ತಂದೆ-ತಾಯಿ : ಇಬ್ಬರೂ ಕಣ್ಣಿಗೆ ಕಾಣುವ ದೇವರು…
ಪ್ರತಿ ವ್ಯಕ್ತಿಯ ಜೀವನದಲ್ಲಿ ತಂದೆ ತಾಯಿಯರ ಪ್ರಭಾವ ಅತ್ಯಮೂಲ್ಯವಾಗಿದೆ. ಬರೀ ಜನ್ಮದಾತರು ಮಾತ್ರವಲ್ಲ, ತಂದೆ-ತಾಯಿಯರು ಮಗುವಿಗೆ ಉತ್ತಮ ಗುಣಗಳನ್ನು ಕಲಿಸಿ ಸಮಾಜದಲ್ಲಿ ಉತ್ತಮ ವ್ಯಕ್ತಿಯನ್ನಾಗಿ ಮಾಡಲು ಶ್ರಮಿಸುತ್ತಾರೆ. ಈ ಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ.
ಮಕ್ಕಳ ಏಳಿಗೆಗಾಗಿ ತಮ್ಮ ಜೀವಮಾನದ ಗಳಿಕೆಯನ್ನೇ ಪಣವಾಗಿಟ್ಟು ತಮ್ಮ ಮಕ್ಕಳ ಸುಖದಲ್ಲಿಯೇ ಸುಖ ಕಾಣುವ ತಂದೆ-ತಾಯಿಯರ ಋಣವನ್ನು ತೀರಿಸಲು ಸಾಧ್ಯವೇ ಇಲ್ಲ. ಆದರೆ ಕೆಲವು ಕೃತಘ್ನ ಮಕ್ಕಳು ತಮ್ಮ ರೆಕ್ಕೆ ಬಲಿತ ಬಳಿಕ ತಮ್ಮ ತಂದೆ ತಾಯಿಯರನ್ನು ಅಲಕ್ಷಿಸಿ ಸರಿಯಾಗಿ ನೋಡಿಕೊಳ್ಳದಿರುವುದು, ವೃದ್ಧಾಶ್ರಮಕ್ಕೆ ಅಟ್ಟುವುದು ಮೊದಲಾದ ಕ್ರಮಗಳ ಮೂಲಕ ಮಾನವತೆಗೇ ಕಳಂಕರಾಗಿzರೆ. ತಾಯಿಗಿಂತ ಬಂಧುವಿಲ್ಲ ಉಪ್ಪಿಗಿಂತ ರುಚಿಯಿಲ್ಲ….
ಆದರೆ ತಂದೆ-ತಾಯಿಯನ್ನು ಪ್ರೀತಿಸುವುದು, ಅವರ ಬಾಳಸಂಜೆಯಲ್ಲಿ ಅವರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದು, ಮಕ್ಕಳಂತೆ ಸಲುಹುವುದು ಮೊದಲಾದವು ಮಕ್ಕಳ ಕರ್ತವ್ಯವೇ ಹೌದು.
ಈ ಜಗತ್ತಿನ ಮೇಲೆ ನಾವಿಂದು ಇರಬೇಕಾದರೆ ಇದಕ್ಕೆ ನಮ್ಮ ತಂದೆ-ತಾಯಿಯರೇ ಕಾರಣ. ಹುಟ್ಟಿದ ದಿನದಿಂದ ರೆಕ್ಕೆ ಬಲಿಯುವವರೆಗೂ ಪಾಲನೆ ಮಾಡಿ ಸೂಕ್ತ ತಿಳಿವಳಿಕೆ-ಶಿಕ್ಷಣ ನೀಡಿ ಸಮಾಜದಲ್ಲಿ ಗಣ್ಯವ್ಯಕ್ತಿಯ ದರ್ಜೆ ಪಡೆಯಲು ನೆರವಾಗಿzರೆ.
ಯಾವುದೇ ತಂದೆ-ತಾಯಿಯರಿಗೆ ತಮ್ಮ ಮಕ್ಕಳು ಸುಖವಾಗಿರಬೇಕು, ನೆಮ್ಮದಿಯ ಬಾಳುವೆ ನಡೆಸಬೇಕು ಎಂಬುದೇ ಮಹತ್ವಾಕಾಂಕ್ಷೆಯಾಗಿದ್ದು, ಇವರು ತಮ್ಮ ಮಕ್ಕಳನ್ನು ತಮ್ಮ ಅಂತಿಮ ಉಸಿರಿನವರೆಗೂ ಪ್ರೀತಿಸುತ್ತಾರೆ.
