ಎಂಎ ಕನ್ನಡ : ಶಿವಮೊಗ್ಗದ ಶೈಲಶ್ರೀ ಅವರಿಗೆ ಪ್ರಥಮ ರ್ಯಾಂಕ್…
ಶಿವಮೊಗ್ಗ : ಮೈಸೂರಿನ eನ ಗಂಗೋತ್ರಿ ರಾಜ್ಯ ಮುಕ್ತ ವಿವಿ ದೂರ ಶಿಕ್ಷಣದಲ್ಲಿ ಕಳೆದ ಸಾಲಿನ ಕನ್ನಡ ಎಂಎ ಪರೀಕ್ಷೆಯಲ್ಲಿ ನಗರದ ಬೊಮ್ಮನಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಶೈಲಶ್ರೀ ಅವರು ೧೦೦೦ ಅಂಕಗಳಿಗೆ ೮೨೯ ಅಂಕಗ ಳನ್ನು ಪಡೆದು ಕರ್ನಾಟಕ ರಾಜ್ಯಕ್ಕೆ ಪ್ರಥಮ ರ್ಯಾಂಕ್ಗಳಿಸಿzರೆ. ಮೈಸೂರಿನ ಮುಕ್ತ ವಿಶ್ವವಿದ್ಯಾಲಯ ಘಟಿಕೋತ್ಸವ ಕಾರ್ಯಕ್ರಮದಲ್ಲಿ ರಾಜ್ಯಪಾಲರು ಹಾಗೂ ಕುಲ ಪತಿಗಳಿಂದ ರ್ಯಾಂಕ್ನ ಸರ್ಟಿಫಿ ಕೇಟ್ ಹಾಗೂ ಗೋಲ್ಡ್ ಮೆಡಲ್ ಪದಕ ಮತ್ತು ನಗದು ಬಹುಮಾನ ನೀಡಿ ಪುರಸ್ಕರಿಸಿzರೆ.
ಈ ಪ್ರತಿಭಾನ್ವಿತರು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಶಿವಮೊಗ್ಗ ಶಾಖೆಯ ಸಹ ಕಾರ್ಯದರ್ಶಿ ಹಾಗೂ ಶಿಕ್ಷಕರ ಪತ್ತಿನ ಸಹಕಾರ ಸಂಘದಲ್ಲಿ ನಿರ್ದೇಶಕಿಯಾಗಿ ಸಕ್ರಿಯವಾಗಿ ಕಾರ್ಯನಿರ್ವಹಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿzರೆ.