ಬಡವರ ಹೊಟ್ಟೆಗೆ ಹಿಟ್ಟು-ಶಿಕ್ಷಣ-ಆರೋಗ್ಯ ನಮ್ಮ ಸರ್ಕಾರದ ಉದ್ದೇಶ: ಸಚಿವ ಎಸ್.ಎಸ್.ಮಲ್ಲಿಕಾರ್ಜುನ್
ಹೊನ್ನಾಳಿ: ಬಡವರ ಹೊಟ್ಟೆಗೆ ಹಿಟ್ಟು-ಒಳ್ಳೆಯ ಶಿಕ್ಷಣ-ಉಚಿತ ಆರೋಗ್ಯ ಮತ್ತು ಸೂರಿಲ್ಲದವರಿಗೆ ಸೂರು ಒದಗಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರವು ಪ್ರಾಮಾಣಿಕ ಪ್ರಯತ್ನ ಮಾಡುತ್ತದೆ ಎಂದು ಗಣಿ ಮತ್ತು ಭೂವಿeನ ಹಾಗೂ ತೋಟಗಾರಿಕಾ ಇಲಾಖಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಭರವಸೆ ನೀಡಿದರು.
ಹೊನ್ನಾಳಿ -ನ್ಯಾಮತಿ ಅವಳಿ ತಾಲೂಕುಗಳ ಸಾಧು ವೀರಶೈವ ಸಮಾಜದ ವತಿಯಿಂದ ತಾಲ್ಲೂಕಿನ ಗೊಲ್ಲರಹಳ್ಳಿ ಸಮೀಪದ ಶ್ರೀ ತರಳಬಾಳು ಸಮುದಾಯ ಭವನ ದಲ್ಲಿ ಆಯೋಜಿಸಿದ್ದ ಎ ಪಕ್ಷಗಳ ಚುನಾಯಿತ ಜನಪ್ರತಿನಿಧಿಗಳಿಗೆ ಸನ್ಮಾನ ಮತ್ತು ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಸಮಾಜದ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕಾಂಗ್ರೆಸ್ ಸರ್ಕಾರವು ಚುನಾವಣಾ ಪೂರ್ವದಲ್ಲಿ ಜನತೆಗೆ ನೀಡಿದ್ದ ೫ ಗ್ಯಾರಂಟಿಗಳನ್ನು ಸಮರ್ಪಕವಾಗಿ ಜನರಿಗೆ ತಲುಪಿಸುವ ಬಗ್ಗೆ ಸರ್ಕಾರ ವಿಶೇಷ ಗಮನ ಹರಿಸಿದ್ದು, ಇದರಲ್ಲಿ ಯಶಸ್ವಿಕೂಡ ಆಗಿದೆ. ಮಾರ್ಚ್ ತಿಂಗಳವರೆಗೆ ಅಭಿವೃದ್ಧಿ ಕಾರ್ಯ ಗಳಿಗೆ ಸ್ವಲ್ಪಮಟ್ಟಿನ ಹಿನ್ನೆಡೆ ಯಾದರೂ ಮಾರ್ಚ್ ನಂತರ ಇಡೀ ರಾಜ್ಯದ ಸಮಗ್ರ ಅಭಿವೃದ್ದಿ ಗಾಗಿ ಕಾರ್ಯಕ್ರಮಗಳನ್ನು ರೂಪಿಸಿ ಯೋಜನೆಗಳ ಯಶಸ್ಸಿಗಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸಲಾ ಗುವುದೆಂದು ಭರವಸೆ ನೀಡಿದರು.
ರಾಜ್ಯ ರೈತ ಸಂಘದ ಅಧ್ಯಕ್ಷರು ಸಾಧು ವೀರಶೈವ ಸಮಾಜದ ಅಧ್ಯಕ್ಷರೂ ಅಗಿರುವ ಎಚ್.ಆರ್. ಬಸವರಾಜಪ್ಪ ಅವರ ಅನಿಸಿಕೆ ಪ್ರಕಾರ ಸರ್ಕಾರ ೫ ಕೆ.ಜಿ. ಅಕ್ಕಿ ಜೊತೆಗೆ ಪ್ರಾದೇಶಿಕವಾಗಿ ಬಳಕೆ ಮಾಡುವ ಜೋಳ, ರಾಗಿ, ಗೋಧಿ ಧಾನ್ಯಗಳನ್ನೂ ಕೂಡ ವಿತರಿಸುವ ಬಗ್ಗೆ ಚಿಂತನೆ ನಡೆಸಿದೆ ಎಂದು ಮಾಹಿತಿ ನೀಡಿದರು.
ಉಚಿತ ಹಾಸ್ಟೆಲ್ಗಳಿಗೆ ಕೂಡ ಸರ್ಕಾರದಿಂದ ಉಚಿತ ಅಕ್ಕಿ ವಿತರಣೆ ಮಾಡುವ ಯೋಜನೆ ಹಮ್ಮಿಕೊಳ್ಳಲಾಗುವುದು ಎಂದರು. ಭದ್ರಾ ಚಾಲನ್ಗೆ ನೀರು ಬಿಡುವ ಬಗ್ಗೆ ಕೂಡ ಗಮನಹರಿಸಿದ್ದು ಇಷ್ಟರ ನೀರಾವರಿ ಸಮಿತಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗು ವುದು ಎಂದು ಹೇಳಿದರು.
