ಮಣಿಪುರ ಗಲಭೆ ಹತೋಟಿಗೆ ತರಲು ಮನವಿ…
ಶಿವಮೆಗ್ಗ: ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ಜರಿಗೆ ತರುವ ಮೂಲಕ ಗಲಭೆ ಹತೋಟಿಗೆ ತರಬೇಕೆಂದು ಆಮ್ ಆದ್ಮಿ ಪಾರ್ಟಿ ಕಾರ್ಯಕರ್ತರು ಇಂದು ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಮಣಿಪುರ ರಾಜ್ಯದಲ್ಲಿ ತಿಂಗಳುಗಳಿಂದ ಸತತವಾಗಿ ಗಲಭೆ ನಡೆಯುತ್ತಿವೆ. ನೂರಾರು ಸಂಖ್ಯೆಯಲ್ಲಿ ಜನ ಸಾವನ್ನಪ್ಪಿದ್ದಾರೆ. ಹೆಣ್ಣು ಮಕ್ಕಳನ್ನು ನಗ್ನಗೊಳಿಸಿ ಮೆರವಣಿಗೆ ಮಾಡಿ ಬಲಾತ್ಕಾರ ಮಾಡಿರುವುದು ಅಲ್ಲಿನ ಬಿಜೆಪಿ ಆಡಳಿತದ ಸರ್ಕಾರ ಶಾಂತಿ ಕಾಪಾಡಲು ಸಂಪೂರ್ಣವಾಗಿ ಸೋತಿದೆ. ಕೇಂದ್ರದಲ್ಲೂ ಬಿಜೆಪಿ ಸರ್ಕಾರ ಇದ್ದರೂ ಪರಿಸ್ಥಿತಿ ಹತೊ ಟಿಗೆ ತರಲು ಸಾಧ್ಯವಾಗುತ್ತಿಲ್ಲ ಎಂದು ದೂರಿದರು.
ರಾಷ್ಟ್ರಪತಿಗಳು ಮಧ್ಯಪ್ರವೇಶ ಮಾಡಿ ಮಣಿಪುರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ವಜಗೊಳಿಸಿ ರಾಷ್ಟ್ರಪತಿ ಆಡಳಿತ ಜರಿಗೆ ತರುವ ಮೂಲಕ ಶಾಂತಿ ಕಾಪಾಡಬೇಕು ಎಂದು ಮನವಿ ಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಪ್ರಮುಖ ರಾದ ಕೆ. ಕಿರಣ್, ನಜೀರ್ ಅಹ್ಮದ್, ಸುರೇಶ್ ಕಾಟೇಕರ್, ದಿಲ್ ಶಾದ್ ಬೇಗಂ, ಲಿಂಗ ರಾಜು, ಭಾಸ್ಕರ್, ಮಕ್ಬೂಲ್ ಅಹ ಮದ್, ಮೆಹ್ಮದ್ ಅಲಿ ಇದ್ದರು.