ಜೈನ ಮುನಿಗಳ ಹತ್ಯೆ ಖಂಡಿಸಿ ಪರೋಪಕಾರಂನಿಂದ ಮನಾಚರಣೆ
ಶಿವಮೊಗ್ಗ: ಜೈನ ಧರ್ಮ ಅಹಿಂಸೆಗೆ ಪ್ರಥಮ ಪ್ರಾಶಸ್ತ್ಯ ನೀಡಿದೆ. ಇಂತಹ ಧರ್ಮದ ತತ್ವ, ಸಿದ್ಧಾಂತಗಳನ್ನು ಜನರಿಗೆ ಬೋಧಿಸುತ್ತಿದ್ದ ಜೈನ ಮುನಿ ೧೦೮ ಆಚಾರ್ಯ ಕಾಮಕುಮಾರ ನಂದಿ ಮಹಾರಾಜರ ಭೀಕರ ಹತ್ಯೆ ಶಾಂತಿಪ್ರಿಯರ ಮನವನ್ನು ತಲ್ಲಣಗೊಳಿಸಿದೆ ಎಂದು ದಿಗಂಬರ ಜೈನ ಸಂಘದ ಕಾರ್ಯದರ್ಶಿ, ನಿವೃತ್ತ ಶಿಕ್ಷಕ ಬಿ. ಪಾರ್ಶ್ವನಾಥ್ ನೊಂದು ನುಡಿದರು.
ಪರೋಪಕಾರಂ ಕುಟುಂಬದ ವತಿಯಿಂದ ಇಲ್ಲಿನ ಬಸವೇಶ್ವರ ನಗರದಲ್ಲಿನ ಜೈನ ಸಮುದಾಯ ಭವನದ ಎದುರಿರುವ ಶ್ರೀ ಮಹಾ ವೀರ ಸಾರ್ವಜನಿಕ ಉದ್ಯಾನ ವನದಲ್ಲಿ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮದ ನಂತರ ಭಗವಾನ್ ಶ್ರೀ ೧೦೦೮ ಆದಿನಾಥ ಜಿನಮಂದಿರದ ಆವರಣದಲ್ಲಿ ನಡೆದ ಜೈನ ಮುನಿ ಶ್ರೀ ಕಾಮ ಕುಮಾರ ನಂದಿ ಮಹಾರಾಜರ ಸಂತಾಪ ಸೂಚಕ ಸಭೆಯಲ್ಲಿ ಅವರು ಮಾತನಾಡಿದರು.
ಸತ್ಯ, ಅಹಿಂಸೆ, ಅಸ್ತೇಯ, ಬ್ರಹ್ಮಚರ್ಯ ಮತ್ತು ಅಪರಿಗ್ರ ಹಗಳೆಂಬ ಪಂಚಾಣು ವ್ರತಗಳನ್ನು ಪರಿಪಾಲಿಸಿಕೊಂಡು ಬರುತ್ತಿದ್ದ ಚಿಕ್ಕೋಡಿಯ ಹಿರೇಕೋಡಿ ನಂದಿ ಪರ್ವತ ಆಶ್ರಮದ ಜೈನ ಮುನಿ ೧೦೮ ಆಚಾರ್ಯ ಕಾಮಕುಮಾರ ನಂದಿ ಮಹಾರಾಜರು ಆಚಾರ್ಯ ಶ್ರೇಷ್ಠರು. ಇವರು ಇತ್ಯಾತ್ಮಕ ಮಾ ನವೀಯ ಮಲ್ಯಗಳ ಪ್ರತಿಪಾದಕ ರಾಗಿದ್ದರು. ಇವರ ಭೀಕರ ಹತ್ಯೆ ದಿಗ್ಭ್ರಮೆ ಮೂಡಿಸಿದೆ ಎಂದರು.
ಪರೋಪಕಾರಂನ ಕಟ್ಟಾಳು ಶ್ರೀಧರ್ ಎಂ.ಎನ್. ಮಾತನಾಡಿ ಜೈನ ಮುನಿಗಳ ಹತ್ಯೆ ಇಡೀ ಸಮಾಜಕ್ಕೆ ಆಘಾತ ತಂದಿದೆ. ಅಹಿಂಸೆಯ ಪ್ರತಿಪಾದಕರಾಗಿದ್ದ ಮುನಿಗಳನ್ನು ಅಮಾನುಷವಾಗಿ ಹತ್ಯೆಗೈದವರಿಗೆ ಕಠಣ ಶಿಕ್ಷೆಯಾಗ ಬೇಕೆಂದರು.
ಅನಿಲ್ ಹೆಗಡೆ, ಮುಂದೆ ಇಂತಹ ದುರ್ಘಟನೆಗಳು ನಡೆಯ ದಂತೆ ಎಚ್ಚರಿಕೆ ವಹಿಸಬೇಕು. ಜೈನ ಮುನಿಗಳಿಗೆ ಅಗತ್ಯ ರಕ್ಷಣೆ ನೀಡ ಬೇಕು. ಈ ಅಮಾನುಷ ಹತ್ಯೆ ಯನ್ನು ಪರೋಪಕಾರಂ ಕುಟುಂಬ ಖಂಡಿಸುತ್ತದೆ ಎಂದು ಹೇಳಿದರು.
ಪರೋಪಕಾರಂನ ಲೀಲಾ ಬಾಯಿ ಎಂ.ಎನ್., ಮೆಗ್ಗಾನ್ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ. ಕಿರಣ್ ಶಂಕರ್, ಸೈಕಲ್ ಶಾಪ್ನ ರಫಿಕ್ ಖಾನ್, ನಿವೃತ್ತ ಯೋಧ ವೆಂಕಟೇಶ್, ರಾಘವೇಂದ್ರ ಎಂ.ಎನ್., ಕಾಂತಾರ ಅಶೋಕ್, ಓಂ ಪ್ರಕಾಶ್, ದಿಗಂಬರ ಜೈನ ಸಂಘದ ನಿರ್ದೇಶಕರುಗಳಾದ ಆರ್. ಸಂಪತ್ ಕುಮಾರ್, ಜಯಪ್ಪ, ರತ್ನ ಕುಮಾರ್, ಬಳ್ಳೇಶ್ವರ ಶಾಂತರಾಜ್, ಸದಸ್ಯ ಕಡೂರು ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.