ಇತರೆಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿ

ರಾಜ್ಯಮಟ್ಟದ ಎಕ್ಸಲೆಂಟ್ ಫೋಟೋ – ವಿಡಿಯೋ ಕಾಂಟೆಸ್ಟ್ ..

Share Below Link

ಶಿವಮೊಗ್ಗ: ಶಿವಮೊಗ್ಗ ತಾಲ್ಲೂಕು ವೀಡಿಯೋ ಮತ್ತು ಫೋಟೋಗ್ರಾಫರ್‍ಸ್ ಅಸೋಸಿ ಯೇಷನ್ ವತಿಯಿಂದ ವಿಶ್ವ ಛಾಯಾಗ್ರಹಣ ದಿನಾಚರಣೆ ನಿಮಿತ್ತ ರಾಜ್ಯ ಮಟ್ಟದ ಎಕ್ಸಲೆಂಟ್ ಫೋಟೋ ವೀಡಿಯೋ ಕಾಂಟೆಸ್ಟ್ -೨೦೨೩ ಏರ್ಪಡಿಸಲಾಗಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ವಿ. ಸತೀಶ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಸ್ಪರ್ಧೆಯಲ್ಲಿ ರಾಜ್ಯದ ಎಲ್ಲಾ ಛಾಯಾಗ್ರಾಹಕರು ಭಾಗವಹಿಸ ಬಹುದಾಗಿದ್ದು, ಒಟ್ಟು ನಾಲ್ಕು ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಗೆ ಫೋಟೋ ಕಳುಹಿಸಲು ಆ.೨೦ ಕೊನೆಯ ದಿನವಾಗಿದೆ. ಸ್ಪರ್ಧೆಗೆ ಕಳುಹಿಸಲಾದ ಫೋಟೋ ಗಳನ್ನು ಹಿಂದಿರುಗಿಸಲಾಗುವುದಿಲ್ಲ ಎಂದರು.
ಛಾಯಾಗ್ರಾಹಕರಿಗೆ: ಎಕ್ಸ ಲೆಂಟ್ ಕ್ಯಾಂಡಿಡ್, ಪೋಟ್ರೆಟ್, ಆಕ್ಷನ್ ವೆಡ್ಡಿಂಗ್, ಔಟ್‌ಡೋರ್ ಪ್ರಿ ವೆಡ್ಡಿಂಗ್, ಲೈಟಿಂಗ್, ನ್ಯೂ ಬಾರ್ನ್ ಬೇಬಿ ಫೋಟೋಗ್ರಪಿ ಸ್ಪರ್ಧೆ ಇದ್ದು, ಸ್ಪರ್ಧೆಗೆ ೮೧೨ ಅಳತೆಯ ವಿವಿಧ ಮೂರು ಫೋ ಟೋಗಳನ್ನು ಕಳುಹಿಸಬಹುದು. ಈ ಸ್ಪರ್ಧೆಯಲ್ಲಿ ಭಾಗವಹಿಸು ವವರು ರಾಜ್ಯದ ಯಾವುದಾದರೂ ಛಾಯಾಗ್ರಾಹಕರ ಸಂಘದಲ್ಲಿ ಕಡ್ಡಾಯವಾಗಿ ಸದಸ್ಯತ್ವ ಹೊಂದಿರ ಬೇಕು ಎಂದರು.


ವೀಡಿಯೋಗ್ರಾಫರ್‌ಗಳಿಗೆ: ಎಕ್ಸಲೆಂಟ್ ಟ್ರೆಡಿಷನಲ್ -ಸಿನಿ ಮ್ಯಾಟಿಕ್ ವೀಡಿಯೋ ಶೂಟರ್, ಡ್ರೋನ್-ಪ್ರಿ ವೆಡ್ಡಿಂಗ್ ಶೂಟರ್ ಸ್ಪರ್ಧೆ ಇದ್ದು, ಪ್ರತಿಯೊಂದು ಸ್ಪರ್ಧೆಗೆ ಮೂರು ನಿಮಿಷದ ವೀಡಿ ಯೋ ಚಿತ್ರಣವನ್ನು ವಾಟ್ಸಾಪ್ ಮೂಲಕ ಡಾಕ್ಯುಮೆಂಟ್ ಫೈಲ್ ನಲ್ಲಿ ಕಳುಹಿಸಬೇಕು. ಈ ಸ್ಪರ್ಧೆ ಯಲ್ಲಿ ಭಾಗವಹಿಸುವವರು ರಾಜ್ಯ ದ ಯಾವುದಾದರೂ ಛಾಯಾ ಗ್ರಾಹಕರ ಸಂಘದಲ್ಲಿ ಕಡ್ಡಾಯ ವಾಗಿ ಸದಸ್ಯತ್ವ ಹೊಂದಿರಬೇಕು ಎಂದರು.