ಈ ಜಗತ್ತಿನಲ್ಲಿ ಹೆಚ್ಚಿನ ಎ ಪ್ರೀತಿಗಳು ಸ್ವಾರ್ಥಭರಿತವಾಗಿರುತ್ತವೆ. ನಮ್ಮ ಉದ್ಯೋಗ ಗಳಂತೂ ಇಷ್ಟು ಕೆಲಸಕ್ಕೆ ಇಷ್ಟು ಸಂಬಳ ಎಂಬ ಅಪ್ಪಟ ವ್ಯಾಪಾರವೇ ಹೌದು. ನಮ್ಮ ಸ್ನೇಹಿತರು, ಸಹೋದ್ಯೋಗಿಗಳು, ನೆಂಟರು ನಮ್ಮನ್ನು ಪ್ರೀತಿಸಿದರೂ ಇವರ್ಯಾರ ಪ್ರೀತಿಯೂ ತಂದೆ- ತಾಯಿಯರ ಪ್ರೀತಿಗೆ ಸರಿಸಮನಾಗಲಾರದು.
ಏಕೆಂದರೆ, ಬೇರೆ ಎಲ್ಲರ ಪ್ರೀತಿಯಲ್ಲಿ ಕಡಿಮೆಯಾದರೂ ತಂದೆ-ತಾಯಿಗಳ ಪ್ರೀತಿಯಲ್ಲಿ ಮಾತ್ರ ಎಂದೂ ಕಡಿಮೆಯಾಗದು. ಏಕೆಂದರೆ ಇವರ ಪ್ರೀತಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದ ಅಪ್ಪಟ ಪ್ರೀತಿಯಾಗಿದ್ದು, ಇದಕ್ಕೆ ಈ ಭೂಮಿಯಲ್ಲಿ ಸಾಟಿಯಾದುದು ಯಾವುದೂ ಇಲ್ಲ.
ಉತ್ತಮ ಶಿಕ್ಷಣವನ್ನು ನಾವು ಶಾಲಾ- ಕಾಲೇಜುಗಳಲ್ಲಿ ಪಡೆದರೂ, ಜೀವನವನ್ನು ಎದುರಿಸುವ ಶಿಕ್ಷಣವನ್ನು ಮಾತ್ರ ನಮ್ಮ ತಂದೆ ತಾಯಿಯರು ನೀಡುತ್ತಾರೆ. ಈ ತರಬೇತಿಯನ್ನು ಯಾವುದೇ ಶಾಲೆ ನೀಡಲು ಸಾಧ್ಯವಿಲ್ಲ.
ಉತ್ತಮ ಸಂಸ್ಕಾರ, ವಿನಯ, ನಡೆ-ನುಡಿ, ಹಿರಿಯರಿಗೆ ನೀಡುವ ಗೌರವ, ಕಷ್ಟಕ್ಕೆ ನೆರವಾಗುವ ಗುಣ, ಎದೆಗುಂದದೇ ಮುನ್ನುಗ್ಗಲು, ಸೋತಾಗ ಮತ್ತೆ ಎದುರಿಸಲು, ಬಿzಗ ಎದ್ದೇಳಲು, ಜಗತ್ತಿನ ಕೃತ್ರಿಮತೆಗಳನ್ನು ಅರಿಯಲು, ನಯವಂಚನೆ ಮೊದಲಾದವುಗಳನ್ನು ಅರಿಯುವ ಮೊದಲಾದ ನೂರಾರು ವಿದ್ಯೆಗಳನ್ನು ಪಾಲಕರ ಹೊರತಾಗಿ ಯಾವುದೇ ಶಾಲೆಯಲ್ಲಿ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಮಕ್ಕಳಿಗೆ ತಂದೆ -ತಾಯಿಯರೇ ಜೀವನದ ಅತ್ಯುತ್ತಮ ಶಿಕ್ಷಕರಾಗಿzರೆ.
- ಮುರುಳೀಧರ್ ಹೆಚ್ ಸಿ