿ ಮಾಡಿಕೊಂಡಿದ್ದು ಸ್ವಾತಂತ್ರ್ಯ ದಿನಾಚರಣೆಯಂತಹ ರಾಷ್ಟ್ರೀಯ ಹಬ್ಬದ ಪೂರ್ವಭಾವಿ ಸಭೆಗೆ ಗೈರುಹಾಜರಾಗಿರುವವರ ವಿರುಧ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಪತ್ರಕರ್ತರೊಂದಿಗೆ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಪೂರ್ವಭಾವಿ ಸಭೆಯಲ್ಲಿ ತಹಶೀಲ್ದಾರ್ ತಿರುಪತಿ ಪಾಟೀಲ್, ಕೆಲವೇ ಇಲಾಖೆಗಳ ಅಧಿಕಾರಿ ವರ್ಗದವರು ಸೇರಿದಂತೆ ಕನ್ನಡ ಪರ ಸಂಘಟನೆಗೆಳ ಪದಾಧಿಕಾರಿಗಳು, ಕಂದಾಯ ಇಲಾಖೆ ಸಿಬ್ಬಂದಿಗಳು ಭಾಗವಹಿಸಿದ್ದರು.