ಎಡಿಟರ್‌ಗಳಿಗೆ: ಎಕ್ಸಲೆಂಟ್ ಟ್ರೆಡಿಷನಲ್-ಪ್ರಿ ವೆಡ್ಡಿಂಗ್ ವೀಡಿ ಯೋ ಎಡಿಟರ್, ಸಿನಿಮ್ಯಾಟಿಕ್ ವೆಡ್ಡಿಂಗ್ ಎಡಿಟರ್ ಹಾಗೂ ಆಲ್ಬಮ್ ಡಿಸೈನರ್ ಸ್ಪರ್ಧೆ ಇದ್ದು, ಸ್ಪರ್ಧೆಗೆ ೮೧೨ ಅಳತೆಯ ವಿವಿಧ ಮೂರು ಫೋಟೋಗಳನ್ನು ಕಳುಹಿ ಸಬೇಕು. ಹಾಗೂ ೩ ನಿಮಿಷದ ವೀಡಿಯೋ ಚಿತ್ರಣವನ್ನು ವಾಟ್ಸಾ ಪ್ ಮೂಲಕ ಡಾಕ್ಯುಮೆಂಟ್ ಫೈಲ್‌ನಲ್ಲಿ ಕಳುಹಿಸಬೇಕು ಎಂದರು.
ಸಾರ್ವಜನಿಕರಿಗೆ: ೨೦೨೩ರ ಬೆಸ್ಟ್ ಕಪಲ್ ಪಿಕ್ಸ್, ಬಾರ್ನ್ ಬೇಬಿ ಪಿಕ್ಸ್, ಜ್ಯೂನಿಯರ್ ಬೇಬಿ ಪಿಕ್ಸ್ (೧೦ವರ್ಷದೊಳಗಿನ) ಹಾಗೂ ಟ್ವಿನ್ಸ್ ಪಿಕ್ಸ್ ಸ್ಪರ್ಧೆ ನಡೆಯಲಿದ್ದು, ಸ್ಪರ್ಧೆಗೆ ೮೧೨ ಅಳತೆಯ ವಿವಿಧ ಮೂರು ಫೋಟೋಗಳನ್ನು ಕಳುಹಿಸಬಹುದು ಎಂದರು.
ಎಲ್ಲಾ ವಿಭಾಗದ ಸ್ಪರ್ಧೆಗಳಿಗೆ ೫೦೦ರೂ. ಪ್ರವೇಶ ಶುಲ್ಕವಿದೆ. ಸ್ಪರ್ಧಿಗಳು ಸಂಘದ ಅಕೌಂಟ್‌ಗೆ ನೇರವಾಗಿ ಕ್ಯೂ-ಆರ್ ಕೋಡ್ ಮೂಲಕ ಹಣ ಸಂದಾಯ ಮಾಡಿ ಹೆಸರು ನೊಂದಾಯಿಸಬಹುದಾ ಗಿದೆ. ಛಾಯಾಗ್ರಾಹಕರು ವೀಡಿ ಯೋ ಕಳುಹಿಸಬೇಕಾದ ವಾಟ್ಸಾ ಪ್ ನಂ. ೯೩೫೩೨೬೦೪೩೧ರಲ್ಲಿ ಕಳುಹಿಸಬೇಕು. ಎಲ್ಲಾ ವಿಭಾಗದಲ್ಲಿ ವಿಜೇತರಾದವರಿಗೆ ವಿಶ್ವ ಛಾಯಾ ಗ್ರಹಣ ದಿನಾಚರಣೆ ಕಾರ್ಯಕ್ರ ಮದಲ್ಲಿ ಪ್ರಶಸ್ತಿ ಪ್ರದಾನ ಮಾಡ ಲಾಗುವುದು ಎಂದರು.