ಇನ್ನು ಮರಳು ನಿರ್ವಹಣೆ ಬಗ್ಗೆ ಕೂಡ ಇಷ್ಟರ ಸರ್ಕಾರದ ಹಂತದಲ್ಲಿ ಉತ್ತಮ ಗೈಡ್ ಲೈನ್ ರೂಪಿಸಿ ಕ್ರಮವಹಿಸಲಾಗುವುದು ಎಂದ ಸಚಿವರು, ತಾನು ಗಣಿ ಭೂವಿeನ ಮತ್ತು ತೋಟಗಾರಿಕಾ ಸಚಿವನಾದ ನಂತರ ಗಮನಹರಿಸಿದಾಗ ಗಣಿ, ಮತ್ತು ಭೂ ವಿವಿeನ ಇಲಾಖೆಯಲ್ಲಿ ಸುಮಾರು ೩೦ ಸಾವಿರ ಕೋಟಿ ಹಣ ಬಳಕೆಯಾಗಿದೇ ನೆನೆಗುದಿಗೆ ಬಿದ್ದಿದೆ, ಪ್ರಾಜೆಕ್ಟ್ ತಯಾರಿಕೆಗೆ ೧ ಕೋಟಿ ಹಣ ಖರ್ಚಾಗಿದೆ ಅಷ್ಟೇ, ನೆನೆಗುದಿಗೆ ಬಿದ್ದಿರುವ ಈ ಹಣವನ್ನು ಇಲಾಖೆ ವ್ಯಾಪ್ತಿಗೆ ಬರುವ ಪ್ರಮುಖ ಜಿಗಳಾದ ಬಳ್ಳಾರಿ, ಚಿತ್ರದುರ್ಗ, ಹೊಸಪೇಟೆ ಮತ್ತು ತುಮಕೂರು ಜಿಗಳಿಗೆ ಖರ್ಚು ಮಾಡಿದರೆ ಅವುಗಳನ್ನು ಶಾಂಘೈ ಸಿಟಿಯಂತೆ ಅಭಿವೃದ್ಧಿ ಮಾಡ ಬಹುದಾಗಿದೆ ಎಂದು ಹೇಳಿದರು.
ಸನ್ನಾನ ಸ್ವೀಕರಿಸಿ ಮಾತನಾಡಿದ ಶಾಸಕ ಡಿ.ಜಿ.ಶಾಂತನಗೌಡ ಅವರು, ಹೊನ್ನಾಳಿ-ನ್ಯಾಮತಿ ಸಾಧು ವೀರಶೈವ ಸಮಾಜ ಪಕ್ಷಾತೀತವಾಗಿ, ಜತ್ಯಾತೀತವಾಗಿ ಜಿಯ ಸಚಿವ, ಎ ಶಾಸಕರು ಗಳನ್ನು ಸನ್ಮಾನಿಸಿ ಗೌರವಿಸುವ ಮೂಲಕ ಇತರರಿಗೆ ಮೇಲ್ಪಂಕ್ತಿ ಹಾಕಿಕೊಟ್ಟಿzರೆ ಎಂದರು.
ಬಡವರು ಮನೆ ಕಟ್ಟಿಕೊಳ್ಳಲು ಅಧಿಕಾರಿಗಳು ಒಂದು ಗಾಡಿ ಮರಳು ಸಾಗಾಟಕ್ಕೂ ತೊಂದರೆ ಕೊಡುತ್ತಿದ್ದು ಈ ಹಿನ್ನಲೆಯಲ್ಲಿ ಜಿ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಬದಲಾವಣೆಗೆ ಸಚಿವ ಎಸ್.ಎಸ್. ಮಲ್ಲಿಕಾರ್ಜನ್ ಅವರಲ್ಲಿ ಮನವಿ ಮಾಡಿz ಆದರೆ ಇದರಲ್ಲಿ ನನ್ನ ಸ್ವಾರ್ಥ ಏನೂ ಇಲ್ಲ ಜನರ ಹಿತಕ್ಕಾಗಿ ಯಷ್ಟೇ ಎಂದು ಸ್ಪಷ್ಟಪಡಿಸಿದರು.
ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸಾಧು ವೀರಶೈವ ಸಮಾಜದವರು ಮನಸ್ಸು ಮಾಡಿದರೆ ತಲಾ ೧೦ ಮತ ಹಾಕಿಸುವ ಶಕ್ತಿ ಹೊಂದಿzರೆ ಎಂಬ ಹೇಳಿಕೆಗೆ ಶಾಸಕ ಡಿ.ಜಿ. ಶಾಂತನಗೌಡ ಉತ್ತರಿಸಿ ಈ ಸಭೆಯಲ್ಲಿ ಉಪಸ್ಥಿತ ಸಮಾಜ ಬಾಂಧವರು ಮನಸ್ಸು ಮಾಡಿದರೆ ಹತ್ತಲ್ಲ ನೂರು ಮತ ಹಾಕಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಈ ವಿಧಾನಸಭಾ ಚುನಾವಣೆಯಲ್ಲೂ ನನ್ನ ಗೆಲುವಿಗೆ ಸಹಕರಿಸಿzರೆ ಎಂದು ಪರೋಕ್ಷವಾಗಿ ಧನ್ಯವಾದಗಳನ್ನು ಅರ್ಪಿಸಿದರು.
