ಕೆರೆ ಬಸಿಗಾಲುವೆ ತೆರವಿಗೆ ಆಗ್ರಹ…
ಸಾಗರ : ತಾಲ್ಲೂಕಿನ ಕಸಬಾ ಹೋಬಳಿಯ ಮಾಸೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮನೆಘಟ್ಟ ಗ್ರಾಮದಲ್ಲಿ ಕೆರೆ ಬಸಿಗಾಲುವೆ ಯನ್ನು ತೆರವುಗೊಳಿಸುವಂತೆ ಒತ್ತಾ ಯಿಸಿ ಗ್ರಾಮಸ್ಥರು ಮಂಗಳವಾರ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾ ಡಿದ ತಾಲ್ಲೂಕು ಪ್ರಗತಿಪರ ಯುವ ಒಕ್ಕೂಟದ ಅಧ್ಯಕ್ಷ ರಮೇಶ್ ಈ. ಕೆಳದಿ, ಮಾಸೂರು ಗ್ರಾಮ ಪಂಚಾಯ್ತಿಯ ಮನೆಘಟ್ಟ ಗ್ರಾಮದ ಸರ್ವೇ ನಂ. ೧೬೯ರ ತೋಟದ ಮೇಲಿನ ಕೆರೆಯಿಂದ ಜಮೀನಿಗೆ ನೀರು ಹರಿಯುತ್ತಿದ್ದ ಬಸಿಗಾಲುವೆಯನ್ನು ಕೆಲವರು ಮುಚ್ಚಿzರೆ. ಮುಚ್ಚಿರುವ ಬಸಿ ಗಾಲುವೆಯನ್ನು ತೆರವುಗೊಳಿಸು ವಂತೆ ಜೂನ್ ತಿಂಗಳಿನಲ್ಲಿ ತಹಶೀ ಲ್ದಾರ್‌ಗೆ ಮನವಿ ಸಲ್ಲಿಸಲಾಗಿತ್ತು ಎಂದರು.
ಗ್ರಾಮಸ್ಥರು ಮನವಿ ಸಲ್ಲಿಸಿ zಗ್ಯೂ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಬಸಿಗಾಲುವೆ ತೆರವುಗೊ ಳಿಸದ ಕ್ರಮ ಖಂಡನೀಯ. ಈ ಭಾಗದಲ್ಲಿ ಸುಮಾರು ೮೦ ಕುಟುಂ ಬಗಳು ವಾಸಿಸುತ್ತಿದ್ದು, ೧೫೦ಕ್ಕೂ ಹೆಚ್ಚು ಎಕರೆ ಜಮೀನಿಗೆ ಈ ಬಸಿ ಗಾಲುವೆ ನೀರಿನ ಮೂಲವಾಗಿದೆ. ತಕ್ಷಣ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮುಚ್ಚಿರುವ ಬಸಿಗಾಲುವೆ ಯನ್ನು ಬಿಡಿಸಿ ಗ್ರಾಮಸ್ಥರಿಗೆ ಅನು ಕೂಲ ಕಲ್ಪಿಸಬೇಕು. ಇಲ್ಲವಾದಲ್ಲಿ ಗ್ರಾಮಸ್ಥರು ಉಗ್ರವಾದ ಪ್ರತಿಭ ಟನೆ ಹಮ್ಮಿಕೊಳ್ಳುವುದು ಅನಿ ವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಗ್ರಾಮದ ಪ್ರಮುಖರಾದ ದೇವೇಂದ್ರಪ್ಪ ಯಲಕುಂದ್ಲಿ ಮಾತ ನಾಡಿ, ಬಸಿಗಾಲುವೆ ಮುಚ್ಚಿರುವ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಸ್ಥಳಕ್ಕೆ ಭೇಟಿ ನೀಡದೆ ಇರುವುದು ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ. ಯಾರು ಗ್ರಾಮಸ್ಥ ರಿಗೆ ತೊಂದರೆ ಕೊಡುತ್ತಾರೋ ಅವರಿಗೆ ತಿಳುವಳಿಕೆ ಮೂಡಿಸಿ ಶಾಸಕರ ಗಮನಕ್ಕೆ ವಿಷಯ ತಂದು ಸಮಸ್ಯೆ ಇತ್ಯರ್ಥಪಡಿಸಲು ಮನವಿ ಮಾಡಿದರು.
ಪ್ರಮುಖರಾದ ರವಿ ಕುಗ್ವೆ, ಕನ್ನಪ್ಪ ಬೆಳಲಮಕ್ಕಿ, ಮಹಾಬಲ ಮನೆಘಟ್ಟ, ಛಾಯಪ್ಪ, ಕೃಷ್ಣಪ್ಪ, ವೀರಭದ್ರ, ದೇವೇಂದ್ರ, ಸುರೇಂದ್ರ, ಕಮಲಾಕರ, ಅಣ್ಣಪ್ಪ, ಗಾಯತ್ರಿ, ಕವಿತಾ, ಯಶೋಧ, ನೇತ್ರಾವತಿ, ಕಲಾವತಿ ಇನ್ನಿತರರು ಹಾಜರಿದ್ದರು.