ಫೋಟೋಗಳನ್ನು ಶಿವಮೊಗ್ಗ ತಾಲ್ಲೂಕು ವೀಡಿಯೋ ಮತ್ತು ಫೋಟೋಗ್ರಾಫರ್‍ಸ್ ಅಸೋಸಿ ಯೇಷನ್ ನಂ.೧೪, ೪ನೇ ತಿರುವು, ಜಿ.ಎಸ್.ಕೆ.ಎಂ. ರಸ್ತೆ ಶಿವಮೊಗ್ಗ ಇಲ್ಲಿಗೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ೯೮೪೪೦೫ ೮೧೦೦, ೯೯೪೫೩೯೧೧೧೪ ಅಥವಾ ೯೮೮೦ ೮೦೦೯೮೭ರಲ್ಲಿ ಸಂಪರ್ಕಿ ಸಬಹು ದು ಎಂದರು.
ಪ್ರಮುಖರಾದ ಬಿ.ಕೆ.ಜಿ. ಪ್ರಸಾದ್, ಹೆಚ್.ಎಸ್.ಚೇತನ್, ಎಸ್.ಎಲ್ ಧನಂಜಯ್, ಪರಮೇಶ್, ಕೆ.ಸಿ. ಮೋಹನ್, ಪಿ. ಸಿದ್ದೇಶ್, ಹೆಚ್.ಎಂ. ರಾಹುಲ್. ಸಂತೋಷ್‌ಕುಮಾರ್ ಸುದ್ದಿ ಗೋಷ್ಟಿಯಲ್ಲಿ ಉಪಸ್ಥಿತರಿದ್ದರು.
ಅಸೋಸಿಯೇಷನ್ ನೂತನ ಸಾಲಿನ ಪದಾಧಿಕಾರಿಗಳು: ಶಿವಮೆಗ್ಗ ತಾಲ್ಲೂಕು ವೀಡಿಯೋ ಮತ್ತು ಫೋಟೋಗ್ರಾಫರ್‍ಸ್ ಅಸೋಸಿಯೇಷನ್‌ಗೆ ೨೦೨೩-೨೪ ಹಾಗೂ ೨೦೨೪-೨೫ನೇ ಸಾಲಿನ ನೂತನ ಕಾರ್ಯಕಾರಿ ಮಂಡಳಿಗೆ ಅಧ್ಯಕ್ಷರಾಗಿ ವಿ.ಸತೀಶ್ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಬಿ.ಕೆ.ಜಿ. ಪ್ರಸಾದ್, ಪ್ರಧಾನ ಕಾರ್ಯದರ್ಶಿಯಾಗಿ ಹೆಚ್.ಎಸ್.ಚೇತನ್, ಸಹಕಾರ್ಯದರ್ಶಿಯಾಗಿ ಶಿವಕುಮಾರ್, ಖಜಾಂಚಿಯಾಗಿ ಎಸ್.ಎಲ್. ಧನಂಜಯ್, ಸಂಚಾಲಕರಾಗಿ ಶಿವಕುಮಾರ್, ರಾಕೇಶ್ ಗೌಡ , ನಿರ್ದೇಶಕರುಗಳಾಗಿ ಜಿ.ಎಂ. ಲಿಂಗರಾಜು, ಪರಮೇಶ್, ಕೆ.ಸಿ. ಮೋಹನ್, ಪಿ. ಸಿದ್ದೇಶ್, ಹೆಚ್.ಆರ್. ಮಾರುತಿ, ಅಂಗಪ್ಪ, ಹೆಚ್.ಎಂ. ರಾಹುಲ್. ಸಂತೋಷ್‌ಕುಮಾರ್ ಆಯ್ಕೆಯಾಗಿದ್ದಾರೆ.