ಶೈಕ್ಷಣಿಕ ನೆರವು ಪಡೆದ ಸಂಸ್ಥೆಗೆ ಫಲ ಸಿಕ್ಕಾಗ ವಾಪಸು ಮಾಡಬೇಕು: ರೋಹನ್
ಸಾಗರ: ಶಿಕ್ಷಣಕ್ಕಾಗಿ ಆರ್ಥಿಕ ನೆರವು ಪಡೆದುಕೊಂಡ ಸಂಸ್ಥೆಗೆ ಫಲಾನುಭವಿ ವಿದ್ಯಾರ್ಥಿಗಳು ಮುಂದೆ ಅದರ ಫಲ ಸಿಕ್ಕಾಗ ವಾಪಸು ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಡಿವೈಎಸ್ಪಿ ರೋಹನ್ ಜಗದೀಶ್ ಸಲಹೆ ನೀಡಿದರು.
ಇಲ್ಲಿನ ಶೃಂಗೇರಿ ಶಂಕರ ಮಠ ದಲ್ಲಿ ವಿದ್ಯಾಪೋಷಕ್ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ೭ದಿನಗಳ ಕಾಲ ಏರ್ಪಡಿಸಿದ್ದ ವಸತಿಸಹಿತ ಸೇತುಬಂಧ ಶಿಬಿರದ ಸಮಾರೋಪ ದಲ್ಲಿ ಅವರು ಮಾತನಾಡಿ, ಹೀಗೆ ಮಾಡುವುದರಿಂದ ಸಂಸ್ಥೆಗೂ ಅನುಕೂಲ ಹಾಗೂ ಇದರಿಂದ ಮತ್ತಷ್ಟು ವಿದ್ಯಾರ್ಥಿಗಳಿಗೆ ನೆರವಾಗಲು ಪೂರಕ ಎಂದರು.
ವಿದ್ಯಾರ್ಥಿಗಳು ವಿವಿಧ ಕೋರ್ಸ್ ಮುಗಿಸಿದ ನಂತರದ ಪರೀಕ್ಷೆಗಳನ್ನು ಆತ್ಮವಿಶ್ವಾಸದಿಂದ ಎದುರಿಸಬೇಕು. ಬದಲಾದ ಕಾಲ ಘಟ್ಟದಲ್ಲಿ ವಿದ್ಯಾರ್ಥಿಗಳಿಗೆ ಸಾಕಷ್ಟು ಸೌಲಭ್ಯಗಳು ಸಿಗುತ್ತಿವೆ. ಈ ಹಂತದಲ್ಲಿ ಬದುಕಿನ ನೆಲೆಗಟ್ಟನ್ನು ಭದ್ರಪಡಿಸಿಕೊಳ್ಳಬೇಕು. ಕೇವಲ ಓದಿನಲ್ಲಿ ತೊಡಗಿಕೊಳ್ಳದೇ ಲೋಕeನ ಗಳಿಸಬೇಕು. ಎಲ್ಲ ಸಮಸ್ಯೆಗೂ ಒಂದು ಪರಿಹಾರ ಇದೆ. ಹಣ ಇದ್ದವರಿಗೂ ಸಮಸ್ಯೆ ಇರುತ್ತದೆ. ಜೀವನ ಗೆಲ್ಲುವ ಗುರಿ ನಿಮ್ಮದಾಗಿರಲಿ ಎಂದರು.
