ಕೆಆರ್ಪಿಪಿ ಅಭ್ಯರ್ಥಿ ಡಾ|ಚಾರುಲ್ರಿಂದ ೫೦೪ಕಿಮೀ ಪಾದಯಾತ್ರೆ…
ಕನಕಗಿರಿ: ಕನಕಗಿರಿ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿನ ಮೂಲ ಭೂತ ಸೌಕರ್ಯಗಳ ಸಮಸ್ಯೆಗಳ ಮತ್ತು ಜನರ ವೈಯಕ್ತಿಕ ಸಮಸ್ಯೆಗಳನ್ನು ಅರಿಯಲು ಮತ್ತು ಅವುಗಳನ್ನು ಪರಿಹರಿಸುವ ಉದ್ದೇಶದಿಂದ ಮಾ.೨೬ರ ಇಂದಿನಿಂದ ೨೮ರವರೆಗೆ ಕಾರಟಗಿ ಪಟ್ಟಣದಿಂದ ವಿವಿಧ ಗ್ರಾಮಗಳ ಮೂಲಕ ಕನಕಗಿರಿವರೆಗೆ ಒಟ್ಟು ೫೦೪ ಕಿ.ಮೀ. ದೂರ ಕೆ ಆರ್ ಪಿ ಪಿ ಪಕ್ಷದಿಂದ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಕನಕಗಿರಿ ವಿಧಾನಸಭಾ ಕ್ಷೇತ್ರದ ಪಕ್ಷದ ನಿಯೋಜಿತ ಅಭ್ಯರ್ಥಿಯಾದ ಡಾ| ಚಾರುಲ್ ದಾಸರಿ ತಿಳಿಸಿzರೆ.
ಮಾ.೨೬ರ ಇಂದು ಕಾರಟಗಿ ಯಿಂದ ಆರಂಭಿಸುವ ಬೃಹತ್ ಪಾದಯಾತ್ರೆಗೆ ಕೆಆರ್ಪಿಪಿ ಸಂಸ್ಥಾಪಕ ಗಾಲಿ ಜನಾರ್ಧನರೆಡ್ಡಿ ಅವರು ಚಾಲನೆ ನೀಡಲಿzರೆ. ಇಲ್ಲಿಂದ ಚಳೂರು ಕ್ಯಾಂಪ್, ಚಳ್ಳೂರು, ಹಗೇದಾಳ, ೨೮ನೇ ಕಾಲುವೆ, ತೊಂಡಿಹಾಳ, ಸಿಂಗನಾಳ, ಚಿಕ್ಕಡಂಕನಕಲ್ ಗ್ರಾಮಕ್ಕೆ ತಲುಪಿ ಇದೇ ಗ್ರಾಮದಲ್ಲಿ ರಾತ್ರಿ ವಾಸ್ತವ್ಯ ಮಾಡಲಾಗುವುದು
ಮಾ.೨೭ರ ನಾಳೆ ಸೋಮವಾರ ಹಿರೇಡಂಕನಕಲ್, ಚಿರ್ಚನಗುಡ, ಆದಾಪುರ, ನವಲಿ, ಕರಡೋಣಾ, ಮಪುರ, ಗುಡದೂರು ಗ್ರಾಮಕ್ಕೆ ತಲುಪಿ ಗ್ರಾಮದಲ್ಲಿ ವಾಸ್ತವ್ಯ ಮಾಡಲಾಗುವುದು.
ಮಾ.೨೮ರಂದು ಗುಡದೂರು, ಹಿರೇಖೇಡಾ, ನೀರ್ಲೂಟಿ ಮಾರ್ಗವಾಗಿ ಅಂತಿಮವಾಗಿ ಕನಕಗಿರಿ ಪಟ್ಟಣಕ್ಕೆ ತಲುಪಿ ಇಲ್ಲಿಯ ಶ್ರೀ ಕನಕಾಚಲಪತಿ ದೇವಾಲಯಕ್ಕೆ ಆಗಮಿಸಿ ವಿಶೇಷ ಪೂಜೆ ನೆರವೇರಿಸುವ ಮೂಲಕ ಬಹತ್ ಪಾದಯಾತ್ರೆಯನ್ನು ಮುಕ್ತಾಯ ಗೊಳಿಸಲಾಗುವುದು ಎಂದು ಡಾ. ಚಾರುಲ್ ದಾಸರಿ ಅವರು ತಿಳಿಸಿzರೆ.
ಈ ಪಾದಯಾತ್ರೆಯಲ್ಲಿ ಪಕ್ಷದ ಜಿಧ್ಯಕ್ಷ ಮನೋಹರಗೌಡ ಹೇರೂರು ಹಾಗೂ ಪಕ್ಷದ ಜಿ ತಾಲೂಕು ಮಟದ ವಿವಿಧ ಘಟಕಗಳ ಪದಾಧಿಕಾರಿಗಳು, ಗಾಲಿ ಜನಾರ್ಧನರೆಡ್ಡಿ ಅವರ ಅಭಿಮಾನಿಗಳು, ಬೆಂಬಲಿಗರು, ಹಿತೈಷಿಗಳು ಹಾಗೂ ಪಕ್ಷದ ಅನೇಕ ಮುಖಂಡರು, ಕಾರ್ಯಕರ್ತರು ಭಾಗವಹಿಸಲಿzರೆ ಎಂದು ಡಾ.ಚಾರುಲ್ ತಿಳಿಸಿದ್ದಾರೆ.