ಕಾರ್ಯಕ್ರಮದಲ್ಲಿ ರೈತ ಸಂಘದ ರಾಜಧ್ಯಕ್ಷ, ಸಾಧು ವೀರಶೈವ ಸಮಾಜದ ರಾಜಧ್ಯಕ್ಷ ಎಚ್.ಆರ್. ಬಸವರಾಜಪ್ಪ ಮಾತನಾಡಿ, ಚುನಾವಣೆಗಳಲ್ಲಿ ಮಾತ್ರ ರಾಜಕೀಯ ಜತೀಯತೆ ಇರಬೇಕು ನಂತರ ಒಬ್ಬ ಜನಪ್ರತಿನಿಧಿಯಾಗಿ ಎಲ್ಲರ ಸಂಕಷ್ಟಗಳಿಗೂ ಸ್ಪಂದಿಸಬೇಕು ಎಂದು ಕಿವಿ ಮಾತು ಹೇಳಿದರು.
ಹರಿಹರದ ಶಾಸಕ ಬಿ.ಪಿ. ಹರೀಶ್, ಹಿರೇಕೆರೂರು ಶಾಸಕ ಯು.ಬಿ. ಬಣಕಾರ್, ಮಾಯ ಕೊಂಡ ಶಾಸಕ ಬಸವಂತಪ್ಪ, ಹಾಗೂ ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಎಚ್.ಎ. ಗದ್ದಿಗೇಶ್, ಜಿ.ಪಂ. ಮಾಜಿ ಸದಸ್ಯ ಡಿ.ಜಿ. ವಿಶ್ವನಾಥ್ ಮಾತನಾಡಿದರು.
ನ್ಯಾಮತಿ ತಾ. ಅಧ್ಯಕ್ಷ ಶಿವಪ್ಪ, ಜಿ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ, ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಕೆಂಗಲಹಳ್ಳಿ ಷಣ್ಮುಖಪ್ಪ, ಶಿವ ಬ್ಯಾಂಕ್ ಮತ್ತು ಸಾಧು ವೀರಶೈವ ಸಮಾಜದ ನಗರ ಘಟಕದ ಅಧ್ಯಕ್ಷ ಪಿ.ಬಿ. ಶೈಲೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಎ.ಜಿ.ಪ್ರಕಾಶ್ ದಿಡಗೂರು, ಎಚ್.ಎ. ಉಮಾಪತಿ, ಡಿ.ಎಸ್. ಸುರೇಂದ್ರಗೌಡ, ಡಿ.ಎಸ್. ಪ್ರದೀಪ್ಗೌಡ, ಟಿ.ಜಿ. ರಮೇಶ್ ಗೌಡ, ಅರಬಗಟ್ಟೆ ರಮೇಶ್, ವಿಶ್ವಬಂಧು ಶಾಮಿಯಾನದ ಮಾಲೀಕರು ಪ್ರಭು, ಎ.ಸಿ, ಬಸವರಾಜ್, ಡಿ.ಜಿ.ಸೋಮಪ್ಪ, ಪ್ರಕಾಶ್ ಬಸವನಹಳ್ಳಿ, ಎ.ಬಿ. ಹನುಮಂತಪ್ಪ, ಬೆನಕನಹಳ್ಳಿ ಎಚ್.ಜಿ. ರುದ್ರೇಶಪ್ಪ, ಅರಕೆರೆ ಮಧುಗೌಡ,ವಲಿಂಗಾಪುರದ ಸೋಮಣ್ಣ, ಸಣ್ಣಕ್ಕಿ ಬಸವನಗೌಡ, ಹೊಟ್ಯಾಪುರದ ಮಶ್,ಗಿರೀಶ್ ಗೌಡ,ಯಕ್ಕನಹಳ್ಳಿ ಬಸವರಾಜಪ್ಪ, ಹನುಮನಹಳ್ಳಿ ಬಸವರಾಜಪ್ಪ, ನೇರಲಗುಂಡಿ ಶ್ರೀಕಂಠಪ್ಪ, ಬೆನಕನಹಳ್ಳಿ ಗಣೇಶ್, ರಘು, ಶಿವಬ್ಯಾಂಕ್ ಕಾರ್ಯದರ್ಶಿ ರುದ್ರೇಶ್ ಮತ್ತು ಪದಾಧಿಕಾರಿಗಳು ಇತರರಿದ್ದರು.
ರುದ್ರೇಶ್ ನಿರೂಪಿಸಿದರು, ಸಾಣೆಹಳ್ಳಿ ನಾಗರಾಜ್ ತಂಡ ಪ್ರಾರ್ಥನೆ ಸಲ್ಲಿಸಿದರು.