ಶಾಸಕ ವಿಜಯೇಂದ್ರ ದಂಪತಿಗಳಿಂದ ಗಂಗಾಪೂಜೆ – ಬಾಗಿನ ಅರ್ಪಣೆ
ಶಿಕಾರಿಪುರ : ಯಡಿಯೂರಪ್ಪ ನವರ ದೂರದೃಷ್ಟಿ ಹಾಗೂ ಸಂಸದ ರಾಘವೇಂದ್ರರ ಅಭಿವೃದ್ದಿಪರವಾದ ನಿಲುವಿನಿಂದಾಗಿ ತಾಲೂಕಿನ ರೈತರು, ಜನತೆಗೆ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಲಾಗಿದ್ದು, ಅಂಜನಾಪುರ ಜಲಾಶಯಕ್ಕೆ ತುಂಗಾ ನದಿಯ ನೀರನ್ನು ಹರಿಸಿರುವುದರಿಂದ ಹಾಗೂ ವರುಣನ ಕೃಪೆಯಿಂದಾಗಿ ಕಳೆದ ಕೆಲ ದಿನದ ಹಿಂದೆ ಆತಂಕಕ್ಕೆ ಒಳಗಾಗಿದ್ದ ರೈತ ಸಮುದಾಯ ಇದೀಗ ನಿಟ್ಟುಸಿರು ಬಿಡುವಂತಾಗಿದೆ ಎಂದು ಕ್ಷೇತ್ರದ ಶಾಸಕ ಬಿ.ವೈ ವಿಜಯೇಂದ್ರ ತಿಳಿಸಿದರು.
ತಾಲೂಕಿನ ರೈತ ಸಮುದಾಯದ ಜೀವನಾಡಿಯಾದ ಅಂಜನಾಪುರ ಹಾಗೂ ಅಂಬ್ಲಿಗೊಳ್ಳ ಜಲಾಶಯ ಭರ್ತಿಯಾದ ಹಿನ್ನಲೆ ಯಲ್ಲಿ ಪತ್ನಿ ಪ್ರೇಮಾ ಜತೆಗೂಡಿ ಗಂಗಾಪೂಜೆ ನೆರವೇರಿಸಿ ಬಾಗಿನ ಸಮರ್ಪಿಸಿ ಅವರು ನಂತರದಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.
ಕಳೆದ ವರ್ಷ ಇದೇ ಸ್ಥಳ ಇದೇ ಸಂದರ್ಭದಲ್ಲಿ ಯಡಿಯೂರಪ್ಪ ನವರು ಚುನಾವಣೆಗೆ ಸ್ಪರ್ಧಿಸದೆ ಬದಲಿಗೆ ವಿಜಯೇಂದ್ರ ಸ್ಪರ್ಧಿ ಸುವುದಾಗಿ ಘೋಷಿಸಿದ್ದು,ಇದೀಗ ಶಾಸಕನಾಗಿ ಗಂಗಾಪೂಜೆ ನೆರವೇರಿಸುವ ಸುಯೋಗ ಒದಗಿ ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದ ಅವರು, ಕೆಲ ವರ್ಷದ ಹಿಂದೆ ಶಾಸಕನಾಗುವ ಕನಸನ್ನು ಕಂಡಿರಲಿಲ್ಲ. ಯಡಿಯೂರಪ್ಪ ನವರಿಗೆ ರಾಜಕೀಯ ಜನ್ಮ ನೀಡಿದ ತಾಲೂಕಿನ ಜನತೆಯ ಸೇವೆಗೈ ಯುವ ಅವಕಾಶ ಒದಗಿ ಬಂದಿದ್ದು ಪೂರ್ವ ಜನ್ಮದ ಪುಣ್ಯ ಎಂದು ಭಾವಿಸಿರುವುದಾಗಿ ತಿಳಿಸಿದರು.
ಶಾಸಕನಾಗಿ ಪರಿಹಾರ ದೊರಕಿಸುವ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುವು ದಾಗಿ ತಿಳಿಸಿ ಕಾರ್ಯಕರ್ತರು ಮತದಾರರು ತಾಲೂಕಿನ ಜನತೆಯ ಪ್ರೀತಿ ವಿಶ್ವಾಸವನ್ನು ಉಳಿಸಿಕೊಳ್ಳಲು ಶ್ರಮಿಸುತೆತೀನೆ ಯಡಿಯೂರಪ್ಪ ನವರ ಸ್ಥಾನವನ್ನು ತುಂಬಲು ಸಾಧ್ಯವಿಲ್ಲ ಅವರ ಮಾರ್ಗದರ್ಶನ ಹಾದಿಯಲ್ಲಿ ಸಾಗುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸ್ಥಳೀಯ ಹಾರೋಗೊಪ್ಪ, ತರಲಘಟ್ಟ, ಗಾಮ ಮತ್ತಿತರ ಗ್ರಾ.ಪಂ ವತಿಯಿಂದ ನೂತನ ಶಾಸಕರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಎಂಎಡಿಬಿ ಮಾಜಿ ಅಧ್ಯಕ್ಷ ಗುರು ಮೂರ್ತಿ, ಗ್ರಾ.ಪಂ ಅಧ್ಯಕ್ಷ ಅಶೋಕ, ಬಸವರಾಜ್, ಪ್ರತಾಪ್ ಎಇಇ ಮಂಜುನಾಥ್ ಮುಖಂಡ ಬಳಿಗಾರ್, ವಸಂತಗೌಡ, ಬಿ.ಡಿ ಭೂಕಾಂತ್, ನಾಗರಾಜ ಕೊರಲಹಳ್ಳಿ,ವೀರೇಂದ್ರ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.