ವಿದ್ಯಾರ್ಥಿಗಳು ಕಷ್ಟಪಟ್ಟು ಓದಬೇಕು. ಈ ಹಂತದಲ್ಲಿ ಮೊಬೈ ಲ್ನ ವಾಟ್ಸ್ಅಪ್, ಇನ್ಸ್ಟಾಗ್ರಾಂ ಮುಂತಾದವುಗಳ ಬಳಕೆಯಿಂದ ದೂರವಿರಿ. ಓದು ಮುಗಿಸಿ ಉದ್ಯೋಗ ಸಿಕ್ಕಾಗ ಬಡವರಿಗೆ ಸಹಾಯ ಮಾಡುವುದನ್ನು ಮರೆಯದಿರಿ. ಶೈಕ್ಷಣಿಕ ಸಹಾಯ ಕೇಳಲು ಬಂದವರಿಗೆ ಸೂಕ್ತ ಮಾರ್ಗದರ್ಶನ ಮಾಡಿ. ನಾನು ಇಬ್ಬರಿಗೆ ಮಾರ್ಗದರ್ಶನ ಮಾಡಿ ದ್ದು, ಒಬ್ಬರು ಐಎಎಸ್ ಮತ್ತೊ ಬ್ಬರು ಐಪಿಎಸ್ ಅಧಿಕಾರಿಗಳಾಗಿ zರೆ. ಯಾವುದೇ ವ್ಯಸನಕ್ಕೆ ಬೀಳಬೇಡಿ, ಇಂಟರ್ನೆಟ್ನಲ್ಲಿ ಬರುವ ಅನಗತ್ಯ ಸಂದೇಶಗಳಿಗೆ ಪ್ರತಿಕ್ರಿಯಿಸ ಬೇಡಿ. ಸುಳ್ಳು ಯಾವುದು, ಸತ್ಯ ಯಾವುದು ತಿಳಿಯುವುದಿಲ್ಲ. ಸುಲಭವಾಗಿ ವಂಚಿಸುವವರ ಬಗ್ಗೆ ಎಚ್ಚರ ದಿಂದಿರಿ ಎಂದು ಸಲಹೆ ನೀಡಿದರು.
ವಿದ್ಯಾಪೋಷಕ್ ಸಂಸ್ಥೆಯ ಮ್ಯಾನೇಜರ್ ಎ.ಎಂ.ನಾಯಕ್ ಮಾತನಾಡಿ, ವಿದ್ಯಾರ್ಥಿಗಳ ಸಬಲೀಕರಣಕ್ಕಾಗಿ ಈ ಸಂಸ್ಥೆ ೨೦೦೧ ರಲ್ಲಿ ಆರಂಭಗೊಂಡಿತು. ಜತಿ, ಮತ, ಲಿಂಗ ಭೇದವಿಲ್ಲದೆ ಕೇವಲ ಪ್ರತಿಭೆಯೊಂದನ್ನೇ ಮಾನದಂಡ ವಾಗಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ನೆರವು ನೀಡುತ್ತಿ ದ್ದೇವೆ. ಬಡತನದ ಕಾರಣ ದಿಂದ ಯಾವುದೇ ವಿದ್ಯಾರ್ಥಿಯ ಶಿಕ್ಷಣದ ಆಸೆ ಕಮರಿಹೋಗ ಬಾರದು ಎಂ ಬುದು ಸಂಸ್ಥೆಯ ನಿಲುವು ಎಂದರು.
ಸಂಸ್ಥೆಯ ಅಧ್ಯಕ್ಷ ಸಿ.ವಿ. ಓಂಕಾರಿ ಅಧ್ಯಕ್ಷತೆ ವಹಿಸಿದ್ದರು. ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಸಂಸ್ಥೆಯ ಪ್ರಮುಖರಾದ ಕವಲಕೋಡು ವೆಂಕಟೇಶ್, ಟಿ.ವಿ. ಪಾಂಡುರಂಗ, ಶಂಕರ ಮಠದ ಧರ್ಮಾಧಿಕಾರಿ ಅಶ್ವಿನಿ ಕುಮಾರ್, ಪ್ರಕಾಶ್ ಭಟ್, ಮ.ಸ. ನಂಜುಂ ಡಸ್ವಾಮಿ ಮತ್ತಿತರರಿದ್ದರು. ಶಶಿ ಪ್ರಿಯಾ ಸಂಗಡಿಗರು ಪ್ರಾರ್ಥಿ ಸಿದರು. ಅಶ್ವಿನಿ ಸ್ವಾಗತಿಸಿ ದರು. ವಿಜಯಲಕ್ಷ್ಮಿ ನಿರೂಪಿಸಿದರು.